ಬೆಂಗಳೂರು ಮಹಿಳೆಯರಿಗೆ ಸೇಫ್ ಸಿಟಿ; ಕಮಿಷನರ್ ಬಿ.ದಯಾನಂದ್
ಬೆಂಗಳೂರು ಮಹಿಳೆಯರಿಗೆ ಸೇಫ್ ಸಿಟಿ ಆಗಿದೆಯೆ? ಹೇಗೆ ಭರವಸೆ ನೀಡುತ್ತೀರಾ?" ಎಂಬ ಪ್ರಶ್ನೆಗೆ ಕಮಿಷನರ್ ಬಿ.ದಯಾನಂದ್ ಅವರು ಉತ್ತರಿಸಿದರು
ಬೆಂಗಳೂರು (Bengaluru): “ಸಿಲಿಕಾನ್ ಸಿಟಿ” ಎಂದೇ ಪ್ರಸಿದ್ಧವಾದ ಬೆಂಗಳೂರು, ಇಲ್ಲಿಯ ಮಹಿಳೆಯರು ಸೇರಿದಂತೆ ಎಲ್ಲರಿಗೂ ಸುರಕ್ಷಿತವಾದ ಸ್ಥಳವಾಗಿದೆ, ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಹೇಳಿದರು.
ಕನಕಪುರ ರಸ್ತೆಯಲ್ಲಿರುವ Prestige ಶ್ರೀಹರಿ ಖೋಡೆ ಸೆಂಟರ್ ಆಫ್ ಪಫಾರ್ಮಿಂಗ್ ಆರ್ಟ್ಸ್ನಲ್ಲಿ ನಡೆದ ಮಹಿಳಾ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಸುರಕ್ಷತೆ ಬಗ್ಗೆ ಭರವಸೆ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವು ವಿದ್ಯಾರ್ಥಿನಿಯರು, “ಬೆಂಗಳೂರು ಮಹಿಳೆಯರಿಗೆ ಸೇಫ್ ಸಿಟಿ ಆಗಿದೆಯೆ? ಹೇಗೆ ಭರವಸೆ ನೀಡುತ್ತೀರಾ?” ಎಂಬ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, “ಬೆಂಗಳೂರು ಯಾವಾಗಲೂ ಮಹಿಳೆಯರು ಹಾಗೂ ಎಲ್ಲರಿಗೂ ಸುರಕ್ಷಿತ ನಗರವಾಗಿದೆ, ಇಲ್ಲಿ ಯಾವುದೇ ಭರವಸೆ ಅಗತ್ಯವಿಲ್ಲ,” ಎಂದು ಹೇಳಿದರು.
ಅವರು, ನಗರ ಪೊಲೀಸರು ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. “ಪಿಕ್ ಹೊಯ್ಸಳಗಳು, ಸಾಮಾನ್ಯ ಹೊಯ್ಸಳಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. 7-8 ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕಾಗಮಿಸುತ್ತಾರೆ,” ಎಂದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ, 112 ಪೊಲೀಸರ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ, ಮಹಿಳಾ ಸುರಕ್ಷತೆಗಾಗಿ ಹಮ್ಮಿಕೊಂಡಿರುವ ಹೊಸ ಆ್ಯಪ್ ಮತ್ತು ಇನ್ನೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ, ಮಹಿಳಾ ಸುರಕ್ಷತೆ ಬಗ್ಗೆ ಸಂವಾದವೂ ನಡೆಯಿತು.
Bengaluru City is Safe for Women says commissioner