ಕನ್ನಡ ಟೀಚರ್.. ಬೆಂಗಳೂರಿನ ಈ ಆಟೋ ಡ್ರೈವರ್! ಇಲ್ಲಿದೆ ವೈರಲ್ ಸುದ್ದಿ

Story Highlights

ಬೆಂಗಳೂರಿನ ಆಟೋ ಚಾಲಕ ಅಜ್ಮಲ್ ಸುಲ್ತಾನ್. ಆಟೋದಲ್ಲಿ ಕೆಲ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ, ಇದು ಇಂಗ್ಲಿಷ್ ಮತ್ತು ಕನ್ನಡ ಪದಗಳ ಅರ್ಥಗಳನ್ನು ಒಳಗೊಂಡಿದೆ.

ಬೆಂಗಳೂರು (Bengaluru) : ಇಲ್ಲಿನ ಕೆಲವು ಲಕ್ಷ ಜನರಿಗೆ ಕನ್ನಡ ಗೊತ್ತಿಲ್ಲ. ಅದೊಂದು ದೊಡ್ಡ ಅಚ್ಚರಿ. ಅವರಲ್ಲಿ ಹೆಚ್ಚಿನವರು ಉತ್ತರದ ರಾಜ್ಯಗಳಿಂದ ಬಂದವರು. ಅಂತಹವರಿಗೆ ಸ್ವಲ್ಪವಾದ್ರೂ ಕನ್ನಡ ಕಸ್ತೂರಿಯ ಹಿರಿಮೆಯನ್ನು ವಿವರಿಸಲು ಆಟೋ ಚಾಲಕರೊಬ್ಬರು (auto driver) ಮುಂದಾಗಿದ್ದಾರೆ.

ಆತ ಬೆಂಗಳೂರಿನ ಆಟೋ ಚಾಲಕ ಅಜ್ಮಲ್ ಸುಲ್ತಾನ್. ಆಟೋದಲ್ಲಿ ಕೆಲ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ, ಇದು ಇಂಗ್ಲಿಷ್ ಮತ್ತು ಕನ್ನಡ ಪದಗಳ ಅರ್ಥಗಳನ್ನು ಒಳಗೊಂಡಿದೆ.

ಕನ್ನಡವನ್ನು (Kannada Language) ಯಾರು ಬೇಕಾದರೂ ಸುಲಭವಾಗಿ ಕಲಿಯಬಹುದು, ಎನ್ನುವ ವಾಕ್ಯದೊಂದಿಗೆ, ನಮಸ್ಕಾರ ಸರ್ – ಹಲೋ ಸರ್, ಎಲ್ಲಿದ್ದೀರಿ? ಎಷ್ಟು ಆಯಿತು, ಯುಪಿಐ ಇದಿಯಾ, ಸೇರಿದಂತೆ ಇಂತಹ  ಸಣ್ಣ ಪದಗಳ ಪೋಸ್ಟರ್‌ಗಳಿವೆ.

ಈತನ ಕೆಲಸದಿಂದ ಕನ್ನಡವನ್ನು ಬಹಳ ಸರಳವಾಗಿ ಅರ್ಥೈಸಿಕೊಳ್ಳಬಹುದು. ಕನ್ನಡೇತರರು ಆಟೋ ಹತ್ತಿದಾಗ ಅವರು ಗುರಿ ಮುಟ್ಟುವವರೆಗೂ ಒಂದಿಷ್ಟು ಕನ್ನಡ ಪದಗಳನ್ನು ಹೇಳಿಕೊಡುವ ಪ್ರಯತ್ನ ಮಾಡಿದ್ದಾರೆ. ಅವರ ಈ ಕೆಲಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ.

Bengaluru auto driver idea to teach Kannada during ride

Related Stories