ಬೆಂಗಳೂರು: ಪತ್ನಿಯ ಹತ್ಯೆ ಮಾಡಿ ಆತ್ಮಹತ್ಯೆ ಎಂದು ನಟಿಸಿದ ಪತಿ ಬಂಧನ
ಬೆಂಗಳೂರಿನ ಬಿಟಿಎಮ್ ಲೇಔಟ್‌ನಲ್ಲಿ, ಪತ್ನಿಯ ಮೇಲೆ ಅನುಮಾನದಿಂದ ಆಕೆಯನ್ನು ಕೊಂದು, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಘಟನೆ ನಡೆದಿದೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Publisher: Kannada News Today (Digital Media)
- ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾ ಹತ್ಯೆಗೀಡಾದವರು
- ಪತಿ ಚಿಕ್ಕ ಮುತ್ತುರಾಜು ಹತ್ಯೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ
- ಪೋಲಿಸರಿಗೆ ಮಾಲೀಕ ಮಾಹಿತಿ ನೀಡಿದ ಬಳಿಕ ಆರೋಪಿ ಬಂಧನ
ಬೆಂಗಳೂರು (Bengaluru): ಬಿಟಿಎಮ್ ಲೇಔಟ್ (BTM Layout) ತಾವರೆಕೆರೆಯಲ್ಲಿ ನಡೆದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಶಿಲ್ಪಾ ಆಕಸ್ಮಿಕವಾಗಿ ಸಾವಿಗೀಡಾಗಿಲ್ಲ, ಬದಲಿಗೆ ಪತಿ ಚಿಕ್ಕ ಮುತ್ತುರಾಜು (Chikka Mutturaju) ಆತ್ಮಹತ್ಯೆ ಎಂದು ನಟಿಸುವ ಮೂಲಕ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಶಿಲ್ಪಾ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಸಿಬ್ಬಂದಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು, ಮತ್ತು ಮುತ್ತುರಾಜು ಕೊರಮಂಗಲದ (Koramangala) ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ.

ವೈವಾಹಿಕ ಕಲಹ, ಅನುಮಾನ, ಕೊಲೆ
ಶಿಲ್ಪಾ ಮತ್ತು ಮುತ್ತು ರಾಜು 12 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದರು. ಇವರಿಗೆ 11 ವರ್ಷದ ಮಗಳು ಇದ್ದಾಳೆ, ಆದರೆ ಆಕೆ ಅಜ್ಜಿಯ ಬಳಿ ಇದ್ದಳು. ಇತ್ತೀಚೆಗೆ ಮುತ್ತು ರಾಜು ಪತ್ನಿಯ ಮೇಲೆ ಅನುಮಾನ ಪಡತೊಡಗಿದ್ದರಿಂದ, ದಂಪತಿಗಳ ನಡುವೆ ಕಲಹ ಉಂಟಾಗತೊಡಗಿತು.
ಗುರುವಾರವೂ ಇದೇ ವಿಷಯದ ಬಗ್ಗೆ ಜಗಳವಾದಾಗ, ಮುತ್ತುರಾಜು ಪತ್ನಿಗೆ ಥಳಿಸಿದ್ದು, ಈ ವೇಳೆ ಆಕೆಯ ಮೂಗಿನಿಂದ ರಕ್ತ ಹರಿಯಲು ಆರಂಭಿಸಿತು. ಅಷ್ಟಕ್ಕೂ ಬಿಡದ ಪತಿ, ಪತ್ನಿಯ ಕತ್ತು ಹಿಸುಕಿ ಕೊಂದಿದ್ದನು. ಬಳಿಕ ಯಾರಿಗೂ ಅನುಮಾನವಾಗ ಬರದಂತೆ ಸೀರೆ ಬಳಸಿ ನೇತಾಡುವಂತೆ ಮಾಡಿದ್ದ.
ತಾಯಿಗೆ ಕರೆ ಮಾಡಿ ಸುಳ್ಳು ಹೇಳಿದ ಪತಿ
ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿದ್ದ ಮುತ್ತುರಾಜು, ಶಿಲ್ಪಾ ತಾಯಿಗೆ ಕರೆ ಮಾಡಿ “ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ತಿಳಿಸಿದನು. ತಕ್ಷಣವೇ ಆಕೆಯ ತಾಯಿ ಸ್ಥಳಕ್ಕೆ ಧಾವಿಸಿದಾಗ, ಪತಿ ಅಲ್ಲಿರಲಿಲ್ಲ. ಮನೆಯ ಮಾಲೀಕನಿಗೆ ಅನುಮಾನಬಂದು, ಈ ವಿಷಯವನ್ನು ಪೊಲೀಸರಿಗೆ (Police) ತಿಳಿಸಿದರು. ಸ್ಥಳಕ್ಕೆ ತಲುಪಿದ ಪೊಲೀಸರು ಶಿಲ್ಪಾ ಮೃತದೇಹವನ್ನು ಪರಿಶೀಲಿಸಿ, ಇದು ಆತ್ಮಹತ್ಯೆ ಅಲ್ಲ, ಹತ್ಯೆ ಎಂಬುದು ಅರ್ಥವಾಯಿತು.
ಪೊಲೀಸರು ತಕ್ಷಣ ತನಿಖೆ ಕೈಗೊಂಡು, ಆರೋಪಿ ಪತಿಯನ್ನು ಅವನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಬಂಧಿಸಿದರು. ಅಷ್ಟೊತ್ತಿಗಾಗಲೇ ಆತ ಕಂಠಪೂರ್ತಿ ಮದ್ಯ ಸೇವಿಸಿದ್ದನು, ಬಂಧಿಸಿದ ಪೊಲೀಸರು ತಕ್ಷಣವೇ ವಿಚಾರಣೆ ಆರಂಭಿಸಿ, ಕೊನೆಗೂ ಅವನಿಂದ ಸತ್ಯ ಬಾಯ್ಬಿಡಿಸಿದ್ದಾರೆ. ಈ ಹತ್ಯೆ ಹಿಂದೆ ಆತನ ಅನುಮಾನವೇ ಕಾರಣ ಎಂದು ಆತ ಒಪ್ಪಿಕೊಂಡಿದ್ದಾನೆ.
Bengaluru Security Guard Kills Wife, Tries to Pass It Off as Suicide