ಬೆಂಗಳೂರಿನಲ್ಲಿ ಅನಧಿಕೃತ ಮನೆಗಳ ತೆರವು: ಜೆಸಿಬಿ ಕಾರ್ಯಾಚರಣೆ, 190ಕ್ಕೂ ಹೆಚ್ಚು ಮನೆಗಳು ಧ್ವಂಸ
ಬೆಂಗಳೂರು ನಗರದ ಶ್ರೀನಿವಾಸಪುರ ಕೋಗಿಲು ಲೇಔಟ್‌ನಲ್ಲಿ ಪಾಲಿಕೆ ಜಾಗದ ಒತ್ತುವರಿ ತೆರವುಗೆ ಜಿಲ್ಲಾಡಳಿತ ಮುಂದಾಗಿ, ಭದ್ರತೆಯ ನಡುವೆ ಜೆಸಿಬಿಗಳ ಮೂಲಕ 190ಕ್ಕೂ ಹೆಚ್ಚು ಅನಧಿಕೃತ ಮನೆಗಳನ್ನು ನೆಲಸಮಗೊಳಿಸಿದೆ.
- ಬೆಂಗಳೂರು ಅನಧಿಕೃತ ಮನೆಗಳ ಒತ್ತುವರಿ ತೆರವು
- ಜೆಸಿಬಿ ಕಾರ್ಯಾಚರಣೆ, 190ಕ್ಕೂ ಹೆಚ್ಚು ಮನೆಗಳ ಧ್ವಂಸ
- ಗೋಮಾಳ ಭೂಮಿಯಲ್ಲಿ ಅಕ್ರಮ ನಿರ್ಮಾಣ ಪತ್ತೆ
ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಅನಧಿಕೃತ ಕಟ್ಟಡಗಳ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಂದು ಬೆಳ್ಳಂಬೆಳಗ್ಗೆ ಶ್ರೀನಿವಾಸಪುರದ ಕೋಗಿಲು ಲೇಔಟ್‌ನಲ್ಲಿ (Kogilu Layout) ಜೆಸಿಬಿ ಯಂತ್ರಗಳು ಕಾರ್ಯಾರಂಭಿಸಿ, ಅಕ್ರಮವಾಗಿ ನಿರ್ಮಿಸಲಾದ ಮನೆಗಳನ್ನು (Bengaluru Encroachment Drive) ತೆರವುಗೊಳಿಸಲಾಯಿತು.
ಸುಮಾರು 14 ಎಕರೆ ಪಾಲಿಕೆ ಸ್ವತ್ತಿನ ಮೇಲೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ 190ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಲಾಗಿದೆ.
ಈ ಪ್ರದೇಶವು ಗೋಮಾಳ ಜಾಗವಾಗಿದ್ದು, ಹಿಂದೆ ನಗರ ಪಾಲಿಕೆಗೆ ವರ್ಗಾವಣೆ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಯಾವುದೇ ಅನುಮತಿ ಇಲ್ಲದೆ ಮನೆ ನಿರ್ಮಾಣವಾಗಿರುವುದು ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ.
ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ
ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ 6 ಜೆಸಿಬಿ ಯಂತ್ರಗಳು ಹಾಗೂ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮನೆ ಕಳೆದುಕೊಂಡ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವರು ಮುಂಚಿತ ಸೂಚನೆ ನೀಡದೆ ಮನೆಗಳನ್ನು ಕೆಡವಲಾಗಿದೆ ಎಂದು ಆರೋಪಿಸಿದ್ದು, ಜಿಲ್ಲಾಡಳಿತ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದರು. ಆದರೂ ಪಾಲಿಕೆ ಜಾಗದ ರಕ್ಷಣೆಗೆ ಕ್ರಮ ಅನಿವಾರ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಮುಂದಿನ ದಿನಗಳಲ್ಲೂ ಅನಧಿಕೃತ ಕಟ್ಟಡಗಳ ವಿರುದ್ಧ ಇದೇ ರೀತಿಯ ಕಠಿಣ ಕ್ರಮ ಮುಂದುವರಿಯಲಿದೆ ಎಂಬ ಸೂಚನೆ ಜಿಲ್ಲಾಡಳಿತದಿಂದ ಲಭಿಸಿದೆ.
ಕರ್ನಾಟಕ ವಾತಾವರಣ ಏರುಪೇರು! ಒಂದೆಡೆ ಮಳೆ, ಮತ್ತೊಂದೆಡೆ ಚಳಿ; ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಮುನ್ಸೂಚನೆ
Read the story
ದಿನ ಭವಿಷ್ಯ 30 ಅಕ್ಟೋಬರ್ 2026, ಶುಕ್ರವಾರ
Read the story
ಕರ್ನಾಟಕ ರೈತರಿಗೆ ಮೊದಲ ಕಂತು 2500 ರೂ ಬರ ಪರಿಹಾರ ಬಿಡುಗಡೆ! ಅರ್ಜಿ ಸಲ್ಲಿಸಬೇಕಾ? ಇಲ್ಲಿದೆ ಮಾಹಿತಿ
Read the story
ಗೃಹಲಕ್ಷ್ಮಿ ಯೋಜನೆಯ ಹೊಸ ಲಿಸ್ಟ್ ಸಿದ್ದ; ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಹಣ!
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
10 ಲಕ್ಷ ಮಂದಿ ರೈತರಿಗೆ ಪಿಎಂ ಕಿಸಾನ್ ಯೋಜನೆ ಹಣ ಸ್ಥಗಿತ! ಕೇಂದ್ರದ ಶಾಕಿಂಗ್ ನಿರ್ಧಾರ
Read the story
ಕರ್ನಾಟಕ SSLC ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ KSEAB ಮಹತ್ವದ ಸೂಚನೆ! ತಪ್ಪದೇ ಗಮನಿಸಿ
Read the story



