ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ

ಜನರಿಗೆ ಪ್ರತಿ ತಿಂಗಳು ಹಣದ ಬದಲಾಗಿ ಅಕ್ಕಿ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯ ಇದ್ದು, ಸರ್ಕಾರ ಇದರ ಬಗ್ಗೆ ಅಕ್ಕಿ ಒದಗಿಸುವುದಕ್ಕೆ ಚಿಂತನೆ ನಡೆಸುತ್ತಿದೆ.

Bengaluru, Karnataka, India
Edited By: Satish Raj Goravigere

ರಾಜ್ಯದ ಜನರ ಹಸಿವು ನೀಗಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆ ಅನ್ನಭಾಗ್ಯ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿ ವ್ಯಕ್ತಿಗೂ ಕೂಡ ತಿಂಗಳಿಗೆ 10 ಕೆಜಿ ವಿತರಣೆ ಮಾಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಅದೇ ರೀತಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಫಲಾನುಭವಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಆದರೆ ಸರ್ಕಾರವು ಅನ್ನಭಾಗ್ಯ ಯೋಜನೆಯ ಕೆಲವು ಬದಲಾವಣೆಗಳನ್ನು ತಂದಿತು. ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಒದಗಿಸಲು ಸಾಧ್ಯ ಆಗುವುದಿಲ್ಲ ಎಂದ ಕಾರಣ, ಬೇರೆ ರಾಜ್ಯಗಳ ಸಹಾಯ ಪಡೆಯುವುದಕ್ಕೆ ಸಹ ಪ್ರಯತ್ನ ಪಡಲಾಯಿತು. ಆದರೆ ಇದ್ಯಾವುದು ನಡೆಯದ ಕಾರಣ, ರಾಜ್ಯ ಸರ್ಕಾರವು ಪ್ರತಿ ವ್ಯಕ್ತಿಗೆ ತಿಂಗಳಿಗೆ 5ಕೆಜಿ ಅಕ್ಕಿ ಕೊಟ್ಟು, ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಒಂದು ಕೆಜಿಗೆ 34 ರೂಪಾಯಿಯ ಹಾಗೆ, 5 ಕೆಜಿಗೆ 140 ರೂಪಾಯಿಗಳನ್ನಿ ನೀಡುತ್ತಿದೆ.

Big update from the state government for the beneficiaries of Annabhagya Yojana

ಈ ಹಣವನ್ನು ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ವರ್ಗಾವಣೆ ಮಾಡಲಾಗುತ್ತಿದೆ. ಜನರು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಜನರಿಗೆ ಪ್ರತಿ ತಿಂಗಳು ಹಣದ ಬದಲಾಗಿ ಅಕ್ಕಿ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯ ಇದ್ದು, ಸರ್ಕಾರ ಇದರ ಬಗ್ಗೆ ಅಕ್ಕಿ ಒದಗಿಸುವುದಕ್ಕೆ ಚಿಂತನೆ ನಡೆಸುತ್ತಿದೆ. 20 ಸಾವಿರ ಟನ್ ಗಿಂತ ಹೆಚ್ಚು ಅಕ್ಕಿ ಬೇಕಾಗುತ್ತದೆ. ಹಾಗಾಗಿ 5 ಕೆಜಿ ಅಕ್ಕಿಯ ಬದಲಾಗಿ ಬೇರೆ ಯಾವ ವಸ್ತುಗಳನ್ನು ಕೊಡಬಹುದು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ ಎಂದು ಸರ್ಕಾರದ ಕಡೆಯಿಂದ ಮಾಹಿತಿ ಸಿಕ್ಕಿದೆ..

ಸರ್ಕಾರ ನೀಡಿರುವ ಈ ಮಾಹಿತಿಯ ಅನುಸಾರ, ಕೆಲ ದಿನಗಳಲ್ಲಿ ಜನರಿಗೆ ಪ್ರತಿ ತಿಂಗಳು 5ಕೆಜಿ ಅಕ್ಕಿ ಕೊಟ್ಟು ಇನ್ನು 5 ಕೆಜಿ ಅಕ್ಕಿಯ ಬದಲಾಗಿ ಸಕ್ಕರೆ, ಬೇಳೆ, ಎಣ್ಣೆ ಈ ವಸ್ತುಗಳನ್ನು ನೀಡುವುದಕ್ಕೆ ಮುಂದಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರದ ಜೊತೆಗೆ ಕೂಡ ಮಾತುಕತೆ ನಡೆಯುತ್ತಿದ್ದು, ಅಲ್ಲಿಂದ ಒಪ್ಪಿಗೆ ಸಿಕ್ಕ ಕೂಡಲೇ ಪ್ರತಿ ತಿಂಗಳು ಜನರಿಗೆ 10 ಕೆಜಿ ಅಕ್ಕಿಯ ವಿತರಣೆ ನಡೆಯುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಹಾಗೆಯೇ ಹಲವಾರು ಜನರು ಸುಳ್ಳು ಮಾಹಿತಿ ನೀಡಿ, ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ರೇಶನ್ ಕಾರ್ಡ್ ಮಾಡಿಸಿಕೊಂಡು, ಪ್ರತಿ ತಿಂಗಳು ರೇಶನ್ ಪಡೆಯುತ್ತಿದ್ದಾರೆ. ಅಂಥವರನ್ನು ಗುರುತಿಸಿ, ಅವರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದ್ದು, ಈಗಾಗಲೇ ಈ ಪ್ರಕ್ರಿಯೆ ಶುರುವಾಗಿ 2 ಲಕ್ಷಕ್ಕಿಂತ ಹೆಚ್ಚಿನ ಜನರ ರೇಷನ್ ಕಾರ್ಡ್ ಬಂದ್ ಆಗಿದೆ. ಹಾಗಾಗಿ ಸುಳ್ಳು ಮಾಹಿತಿ, ಸುಳ್ಳು ದಾಖಲೆ ನೀಡಿರುವವರು ಹುಷಾರಾಗಿರಿ.

Big update from the state government for the beneficiaries of Annabhagya Yojana