ಬೆಂಗಳೂರು ಟು ಅಯೋಧ್ಯೆ ವಿಮಾನಕ್ಕೆ ಬಾಂಬ್​ ಬೆದರಿಕೆ; ತುರ್ತು ಭೂಸ್ಪರ್ಶ

Story Highlights

ಬೆಂಗಳೂರು ಟು ಅಯೋಧ್ಯೆ (Bengaluru to Ayodhya Flight) ನಡುವೆ ಸಂಚರಿಸುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ನಂತರ ವಿಮಾನ ತುರ್ತು ಭೂಸ್ಪರ್ಶ ಮಾಡಲಾಯಿತು

ಬೆಂಗಳೂರು ಟು ಅಯೋಧ್ಯೆ (Bengaluru to Ayodhya Flight) ನಡುವೆ ಸಂಚರಿಸುತ್ತಿರುವ ವಿಮಾನಕ್ಕೆ ಬಾಂಬ್ ಬೆದರಿಕೆ (bomb threat) ಕುರಿತು ಮಾಹಿತಿ ದೊರಕಿದ ನಂತರ, ಅಯೋಧ್ಯೆ ವಾಲ್ಮೀಕಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ (Valmiki International Airport) ಎಮರ್ಜೆನ್ಸಿ ಲ್ಯಾಂಡಿಂಗ್ (emergency landing) ಮಾಡಲಾಗಿದೆ.

ಆಕಾಶ ಏರ್‌ಲೈನ್ಸ್ (Akasa Airlines) ವಿಮಾನವು 173 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಮಧ್ಯಾಹ್ನ 1:30ರ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ, ಇದನ್ನು ತಿಳಿದು ತಕ್ಷಣವೇ ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಆದೇಶಿಸಲಾಯಿತು ಎಂದು ಅಯೋಧ್ಯೆ ಏರ್‌ಪೋರ್ಟ್ ನಿರ್ದೇಶಕ ವಿನೋದ್ ಕುಮಾರ್ (Vinod Kumar) ಮಾಧ್ಯಮಗಳಿಗೆ (media) ಪ್ರತಿಕ್ರಿಯಿಸಿದ್ದಾರೆ.

ಅಯೋಧ್ಯೆ ಏರ್‌ಪೋರ್ಟ್ ನಿರ್ದೇಶಕವು ಪ್ರಸ್ತುತ ವಿಮಾನದಲ್ಲಿ ಪರಿಶೀಲನೆಯ ನಂತರ ಯಾವುದೇ ಬಾಂಬ್ (bomb) ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲಗೇಜ್ ಮತ್ತು ವಿಮಾನವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ, ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು (suspicious items) ಕಂಡುಬಂದಿಲ್ಲ. ಇದು ಹುಸಿಬಾಂಬ್ ಬೆದರಿಕೆ ಎಂದು ಅವರು ಹೇಳಿದರು.

ಹಿಂದಿನ ದಿನವೂ ಇದೇ ರೀತಿಯ ಹುಸಿಬಾಂಬ್ ಕರೆ ಬಂದಿತ್ತು ಎಂಬುದನ್ನು ಅವರು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ, ಎಲ್ಲಾ ಪ್ರಯಾಣಿಕರು  ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.

Bengaluru Ayodhya Flight Makes Emergency Landing after Bomb Threat

Related Stories