Bangalore News

ಬೆಂಗಳೂರು ಮಳೆ ಅವಾಂತರ, ರಸ್ತೆಯಲ್ಲೇ ಸೊಳ್ಳೆ ಪರದೆ, ಸೀರೆ ಹಾಕಿ ಮೀನು ಹಿಡಿದ ಜನರು

ಬೆಂಗಳೂರು (Bengaluru): ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ (Karnataka Districts) ಮಳೆರಾಯನ (Rain Update) ಆರ್ಭಟ ಮುಂದುವರೆದಿದೆ, ಮುಖ್ಯವಾಗಿ ಬೆಂಗಳೂರು ನಗರದ ಕೆರೆಗಳು (Bengaluru Lake) ತುಂಬಿ ನೀರು ರಸ್ತೆ ಕಡೆಗೆ ಹರಿದು ಬರುತ್ತಿದೆ.

ಹಲವಾರು ಅಪಾರ್ಟ್ಮೆಂಟ್ ಗಳಿಗೆ ನೀರು ನುಗ್ಗಿದ್ದು, ನಗರದಾದ್ಯಂತ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು, ಶಾಲೆಗಳಿಗೆ ರಜೆ ನೀಡಿದ್ದು ಒಂದುಕಡೆ ಆದರೆ ಕೆಲಸಕ್ಕೆ ಹೋಗುವವರ ಪಾಡು ಹೇಳತೀರದು.

ಬೆಂಗಳೂರು ಮಳೆ ಅವಾಂತರ, ರಸ್ತೆಯಲ್ಲೇ ಸೊಳ್ಳೆ ಪರದೆ, ಸೀರೆ ಹಾಕಿ ಮೀನು ಹಿಡಿದ ಜನರು

ರಾತ್ರಿ ಕೂಡ ಮಳೆ ಸುರಿದಿದ್ದು, ನೆನ್ನೆಯ ಮಳೆಗೆ ಹಲವು ಸಮಸ್ಯೆ ಒಂಟಾಗಿತ್ತು

●ಕೋರಮಂಗಲ (Koramangala) ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ಮಳೆ ನೀರು ನುಗ್ಗಿದೆ. ಕ್ರೀಡಾಂಗಣದಲ್ಲಿ ಏಷ್ಯನ್ ನೆಟ್ ಬಾಲ್ ಮಹಿಳಾ ಟೂರ್ನಿ ನಡೆಯುತ್ತಿದೆ. ಪ್ರವಾಹದ ಕಾರಣ, ಚೀನಾ-ತೈಪೆ, ಇರಾಕ್, ಫಿಲಿಪೈನ್ಸ್ ಮತ್ತು ಜಪಾನ್ ನಡುವಿನ ಎರಡು ಪಂದ್ಯಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.

● ಮಾವಳ್ಳಿಯ ಲಾಲ್‌ಬಾಗ್ ಕೆರೆ (Lalbhag Lake) ತುಂಬಿ ಹರಿದಿದ್ದು, ಮೀನುಗಳು (Fish) ಕೊಚ್ಚಿ ಹೋಗಿವೆ. ಕೆಲವರು ಸೊಳ್ಳೆ ಪರದೆ, ಸೀರೆ ಹಾಕಿಕೊಂಡು ಮೀನು ಹಿಡಿದಿದ್ದಾರೆ.

● ಬೆಂಗಳೂರು ಉತ್ತರ ತಾಲೂಕಿನ ಸೀಗೇಹಳ್ಳಿಯಲ್ಲಿ ಮಳೆಯಿಂದಾಗಿ ರಸ್ತೆ ಕಾಣದೇ ಬೈಕ್ ಚಲಾಯಿಸುತ್ತಿದ್ದ ಶ್ರೀನಿವಾಸ್ ಎಂಬವರು ಆಕಸ್ಮಿಕವಾಗಿ ಬೊಲೆರೋ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Bengaluru rain Update, people caught fish on the road

Our Whatsapp Channel is Live Now 👇

Whatsapp Channel

Related Stories