Bengaluru: ಬೆಂಗಳೂರು ಪವರ್ ಕಟ್, ಫೆ.14ರಂದು ಶನಿವಾರ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು ನಗರದಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಫೆಬ್ರವರಿ 14ರಂದು ಬೆಳಿಗ್ಗೆ 10ರಿಂದ ಸಂಜೆವರೆಗೆ ಜಾಲಹಳ್ಳಿ, ದೊಮ್ಮಲೂರು, ಮೈಸೂರು ರಸ್ತೆ, ನೃಪತುಂಗ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
Bengaluru Power Cut: ಬೆಂಗಳೂರು ನಗರದ ವಿದ್ಯುತ್ ಜಾಲವನ್ನು ಬಲಪಡಿಸುವ ಉದ್ದೇಶದಿಂದ ಬೆಸ್ಕಾಂ (BESCOM) ವ್ಯಾಪಕ ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೆಲ ಫೀಡರ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿರುವುದರಿಂದ ಫೆಬ್ರವರಿ 14ರಂದು ಹಲವೆಡೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಸಾರ್ವಜನಿಕರು ಅಗತ್ಯ ಕೆಲಸಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
ಜಾಲಹಳ್ಳಿ ಭಾಗ
ಡಿಬಿ ಸಂದ್ರ 2ನೇ ಮತ್ತು 4ನೇ ಬ್ಲಾಕ್, ಜೆಬಿ ಕಾವಲ್ ಟ್ರೀ ಪಾರ್ಕ್, ಗಂಗಮ್ಮ ಸರ್ಕಲ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ–ದಕ್ಷಿಣ ಕಾಲೋನಿ, ಬಾಹುಬಲಿ ನಗರ, ರಾಮಚಂದ್ರಾಪುರ, ಎಚ್ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್, ಚಾಮುಂಡೇಶ್ವರಿ ಲೇಔಟ್ ಸೇರಿದಂತೆ ಹಲವು ನಿವಾಸಿ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಇರದು.
ದೊಮ್ಮಲೂರು – HAL ವಲಯ
ದೊಮ್ಮಲೂರು 2ನೇ ಹಂತ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, HAL 2ನೇ ಹಂತ (6ನೇ ಮೇನ್ ವರೆಗೆ), ESI ಆಸ್ಪತ್ರೆ ಸುತ್ತಮುತ್ತ, 100 ಅಡಿ ರಸ್ತೆ, ಟೆಕ್ ಪಾರ್ಕ್ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಪವರ್ ಕಟ್ ಇರಲಿದೆ.
ಮೈಸೂರು ರಸ್ತೆ ಭಾಗ
ಶಾಮಣ್ಣ ಗಾರ್ಡನ್, ಮಂಜುನಾಥ ನಗರ, ಪೈಪ್ಲೈನ್ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ನ್ಯೂ ಗುಡ್ಡದಹಳ್ಳಿ ಮತ್ತು ಕುವೆಂಪು ನಗರ ನಿವಾಸಿಗಳು ಸಂಜೆವರೆಗೆ ವಿದ್ಯುತ್ ವ್ಯತ್ಯಯ ಎದುರಿಸಬೇಕಾಗುತ್ತದೆ.
ನೃಪತುಂಗ ರಸ್ತೆ – ಸಿಟಿ ಸೆಂಟರ್
ಕುಬ್ಬನ್ಪೇಟೆ, ಆರ್ಬಿಐ ಕಚೇರಿ ಸುತ್ತ, ಯುವಿಸಿಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಸೇಂಟ್ ಮಾರ್ತಾ ಆಸ್ಪತ್ರೆ, ನಾಗರ್ತಪೇಟೆ, ಕೆಜಿ ರಸ್ತೆ, ಎಸ್ಪಿ ರಸ್ತೆ ಸೇರಿದಂತೆ ವ್ಯಾಪಾರಿಕ ವಲಯಗಳಲ್ಲಿಯೂ ಪವರ್ ಕಟ್ ಜಾರಿಯಲ್ಲಿರುತ್ತದೆ.
ಇದೇ ವೇಳೆ ತುಮಕೂರಿನ ಶಿರಾ ಮತ್ತು ಗ್ರಾಮೀಣ ಉಪವಿಭಾಗದಲ್ಲಿಯೂ ನಿರ್ವಹಣಾ ಕಾಮಗಾರಿಗಳ ಕಾರಣದಿಂದ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಬೆಸ್ಕಾಂ ಅಧಿಕಾರಿಗಳು “ಇದು ತಾತ್ಕಾಲಿಕ ತೊಂದರೆ ಮಾತ್ರ, ಮುಂದಿನ ದಿನಗಳಲ್ಲಿ ಉತ್ತಮ ಸೇವೆಗಾಗಿ ಈ ಕೆಲಸ ಅನಿವಾರ್ಯ” ಎಂದು ಸ್ಪಷ್ಟಪಡಿಸಿದ್ದಾರೆ.



