ಅತುಲ್ ಸುಭಾಷ್ ಪ್ರಕರಣದ ತನಿಖೆ ಚುರುಕುಗೊಳಿಸಿದ ಬೆಂಗಳೂರು ಮಾರತ್ತಹಳ್ಳಿ ಪೊಲೀಸರು

Atul Subhash Suicide Case : ಪತ್ನಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ ಪ್ರಕರಣದ ತನಿಖೆಯನ್ನು ಬೆಂಗಳೂರು (Bengaluru) ಮಾರತ್ತಹಳ್ಳಿ ಪೊಲೀಸರು ಚುರುಕುಗೊಳಿಸಿದ್ದಾರೆ.

- - - - - - - - - - - - - Story - - - - - - - - - - - - -

ಬೆಂಗಳೂರು (Bengaluru): ಪತ್ನಿ ಹಾಗೂ ಸಂಬಂಧಿಕರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ (34) (Atul Subhash) ಪ್ರಕರಣದ ತನಿಖೆಯನ್ನು ಬೆಂಗಳೂರು ಮಾರತ್ತಹಳ್ಳಿ ಪೊಲೀಸರು (Marathahalli Police) ಚುರುಕುಗೊಳಿಸಿದ್ದಾರೆ.

ಆರೋಪಿಗಳಿಗಾಗಿ ಉತ್ತರ ಪ್ರದೇಶದ ಜೌನ್‌ಪುರಕ್ಕೆ ತೆರಳಿದ್ದಾರೆ. ಅಲ್ಲಿ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ, ತಾಯಿ ನಿಶಾ, ಸಹೋದರ ಅನುರಾಗ್ ಮತ್ತು ಸೋದರ ಸಂಬಂಧಿ ಸುಶೀಲ್ ಅವರನ್ನು ವಿಚಾರಣೆ ನಡೆಸಲಾಯಿತು.

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಸಹೋದರ ಭಾವುಕ ಹೇಳಿಕೆ

ಅತುಲ್ ಸುಭಾಷ್ ಪ್ರಕರಣದ ತನಿಖೆ ಚುರುಕುಗೊಳಿಸಿದ ಬೆಂಗಳೂರು ಮಾರತ್ತಹಳ್ಳಿ ಪೊಲೀಸರು

ಮೃತನ ಸಹೋದರ ಬಿಕಾಸ್‌ಕುಮಾರ್ ನೀಡಿದ ದೂರಿನ ಮೇರೆಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಇತರೆ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಬಿಹಾರದಲ್ಲಿರುವ ಮೃತರ ಪೋಷಕರಿಂದಲೂ ಹೇಳಿಕೆ ತೆಗೆದುಕೊಳ್ಳಲಾಗಿದೆ.

ಪತ್ನಿ ಜಗಳವಾಡಿಕೊಂಡು ಮನೆಗೆ ತೆರಳಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಅತುಲ್ ಇದೇ ತಿಂಗಳ 9ರಂದು ಮಾರತ್ತಹಳ್ಳಿಯ ಮಂಜುನಾಥ ಲೇಔಟ್ ನಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಸುಮಾರು 40 ಪುಟಗಳ ಡೆತ್ ನೋಟ್ ಬರೆದಿದ್ದಾರೆ. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ.

Bengaluru Techie Atul Subhash Suicide Case Takes a New Turn

Related Stories