Bengaluru to Hyderabad: ಬೆಂಗಳೂರು ಟು ಹೈದರಾಬಾದ್ ವಂದೇ ಭಾರತ್; ಸಮಯ, ಮಾರ್ಗ, ಟಿಕೆಟ್ ದರ
ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ವೇಗದ ಪ್ರಯಾಣಕ್ಕೆ ಅವಕಾಶ ನೀಡಿದ್ದು ಸಮಯ ಉಳಿತಾಯ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ

- ಬೆಂಗಳೂರು–ಹೈದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್
- ಯಶವಂತಪುರ–ಕಾಚೆಗುಡ ನೇರ ಸಂಪರ್ಕ
- ವಂದೇ ಭಾರತ್ ಟಿಕೆಟ್ ದರ ಮತ್ತು ಸಮಯ ವಿವರ
ಬೆಂಗಳೂರು ರೈಲು ಹಬ್ ಆಗುತ್ತಿರುವ ನಗರ
ಬೆಂಗಳೂರು (Bengaluru): ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಆರಂಭದ ಬಳಿಕ ಭಾರತೀಯ ರೈಲ್ವೇಯ ಚಿತ್ರಣವೇ ಬದಲಾಗಿದೆ. ವೇಗ, ಆರಾಮ ಮತ್ತು ಸಮಯ ಉಳಿತಾಯದ ಕಾರಣ ಈ ರೈಲುಗಳು ಪ್ರಯಾಣಿಕರ ಮೊದಲ ಆಯ್ಕೆಯಾಗುತ್ತಿವೆ. ಅದರ ಭಾಗವಾಗಿ ಬೆಂಗಳೂರು ಇದೀಗ ವಂದೇ ಭಾರತ್ ರೈಲುಗಳ ಪ್ರಮುಖ ಹಬ್ ಆಗಿ ರೂಪುಗೊಳ್ಳುತ್ತಿದೆ.
ಬೆಂಗಳೂರು–ಹೈದರಾಬಾದ್ ನೇರ ವಂದೇ ಭಾರತ್
ಬೆಂಗಳೂರು (ಯಶವಂತಪುರ ಜಂಕ್ಷನ್) ಮತ್ತು ಹೈದರಾಬಾದ್ (ಕಾಚೆಗುಡ) ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Bengaluru–Hyderabad Vande Bharat Express) ಸಂಖ್ಯೆ 20703/20704. ಈ ರೈಲು ವಾರದಲ್ಲಿ ಬುಧವಾರ ಹೊರತುಪಡಿಸಿ ಆರು ದಿನಗಳು ಕಾರ್ಯನಿರ್ವಹಿಸುತ್ತದೆ. ಒಟ್ಟು ಪ್ರಯಾಣ ಸಮಯ ಸುಮಾರು 8 ಗಂಟೆ 15 ನಿಮಿಷಗಳು ಮಾತ್ರವಾಗಿದ್ದು, ಸಾಮಾನ್ಯ ರೈಲುಗಳಿಗಿಂತ ಸಾಕಷ್ಟು ವೇಗವಾಗಿದೆ.
ಇದನ್ನೂ ಓದಿ: ಬೆಂಗಳೂರು ಟು ತಮಿಳುನಾಡಿಗೆ ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ಆರಂಭ
ವೇಳಾಪಟ್ಟಿ ವಿವರ
ಯಶವಂತಪುರ → ಕಾಚೆಗುಡ (20704):
- ಹೊರಡುವ ಸಮಯ: ಮಧ್ಯಾಹ್ನ 2:45
- ತಲುಪುವ ಸಮಯ: ರಾತ್ರಿ 11:15
ಕಾಚೆಗುಡ → ಯಶವಂತಪುರ (20703):
- ಮಧ್ಯಂತರವಾಗಿ ಹಿಂದೂಪುರದಲ್ಲಿ ನಿಲುಗಡೆ
- ಆಗಮನ: ಮಧ್ಯಾಹ್ನ 12:08
- ನಿರ್ಗಮನ: ಮಧ್ಯಾಹ್ನ 12:10
ಹಿಂದಿರುಗುವ ರೈಲು ಹಿಂದೂಪುರಕ್ಕೆ ಮಧ್ಯಾಹ್ನ 3:48ಕ್ಕೆ ಆಗಮಿಸಿ 3:50ಕ್ಕೆ ಮುಂದುವರೆಯುತ್ತದೆ.
ಮಾರ್ಗ ಮತ್ತು ನಿಲ್ದಾಣಗಳು
ಈ ವಂದೇ ಭಾರತ್ ರೈಲು ಸುಮಾರು 610 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಪ್ರಮುಖ ನಿಲ್ದಾಣಗಳು:
- ಹಿಂದೂಪುರ
- ಧರ್ಮಾವರಂ ಜಂಕ್ಷನ್
- ಅನಂತಪುರ
- ಕರ್ನೂಲ್ ಸಿಟಿ
- ಮಹಬೂಬ್ನಗರ
- ಕಾಚೆಗುಡ
ಯಶವಂತಪುರದಿಂದ ಹೊರಟು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ ಪ್ರದೇಶ, ಆಂಧ್ರ ಪ್ರದೇಶದ ಪ್ರಮುಖ ಜಿಲ್ಲೆಗಳ ಮೂಲಕ ಸಂಚರಿಸಿ ತೆಲಂಗಾಣ ರಾಜಧಾನಿಯನ್ನು ತಲುಪುತ್ತದೆ.
ಟಿಕೆಟ್ ದರ ಎಷ್ಟು?
ಬೆಂಗಳೂರು–ಹೈದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ನ ಅಂದಾಜು ಟಿಕೆಟ್ ದರಗಳು:
- ಎಸಿ ಚೇರ್ ಕಾರ್ (CC): ₹1,565
- ಎಕ್ಸಿಕ್ಯುಟಿವ್ ಕ್ಲಾಸ್ (EC): ₹2,890
ಬುಕಿಂಗ್ ಸಮಯ ಮತ್ತು ಲಭ್ಯತೆಯ ಆಧಾರದಲ್ಲಿ ದರಗಳಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು. ಟಿಕೆಟ್ಗಳನ್ನು IRCTC ಅಧಿಕೃತ ವೆಬ್ಸೈಟ್ ಅಥವಾ ಆಪ್ ಮೂಲಕ ಬುಕ್ ಮಾಡಬಹುದು. ಈ ರೈಲಿನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಸೌಲಭ್ಯ ಲಭ್ಯವಿಲ್ಲ.



