ಸೆ.3ರಂದು ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ! ಫುಲ್ ಡೇ ಪವರ್ ಕಟ್

ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ ಕೇಂದ್ರದ ತುರ್ತು ನಿರ್ವಹಣಾ ಕಾಮಗಾರಿಯಿಂದ ಸೆಪ್ಟೆಂಬರ್ 3ರಂದು ಹಲವು ಪ್ರದೇಶಗಳಲ್ಲಿ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಬೆಂಗಳೂರು (Bengaluru News): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಕೈಗೆತ್ತಿಕೊಂಡಿರುವ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ (Power Cut) ವ್ಯತ್ಯಯವಾಗಲಿದೆ. ಸೆಪ್ಟೆಂಬರ್ 3ರ ಗುರುವಾರ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಈ ವ್ಯತ್ಯಯ ಇರಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

66/11 ಕೆವಿ ಎಚ್‌ಬಿಆರ್‌ ಲೇಔಟ್‌ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುವ ಪ್ರದೇಶಗಳಲ್ಲಿ ನಿರ್ವಹಣಾ (KPTCL Maintenance) ಕೆಲಸ ನಡೆಯಲಿದ್ದು, ಕಾಮಗಾರಿ ಮುಗಿಯುವವರೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮ ಕೈಗೊಂಡು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ

ಎಚ್‌ಬಿಆರ್‌ 2 ಮತ್ತು 3ನೇ ಬ್ಲಾಕ್‌, ಯಾಸಿನ್‌ ನಗರ, ಟೀಚರ್ಸ್‌ ಕಾಲೊನಿ, ಕೃಷ್ಣಾ ರೆಡ್ಡಿ ಲೇಔಟ್‌, ಇನಾಯತ್‌ ನಗರ, ಗಣೇಶ ದೇವಸ್ಥಾನ ರಸ್ತೆ, ಕೆಜಿ ಹಳ್ಳಿ, ವಿನೋಭಾ ನಗರ ಹಾಗೂ ಲಿಡ್ಕರ್‌ ಕಾಲೊನಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದರೊಂದಿಗೆ ಜಲ ವಾಯು ವಿಹಾರ್‌, ಕಮ್ಮನಹಳ್ಳಿ ಮುಖ್ಯ ರಸ್ತೆ, ರಾಮಯ್ಯ ಲೇಔಟ್‌, ಕೀರ್ತಿ ಲೇಔಟ್‌, ಲಿಂಗರಾಜಪುರ ಗ್ರಾಮ, ಜಾನಕಿರಾಮ್‌ ಲೇಔಟ್‌ ಮತ್ತು ಬಿಡಿಎ ಲೇಔಟ್‌ ಸುತ್ತಮುತ್ತಲಿನ ಪ್ರದೇಶಗಳಿಗೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಹೆಣ್ಣೂರು, ನಾಗವಾರ ಭಾಗಕ್ಕೂ ಪವರ್ ಕಟ್

ಗೋವಿಂದಪುರ ಮುಖ್ಯ ರಸ್ತೆ, ರಶಾದ್‌ ನಗರ, ಟೆಲಿಕಾಂ ಲೇಔಟ್‌, ಪ್ರಕೃತಿ ಲೇಔಟ್‌, ಎಚ್‌ಬಿಆರ್‌ ಅರ್ಕಾವತಿ ಲೇಔಟ್‌, ಹೆಣ್ಣೂರು ಮತ್ತು ನಾಗದೇವಿ ಇಂಡಸ್ಟ್ರೀಸ್‌ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ (Electricity Supply) ಇರಲಿದೆ.

ಎಚ್‌ಬಿಆರ್‌ 3ನೇ ಬ್ಲಾಕ್‌, ನೆಹರು ರಸ್ತೆ, ಮಂಗಳಾ ಲೇಔಟ್‌, ಆಯಿಲ್‌ ಮಿಲ್‌ ರಸ್ತೆ, ಎಚ್‌ಬಿಆರ್‌ 5ನೇ ಬ್ಲಾಕ್‌ ಹಾಗೂ 1ನೇ ಬ್ಲಾಕ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೂ ಈ ನಿರ್ವಹಣಾ ಕಾಮಗಾರಿಯ ಪರಿಣಾಮ ಬೀಳಲಿದೆ.

ಥಣಿಸಂದ್ರ ಸೇರಿದಂತೆ ಹಲವು ಬಡಾವಣೆಗಳು

ಬಿಎಂಟಿಸಿ ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ಎಕೆ ಕಾಲೊನಿ, ಸಂಗೊಳ್ಳಿ ರಾಯಣ್ಣ ರಸ್ತೆ, ಇಂದ್ರ ಸ್ಟ್ರೀಟ್‌, ಥಾಮಸ್‌ ರಸ್ತೆ, ಕಮ್ಮನಹಳ್ಳಿ, ಸಿಎಂಆರ್‌ ರಸ್ತೆ ಮತ್ತು ಎಚ್‌ಬಿಆರ್‌ 1ನೇ ಬ್ಲಾಕ್‌ ವ್ಯಾಪ್ತಿಯಲ್ಲೂ ವಿದ್ಯುತ್ ಪೂರೈಕೆ ಇರುವುದಿಲ್ಲ.

ನಾಗವಾರ ಮುಖ್ಯ ರಸ್ತೆ, ಎಚ್‌ಬಿಆರ್‌ ಸಿಗ್ನಲ್‌ ರಸ್ತೆ, ಬಿಬಿಆರ್‌ ನಗರ, ಕಾವೇರಿ ನಗರ, ಶಿರಿಡಿ ಸಾಯಿ ನಗರ, ಬಿಡಿಎಸ್‌ ನಗರ, ನಂದ ಗೋಕುಲ ಲೇಔಟ್‌, ಸಾರಾಯಿಪಾಳ್ಯ, ವಿನಾಯಕ ನಗರ, ಅಶ್ವಥ್‌ ನಗರ, ಅನಾಮಿಕ ಎನ್‌ಕ್ಲೇವ್‌, ಟೆಲಿಕಾಂ ಲೇಔಟ್‌ ಹಾಗೂ ಥಣಿಸಂದ್ರ ಸುತ್ತಮುತ್ತಲಿನ ಪ್ರದೇಶಗಳಿಗೂ ವಿದ್ಯುತ್ ವ್ಯತ್ಯಯವಾಗಲಿದೆ.

ನಿಗದಿತ ಅವಧಿಯಲ್ಲಿ ಅಗತ್ಯ ವಿದ್ಯುತ್ ಬಳಕೆಯ ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವಂತೆ ಹಾಗೂ ತುರ್ತು ಸಂದರ್ಭಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

English Summary

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories