ಬೆಂಗಳೂರು ನಕಲಿ ಶ್ಯೂರಿಟಿ ಗ್ಯಾಂಗ್ ಬಂಧನ

ಶ್ಯೂರಿಟಿ ಜತೆಗೆ ನಕಲಿ ಜನರನ್ನು ಕಳುಹಿಸುವ ಪುಂಡರು ನಕಲಿ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ದಾಖಲೆಗಳನ್ನು ನೀಡಿ ಜಾಮೀನು ಕೊಡಿಸುತ್ತಿದ್ದರು.

ಬೆಂಗಳೂರು (Bengaluru): ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ನೀಡಲು ನಕಲಿ ಶ್ಯೂರಿಟಿ ನೀಡುತ್ತಿದ್ದ ತಂಡವನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಕೆಲವೇ ಸೆಕೆಂಡುಗಳಲ್ಲಿ ಸಿದ್ಧವಾಗುತ್ತಿತ್ತು.

ಜಾಮೀನು ಮಂಜೂರು ಮಾಡಿದ ನಂತರ, ಜಾಮೀನು ನೀಡಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿತ್ತು. ಶ್ಯೂರಿಟಿ ಜತೆಗೆ ನಕಲಿ ಜನರನ್ನು ಕಳುಹಿಸುವ ಪುಂಡರು ನಕಲಿ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ದಾಖಲೆಗಳನ್ನು (Bank Details) ನೀಡಿ ಜಾಮೀನು ಕೊಡಿಸುತ್ತಿದ್ದರು.

ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಮಂಜುನಾಥ್ ಜೊತೆಗೆ ಸಂತೋಷ್, ಆನಂದ್, ಸ್ವರೂಪ್, ಇಂದ್ರೇಶ್, ಪುನೀತ್, ಮನೋಜ್, ಕಲಂದರ್, ವಿನಾಯಕ್, ಕೆಂಪೇಗೌಡ, ಮಂಜುನಾಥ್, ಆನಂದ್ ಮತ್ತು ದೊಡ್ಡಯ್ಯ ಎಂಬ 12 ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು ನಕಲಿ ಶ್ಯೂರಿಟಿ ಗ್ಯಾಂಗ್ ಬಂಧನ

ಆರೋಪಿಗಳಿಂದ 43 ಪಡಿತರ ಚೀಟಿಗಳು, 139 ಆಧಾರ್ ಕಾರ್ಡ್‌ಗಳು, 16 ಪ್ಯಾನ್ ಕಾರ್ಡ್‌ಗಳು ವಶಪಡಿಸಿಕೊಳ್ಳಲಾಗಿದೆ. ಫೋಟೊಶಾಪ್ ಮೂಲಕ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿ ಜಾಮೀನು ಕೊಡಿಸುತ್ತಿದ್ದರು. ಇದಕ್ಕಾಗಿ ರೂ.15 ಸಾವಿರದಿಂದ ರೂ.20 ಸಾವಿರ ವಸೂಲಿ ಮಾಡುತ್ತಿದ್ದರು.

Bengaluru police have busted a gang involved in providing fake sureties for Bail

English Summary
Related Stories