ಬೆಂಗಳೂರು 7 ಕೊಲೆ ಪ್ರಕರಣ; ಮಹತ್ವದ ಸುಳಿವು, ಬಾಲಕನ ಆಡಿಯೋ ವೈರಲ್
ಬೆಂಗಳೂರು ರಾಜಾಜಿನಗರದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೊಲೆ ಬಳಿಕ ಸಂಬಂಧಿಕರ ಕರೆಗಳಿಗೆ ಬಾಲಕ ಯತಿನ್‌ನಿಂದ ಉತ್ತರ ಕೊಡಿಸಿದ್ದ ಆರೋಪಿಯ ಕೃತ್ಯಗಳು ಇದೀಗ ಬಹಿರಂಗವಾದ ಆಡಿಯೋದಿಂದ ಬೆಳಕಿಗೆ ಬಂದಿವೆ.

ಬೆಂಗಳೂರು (Bengaluru): ರಾಜಾಜಿನಗರದಲ್ಲಿ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದಾರೆಂದು ಆತಂಕಗೊಂಡು ಸಂಬಂಧಿಕರು ಕರೆ ಮಾಡಿದಾಗ, ಅವರಿಗೆ ಅನುಮಾನ ಬಾರದಂತೆ ಆರೋಪಿ ಇಂದುಶೇಖರ್ (Indushekhar) ಬಾಲಕನಿಂದಲೇ ಮಾತನಾಡಿಸಿದ್ದ ಎಂಬ ಆರೋಪ ಈಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ ಬಾಲಕ ಯತಿನ್ ಸಂಬಂಧಿಕರೊಂದಿಗೆ ಮಾತನಾಡಿರುವ ಆಡಿಯೋ (Audio Recording) ಇದೀಗ ಬಹಿರಂಗವಾಗಿದೆ. ಅಪ್ಪ-ಅಮ್ಮ ಎಲ್ಲಿ ಎಂದು ಕೇಳಿದಾಗ, ಅವರು ಟ್ರಿಪ್‌ಗೆ ಹೋಗಿದ್ದಾರೆ, ಬಸ್‌ನಲ್ಲಿದ್ದಾರೆ ಎಂದು ಬಾಲಕ ಉತ್ತರಿಸಿರುವುದು ಆಡಿಯೋದಲ್ಲಿ ಕೇಳಿಬಂದಿದೆ.
ಸಂಬಂಧಿಕರು ನಳಿನಿ ಜೊತೆ ಮಾತನಾಡಿಸುವಂತೆ ಬಾಲಕನನ್ನು ಕೇಳಿಕೊಂಡಿದ್ದಾರೆ. ನಳಿನಿಯ ತಾಯಿ ತುಂಗಮ್ಮ ಅವರು ಮಗಳ ಬಗ್ಗೆ ಚಿಂತಿತರಾಗಿದ್ದಾರೆ, ಅವರಿಗಾದರೂ ಮಾತನಾಡಿಸು ಎಂದು ಮನವಿ ಮಾಡಿದ್ದಾರೆ. ಆದರೆ ಯತಿನ್, ಎಲ್ಲರೂ ಪ್ರವಾಸಕ್ಕೆ ಬಂದಿದ್ದು, ಅಪ್ಪ-ಅಮ್ಮ ಬಸ್‌ನಲ್ಲಿದ್ದಾರೆ. ಈಗ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ, ಪ್ರವಾಸ ಮುಗಿಸಿ ಮನೆಗೆ ಬರಲು ಮೂರು ತಿಂಗಳು ಬೇಕಾಗುತ್ತದೆ ಎಂದೂ ಬಾಲಕ ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಬಸ್ ಹತ್ತಲು ಕರೆಯುತ್ತಿದ್ದಾರೆ, ತಾನು ಹೋಗಬೇಕು ಎಂದು ಮಾತುಕತೆ ಮುಗಿಸಿದ್ದಾನೆ.
ಇದೇ ಸಂದರ್ಭದಲ್ಲಿ ಸಂಬಂಧಿಕರು ಪುನೀತ್ ಬಗ್ಗೆಯೂ ವಿಚಾರಿಸಿದ್ದಾರೆ. ಅದಕ್ಕೆ ಪುನೀತ್ ಕೂಡ ನಮ್ಮ ಜೊತೆಯಲ್ಲೇ ಇದ್ದಾನೆ, ನಾವೆಲ್ಲರೂ ಬಸ್‌ನಲ್ಲಿದ್ದೇವೆ ಎಂದು ಯತಿನ್ ಉತ್ತರಿಸಿದ್ದಾನೆ. ಕುಟುಂಬದವರ ಹತ್ಯೆಯ ವಿಚಾರ ಹೊರಬರದಂತೆ ಆರೋಪಿ ಮಕ್ಕಳನ್ನು ಬಳಸಿಕೊಂಡು ಸಂಬಂಧಿಕರನ್ನು ನಂಬಿಸಲು ಪ್ರಯತ್ನಿಸಿದ್ದ ಎಂಬ ಅನುಮಾನ ಈ ಬೆಳವಣಿಗೆಯಿಂದ ವ್ಯಕ್ತವಾಗಿದೆ.
ತನಿಖೆಯ ಪ್ರಕಾರ, ಶಿವಕುಮಾರ್ ಮತ್ತು ದಿವ್ಯ ದಂಪತಿಯ ಹತ್ಯೆಯ ಬಳಿಕ ಅವರ ಪುತ್ರ ಪುನೀತ್‌ನಿಂದಲೂ ಸಂಬಂಧಿಕರ ಕರೆಗಳಿಗೆ ಉತ್ತರ ಕೊಡಿಸಲಾಗಿತ್ತು ಎನ್ನಲಾಗಿದೆ. ನಂತರ ಆತನನ್ನೂ ಹತ್ಯೆ ಮಾಡಲಾಗಿದೆ. ಇದೇ ರೀತಿ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರ ಯತಿನ್‌ನನ್ನೂ ಸಂಬಂಧಿಕರೊಂದಿಗೆ ಮಾತನಾಡಿಸಲು ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.
ಸದ್ಯ ಬಹಿರಂಗವಾಗಿರುವ ಆಡಿಯೋವನ್ನು ಸಂಬಂಧಿಕರು ಪೊಲೀಸರಿಗೆ ನೀಡಿದ್ದಾರೆ. ಅದರ ನೈಜತೆ ಮತ್ತು ಮಾತುಕತೆ ನಡೆದ ಸಂದರ್ಭದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಹಲವು ಮಹತ್ವದ ಸಂಗತಿಗಳು ಹೊರಬಂದಿದ್ದು, ಈ ಆಡಿಯೋ ತನಿಖೆಯಲ್ಲಿ ಮತ್ತೊಂದು ಪ್ರಮುಖ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.
ಇಂದಿನ ದಿನ ಭವಿಷ್ಯ: 11-11-2026, ಬುಧವಾರ
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಲಾಭ; ಡಿಕೆ ಶಿವಕುಮಾರ್
Read the story
ರೈತರಿಗೆ 5,000 ಬರ ಪರಿಹಾರ ಖಚಿತ; ಡಿಕೆ ಶಿವಕುಮಾರ್
Read the story
ಒಂದೇ ಮನೆಯಲ್ಲಿ ಎರಡು ಗ್ಯಾಸ್ ಕನೆಕ್ಷನ್; ಕೇಂದ್ರ ಹೊಸ ರೂಲ್ಸ್
Read the story



