Bangalore News
ಬೆಂಗಳೂರು: ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ, ಇಬ್ಬರು ಸಾವು
ಬೆಂಗಳೂರು (Bengaluru): ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಗುಲ್ಬರ್ಗ ಮೂಲದ ರಮೇಶ್ (41) ಮತ್ತು ನಬಿ (35) ಎಂದು ಗುರುತಿಸಲಾಗಿದೆ.
ರಮೇಶ್ ಕೇಟರಿಂಗ್ ವ್ಯಾನ್ ಚಾಲಕನಾಗಿ ಮತ್ತು ನಬಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಚಿಕ್ಕಜಾಲದಲ್ಲಿ (Chikkajala) ವಾಸವಾಗಿದ್ದರು. ಇಬ್ಬರೂ ಒಂದೇ ಬೈಕ್ ನಲ್ಲಿ (Bike) ಬರುತ್ತಿದ್ದಾಗ ಮೆಜೆಸ್ಟಿಕ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಎಲೆಕ್ಟ್ರಿಕ್ ಬಸ್ (Electric Bus) ಅತಿವೇಗದಿಂದ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
BMTC bus collides with bike, two killed Bengaluru Chikkajaala
Our Whatsapp Channel is Live Now 👇