ಬೆಂಗಳೂರು ವಿದ್ಯುತ್ ವ್ಯತ್ಯಯ: ಮೂರು ದಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್
Bengaluru Power Cut: ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಜುಲೈ 19ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ನಿಗದಿತ ಸಮಯಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬೆಂಗಳೂರು (Bengaluru Power Cut): ನಗರದಲ್ಲಿ ಬೆಸ್ಕಾಂ (BESCOM) ಹಾಗೂ ಕೆಪಿಟಿಸಿಎಲ್ (KPTCL) ವತಿಯಿಂದ ನಡೆಯುತ್ತಿರುವ ನಿರ್ವಹಣಾ ಕಾಮಗಾರಿಗಳ ಕಾರಣ ಭಾನುವಾರದಿಂದ ಮಂಗಳವಾರದವರೆಗೆ ವಿವಿಧ ಪ್ರದೇಶಗಳಲ್ಲಿ ನಿಗದಿತ ಅವಧಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಭಾನುವಾರ (ಜುಲೈ 19):
ಸೂರ್ಯ ಸಿಟಿ ಫೇಸ್-1, ಮರಸೂರು, ನಾಗನಾಯಕನಹಳ್ಳಿ, ಇಗ್ಗಲೂರು, ಸರ್ಜಾಪುರ, ಇಟ್ಟಗನೂರು, ಕಾಡ ಅಗ್ರಹಾರ, ಸೋಂಪುರ ಗೇಟ್, ಬಿ. ಹೊಸಹಳ್ಳಿ, ದಾಸನಪುರ, ಕಂಬ್ಳಿಪುರ, ಹರೋಹಳ್ಳಿ, ಬೊಮ್ಮಸಂದ್ರ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸೋಮವಾರ (ಜುಲೈ 20):
ಎಲ್ & ಟಿ ಅಪಾರ್ಟ್‌ಮೆಂಟ್, ಯಶೋದನಗರ, ಜಕ್ಕೂರು ಪ್ಲಾಂಟೇಶನ್, ಸೆಂಚುರಿ ಅಪಾರ್ಟ್‌ಮೆಂಟ್, ಬ್ಯಾಟರಾಯನಪುರ, ಸ್ಪಾರ್ಕಲ್ ಒನ್ ಮಾಲ್, ಅಮೃತಹಳ್ಳಿ, ಸಹಕಾರನಗರ ಜಿ ಬ್ಲಾಕ್, ಶಬರಿನಗರ, ಕೆನರಾ ಬ್ಯಾಂಕ್ ಲೇಔಟ್, ಧನಲಕ್ಷ್ಮಿ ಲೇಔಟ್, ತಿಂಡ್ಲು ಮುಖ್ಯರಸ್ತೆ, ಸರ್ ಎಂ.ವಿ. ಲೇಔಟ್, ಫಾರ್ಚೂನಾ ಸೆಂಟರ್ ಪಾರ್ಕ್, ಸಪ್ತಗಿರಿ ಲೇಔಟ್, ಗುರುದರ್ಶನ ಲೇಔಟ್, ವೆಂಕಟಸ್ವಾಮಪ್ಪ ಲೇಔಟ್, ನಂಜಪ್ಪ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ.
ಇದೇ ದಿನ ರವೀಂದ್ರನಗರ, ಪ್ರಸನ್ನತ್ ನಗರ, ಸಂತೋಷ್ ನಗರ, ಏರ್‌ಫೋರ್ಸ್ ಜಾಲಹಳ್ಳಿ ವೆಸ್ಟ್, ವೈಷ್ಣವಿ ನಕ್ಷತ್ರ ಅಪಾರ್ಟ್‌ಮೆಂಟ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ತ್ರಿವೇಣಿ, ಕೃಷ್ಣ ಫ್ಯಾಬ್ರಿಕೇಷನ್ಸ್, ಜೆಮಿನಿ ಇಂಡಸ್ಟ್ರೀಸ್, ರವಿ-ಕಿರ್ಲೋಸ್ಕರ್ ಆಸ್ಪತ್ರೆ, ವಿಪ್ರೋ ವೆಲ್‌ಕಾಸ್ಟ್, ಐಟಿಸಿ, ವೋಲ್ವೋ, ಹಿಟಾಚಿ ಇಂಡಸ್ಟ್ರೀಸ್, ಗೀತಾ ಟಿಂಬರ್ಸ್ ಸೇರಿದಂತೆ ಹಲವು ಕೈಗಾರಿಕಾ ಮತ್ತು ವಸತಿ ಪ್ರದೇಶಗಳಲ್ಲೂ ನಿರ್ವಹಣಾ ಕಾರ್ಯದ ಕಾರಣ ವಿದ್ಯುತ್ ವ್ಯತ್ಯಯವಾಗಲಿದೆ.
ಮಂಗಳವಾರ (ಜುಲೈ 21):
ಗಂಗಾನಗರ, ವೀವರ್ಸ್ ಕಾಲೋನಿ, ಸಿಬಿಐ ಕ್ವಾರ್ಟರ್ಸ್, ಆರ್‌ಬಿಐ ಕಾಲೋನಿ, ಯುಎಎಸ್ ಕ್ಯಾಂಪಸ್, ದಿನ್ನೂರು ಮುಖ್ಯರಸ್ತೆ, ಆರ್.ಟಿ.ನಗರ, ಎಚ್‌ಎಂಟಿ ಬ್ಲಾಕ್, ಚಾಮುಂಡಿನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ನೃಪತುಂಗ ಎಕ್ಸ್‌ಟೆನ್ಷನ್, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ಕುವೆಂಪುನಗರ, ನೇತಾಜಿ ನಗರ, ಸಂಜಯನಗರ, ಎಇಸಿಎಸ್ ಲೇಔಟ್, ಗೆದ್ದಲಹಳ್ಳಿ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, ಅಮರಜ್ಯೋತಿ ಲೇಔಟ್, ಸನ್‌ರೈಸ್ ಕಾಲೋನಿ, ಮೈತ್ರಿ ಬಜಾರ್, ಗುಡ್ಡದಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ನಿರ್ವಹಣಾ ಕಾಮಗಾರಿ ವೇಳೆಯಲ್ಲಿ ವಿದ್ಯುತ್ ವ್ಯತ್ಯಯವಾಗುವ ಕಾರಣ ಮನೆ, ಕಚೇರಿ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
More:



