ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಬದಲಾವಣೆ! ಇಂತಹ ಮಹಿಳೆಯರಿಗೆ ಸಿಗಲ್ಲ ಹಣ
ಮಹಿಳೆಯರಿಗೆ ಪ್ರತಿಮಾಸ ₹2,000 ನೀಡುವ ಗೃಹಲಕ್ಷ್ಮಿ ಯೋಜನೆಯಿಂದ 2.13 ಲಕ್ಷ ಫಲಾನುಭವಿಗಳ ಧನಸಹಾಯ ಸ್ಥಗಿತಗೊಂಡಿದೆ, ಹೊಸ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ.

- ಆದಾಯ ತೆರಿಗೆ ಪಾವತಿದಾರರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ
- 2.13 ಲಕ್ಷ ಮಹಿಳೆಯರ ಧನಸಹಾಯ ಸ್ಥಗಿತ!
- ನಿಜವಾದ ಬಡವರಿಗೆ ತಲುಪುವಂತೆ ಕಟ್ಟು ನಿಟ್ಟಿನ ನಿಯಮ
Gruha Lakshmi Scheme : ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮುಖ್ಯ ಉದ್ದೇಶವಾಗಿ ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೇರವಾಗಿ ಖಾತೆಗೆ ಹಣ ಹಾಕುವ ವ್ಯವಸ್ಥೆ.
ಆದರೆ ಹೊಸ ಮಾರ್ಗಸೂಚಿಗಳ ಪ್ರಕಾರ, ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರು ಯೋಜನೆಯಿಂದ ಹೊರಗುಳಿಯಲಿದ್ದಾರೆ. 2023ರ ಜೂನ್ 6ರಂದು ಘೋಷಿತ ಯೋಜನೆ ಪ್ರಕಾರ 17-07-2023ರಂದು ನಿಯಮಾವಳಿಗಳು ಜಾರಿಗೆ ಬಂದವು.
2.13 ಲಕ್ಷ ಫಲಾನುಭವಿಗಳಿಗೆ ಬಿಗ್ ಶಾಕ್
ಈ ಹೊಸ ನಿಯಮದ ಪರಿಣಾಮವಾಗಿ ಸುಮಾರು 2.13 ಲಕ್ಷ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಧನಸಹಾಯದಿಂದ ಹೊರಗಡೆ ಉಳಿಯುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರದ ಎಂಪಿಐಸಿ ಸಭೆಯಲ್ಲಿ 15-07-2025ರಂದು ಈ ನಿರ್ಧಾರವನ್ನು ದೃಢೀಕರಿಸಲಾಯಿತು. ಇದರ ಮೂಲಕ ಯೋಜನೆಯ ಸಂಪನ್ಮೂಲಗಳನ್ನು ನಿಜವಾದ ಬಡವರಿಗೆ ಮಾತ್ರ ಒದಗಿಸುವ ಗುರಿ ಸ್ಪಷ್ಟವಾಗಿದೆ.
ಇದನ್ನೂ ಓದಿ: 8 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ತಕ್ಷಣ ರದ್ದು, ನಕಲಿ ಕಾರ್ಡುಗಳ ಕುರಿತು ಸರ್ಕಾರ ಕ್ರಮ
ಮುಂದಿನ ಅರ್ಜಿ ಪ್ರಕ್ರಿಯೆ ಹೇಗೆ?
ಭವಿಷ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಅರ್ಜಿ ಸ್ವೀಕರಿಸಲಾಗುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಈ ಕ್ರಮದ ಉದ್ದೇಶವು ಯೋಜನೆಯ ಲಾಭವು ಯೋಗ್ಯ ಮತ್ತು ಆರ್ಥಿಕವಾಗಿ ಅಗತ್ಯವಿರುವ ಕುಟುಂಬಗಳಿಗೆ ಮಾತ್ರ ತಲುಪಿಸುವುದು. ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಿಗೆ ಈ ಯೋಜನೆಯ ಲಾಭವನ್ನು ನೀಡದೆ, ಸಂಪನ್ಮೂಲ ದುರ್ಬಳಕೆ ತಡೆಯಲಾಗುತ್ತದೆ.
ಇದನ್ನೂ ಓದಿ: ಕ್ಷೀರ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಮಾಸಿಕ 3500 ರೂಪಾಯಿ, ಬಂಪರ್ ಸ್ಕೀಮ್
ಸರ್ಕಾರವು ಈ ಯೋಜನೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ನಿರ್ವಹಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ನಾಳೆಯ ದಿನ ಭವಿಷ್ಯ 31-10-2026: ನಿಮ್ಮ ರಾಶಿಗೆ ಹೇಗಿದೆ? ತಿಳಿಯಿರಿ
Read the story
ಭಾರೀ ಮಳೆ ಮುನ್ಸೂಚನೆ! ಗುಡುಗು, ಮಿಂಚು ಸಂಭವ
Read the story
ನವೆಂಬರ್ 1ರಿಂದ ಹೊಸ ಹೊಸ ರೂಲ್ಸ್! ನಿಮ್ಮ ಜೇಬಿಗೆ ಹೊರೆ
Read the story
ತಂದೆ ಬದುಕಿರುವಾಗಲೇ ಮಕ್ಕಳು ಆಸ್ತಿ ಭಾಗ ಕೇಳಬಹುದಾ?
Read the story
ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ ಹಣ
Read the story
ಪಿಎಂ ಕಿಸಾನ್ ಹಣ ಇಂದು ಬಿಡುಗಡೆ! ನಿಮ್ಮ ಖಾತೆಗೆ ಬಂದಿದ್ಯಾ?
Read the story



