Bengaluru to Mumbai: ಇನ್ಮುಂದೆ ಬೆಂಗಳೂರು to ಮುಂಬೈ ಕೇವಲ 18 ಗಂಟೆ ಪ್ರಯಾಣ! ದುರಂತೋ ರೈಲು ಸಿದ್ಧತೆ

ಬೆಂಗಳೂರು ಮುಂಬೈ ನಡುವೆ ಪ್ರಯಾಣಿಸುವವರಿಗೆ ರೈಲ್ವೆಯಿಂದ ಹೊಸ ಸುದ್ದಿ, ದುರಂತೋ ಎಕ್ಸ್‌ಪ್ರೆಸ್ ಆರಂಭವಾದರೆ ಕಡಿಮೆ ನಿಲ್ದಾಣ, ವೇಗದ ಸಂಚಾರ, ಊಟ ಸೌಲಭ್ಯದಿಂದ ಪ್ರಯಾಣ ಸಮಯ 18 ಗಂಟೆಗೆ ಇಳಿಯಲಿದೆ

  • ಬೆಂಗಳೂರು–ಮುಂಬೈ ದುರಂತೋ ಎಕ್ಸ್‌ಪ್ರೆಸ್
  • ಕಡಿಮೆ ನಿಲ್ದಾಣಗಳೊಂದಿಗೆ ವೇಗದ ಸಂಚಾರಕ್ಕೆ ಯೋಜನೆ
  • ದುರಂತೋ ರೈಲಿನಲ್ಲಿ ಟಿಕೆಟ್ ಜೊತೆ ಊಟ ಸೌಲಭ್ಯ ಸಾಧ್ಯತೆ

ಬೆಂಗಳೂರು (Bengaluru): ಬೆಂಗಳೂರು ಮತ್ತು ಮುಂಬೈ (Bengaluru to Mumbai) ನಡುವೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಹೊಸ ಸುದ್ದಿ ನೀಡಿದೆ. ಎರಡು ಮಹಾನಗರಗಳ ನಡುವಿನ ದೂರವನ್ನು ಇನ್ನಷ್ಟು ಸುಲಭವಾಗಿ ದಾಟಿಸಲು ದುರಂತೋ ಎಕ್ಸ್‌ಪ್ರೆಸ್ ರೈಲು (Duronto Express Rail) ಆರಂಭಿಸುವ ಪ್ರಸ್ತಾವನೆ ಮೇಲೆ ಗಂಭೀರ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಈ ಸೇವೆ ಕಾರ್ಯರೂಪಕ್ಕೆ ಬಂದರೆ, ಈಗಿನ ಸುಮಾರು 24 ಗಂಟೆಗಳ ಪ್ರಯಾಣವು 18 ಗಂಟೆಗಳೊಳಗೆ ಮುಗಿಯುವ ಸಾಧ್ಯತೆ ಇದೆ.

ಇತ್ತೀಚೆಗೆ ಆರಂಭವಾದ ಸೂಪರ್‌ಫಾಸ್ಟ್ ರೈಲು 1,200 ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕವರ್ ಮಾಡುತ್ತಿದ್ರೂ, ಹೆಚ್ಚು ನಿಲ್ದಾಣಗಳ ಕಾರಣ ಪ್ರಯಾಣಿಕರಿಗೆ ಸಮಯದ ಒತ್ತಡ ಎದುರಾಗುತ್ತಿತ್ತು. ಈ ಹಿನ್ನೆಲೆ, ಕಡಿಮೆ ನಿಲ್ದಾಣಗಳೊಂದಿಗೆ ನೇರ ಮತ್ತು ವೇಗದ ಸಂಚಾರ ನೀಡುವ ದುರಂತೋ ರೈಲು ಅಗತ್ಯವಿದೆ ಎಂಬ ಅಭಿಪ್ರಾಯ ರೈಲ್ವೆ ವಲಯದಲ್ಲಿ ಬಲವಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್ ಕ್ವಾಲಿಟಿ ಅನಾರೋಗ್ಯಕರ, ಬಳ್ಳಾರಿ ಗಾಳಿ ಗುಣಮಟ್ಟ ಅತ್ಯಂತ ಕಳಪೆ

ಯಾವ ಮಾರ್ಗದಲ್ಲಿ ಸಂಚಾರ?

ಪ್ರಸ್ತಾವಿತ ಯೋಜನೆಯಂತೆ, ಕೆಎಸ್‌ಆರ್ ಬೆಂಗಳೂರು ಮತ್ತು ಮುಂಬೈನ ಸಿಎಸ್ಎಂಟಿ ಅಥವಾ ಎಲ್‌ಟಿಟಿ ಟರ್ಮಿನಸ್ ನಡುವಿನ ಮಾರ್ಗದಲ್ಲಿ ದುರಂತೋ ಎಕ್ಸ್‌ಪ್ರೆಸ್ ಸಂಚರಿಸುವ ಸಾಧ್ಯತೆ ಇದೆ.

ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್ ಹಾಗೂ ಪುಣೆ ಪ್ರಮುಖ ನಿಲ್ದಾಣಗಳಾಗಿರಬಹುದು. ನಿಲ್ದಾಣಗಳ ಸಂಖ್ಯೆ ಕಡಿಮೆ ಇರುವುದರಿಂದ ವೇಗ ಹೆಚ್ಚುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ರಾಜ್ಯದಾದ್ಯಂತ ಚಳಿ ಹಾಗೂ ಮಂಜು ಹೆಚ್ಚಳ! ಮಳೆ ಸೂಚನೆ ಇಲ್ಲ

ತಾತ್ಕಾಲಿಕ ವೇಳಾಪಟ್ಟಿ ಮತ್ತು ದರ

ಅಂದಾಜಿನ ಪ್ರಕಾರ, ರೈಲು ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 10.30ರ ವೇಳೆಗೆ ಮುಂಬೈ ತಲುಪಬಹುದು. 3ಎಸಿ ಟಿಕೆಟ್ ದರ ಸುಮಾರು 2,500 ರೂ. ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಇನ್ನೂ ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

English Summary▼

TRENDING ARTICLES1 / 5

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories