ಬೆಂಗಳೂರು ಟ್ಯಾನರಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್‌ ಹಲ್ಲೆ

Story Highlights

ಬೆಂಗಳೂರು ಬಿಎಂಟಿಸಿ ಬಸ್ ಕಂಡಕ್ಟರ್‌ ಹಲ್ಲೆ ನಡೆಸಿದ ಬೈಕ್ ಸವಾರರು, ಪೊಲೀಸರಿಂದ ಹುಡುಕಾಟ

ಬೆಂಗಳೂರು ನಗರದಲ್ಲಿ (Bengaluru) ಕೆಲವೆಡೆ ಬಿಎಂಟಿಸಿ ಚಾಲಕರು, ಕಂಡಕ್ಟರ್‌ಗಳ ಮೇಲೆ ಆಗಾಗ್ಗೆ ಹಲ್ಲೆಗಳು ನಡೆಯುತ್ತಲೇ ಇರುತ್ತವೆ. ಶನಿವಾರ ಸಂಜೆ ಬಿಎಂಟಿಸಿ ಬಸ್ (BMTC Bus) ಟ್ಯಾನರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಅಡ್ಡ ಬಂದಿದ್ದಾರೆ. ಬಸ್ ಚಾಲಕ ಅವರನ್ನು ಪಕ್ಕಕ್ಕೆ ಸರಿಯಲು ಹೇಳಿದ್ದಾರೆ.

ಈ ವೇಳೆ ಯುವಕನೊಬ್ಬ ಚಾಲಕನನ್ನು ನಿಂದಿಸಿದ್ದಾನೆ. ಕಂಡಕ್ಟರ್ ತಡೆಯಲು ಮುಂದಾದಾಗ ಯುವಕ ಮುಷ್ಟಿಯಿಂದ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಪುಂಡರನ್ನು ತಡೆದಿದ್ದಾರೆ. ಕಂಡಕ್ಟರ್ ಮುಖ ಮತ್ತು ಸೊಂಟಕ್ಕೆ ಗಾಯಗಳಾಗಿವೆ.

ಆ ವೇಳೆ ಯುವಕರು ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ಸ್ಥಳೀಯರು ಬಂದು ಗಾಯಗೊಂಡಿದ್ದ ಕಂಡಕ್ಟರ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸರು (KG Halli Police) ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆ ಬೈಕ್ ಸವಾರರು ಅಷ್ಟೊತ್ತಿಗಾಗಲೇ ಪರಾರಿಯಾಗಿದ್ದಾರೆ. ದಾಳಿಯ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ದಾಖಲಾಗಿವೆ.

ಪ್ರಕರಣ ದಾಖಲಿಸಿರುವ ಪೊಲೀಸರು ಅವರ ಹುಡುಕಾಟಕ್ಕೆ ಮುಂದಾಗಿದ್ದಾರೆ.

BMTC bus conductor assaulted on Bengaluru Tannery Road

Related Stories