ಬೆಂಗಳೂರು: ಬೈಕ್ ಅಪಘಾತದಲ್ಲಿ ಯುವಕ ಸಾವು, ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯಲ್ಲಿ ಘಟನೆ

ಬೈಕ್ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯಲ್ಲಿ ನಡೆದಿದೆ. ಗೀತಂ ವಿವಿಯಲ್ಲಿ ಬಿ.ಟೆಕ್ ಓದುತ್ತಿದ್ದ ಮನೋಜ್ (19) ಮೃತರು.

- - - - - - - - - - - - - Story - - - - - - - - - - - - -

ಬೆಂಗಳೂರು (Bengaluru): ಬೈಕ್ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯ ಡೈ ಫ್ಯಾಕ್ಟರಿ ಎದುರು ನಡೆದಿದೆ. ಗೀತಂ ವಿವಿಯಲ್ಲಿ ಬಿ.ಟೆಕ್ ಓದುತ್ತಿದ್ದ ಮನೋಜ್ (19) ಮೃತರು.

ಬುಧವಾರ ರಜೆ ಇದ್ದ ಕಾರಣ ಬೈಕ್ ನಲ್ಲಿ ಹಾಸ್ಟೆಲ್ ನಿಂದ ಹೊರ ಬಂದಿದ್ದರು. ಇವರ ಬೈಕ್‌ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಕೆಳಗೆ ಬಿದ್ದಿದ್ದು, ಹಿಂದೆ ಬರುತ್ತಿದ್ದ ಖಾಸಗಿ ಬಸ್ ಬೈಕ್ ಮೇಲೆ ಹರಿದು 100 ಮೀಟರ್ ದೂರ ಎಳೆದೊಯ್ದಿದೆ.

ಅಪಘಾತದಲ್ಲಿ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು: ಬೈಕ್ ಅಪಘಾತದಲ್ಲಿ ಯುವಕ ಸಾವು, ದೊಡ್ಡಬಳ್ಳಾಪುರ-ದೇವನಹಳ್ಳಿ ರಸ್ತೆಯಲ್ಲಿ ಘಟನೆ

Bike Accident Claims Life of B.Tech Student in Doddaballapura-Devanahalli Road

Related Stories