ಬೆಂಗಳೂರು: ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ಕುರಿತು ಬಿಗ್ ಅಪ್ಡೇಟ್! ಇಲ್ಲಿದೆ ವಿವರ
2025–26ನೇ ಶೈಕ್ಷಣಿಕ ಸಾಲಿನ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಅರ್ಜಿ ಪ್ರಕ್ರಿಯೆ ಮೇ 26ರಿಂದ ಆರಂಭ, ಬೆಂಗಳೂರಿನಲ್ಲಿ ಹಲವು ಕೇಂದ್ರಗಳಲ್ಲಿ ವಿತರಣೆ ವ್ಯವಸ್ಥೆ ಜೂನ್ 1ರಿಂದ.

- ಮೇ 26ರಿಂದ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ
- ಜೂನ್ 1ರಿಂದ ವಿವಿಧ ಕೇಂದ್ರಗಳಲ್ಲಿ ಬಸ್ ಪಾಸ್ ವಿತರಣೆ
- 4,500 ಇ-ಬಸ್‌ಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ
ಬೆಂಗಳೂರು (Bengaluru): ವಿದ್ಯಾರ್ಥಿಗಳಿಗೆ (Student Bus Passes) ಬಿಎಂಟಿಸಿ ನೀಡುವ ಬಸ್ ಪಾಸ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತೇ ಆರಂಭವಾಗಲಿದೆ. ಈ ಬಾರಿ 2025–26ನೇ ಶೈಕ್ಷಣಿಕ ಸಾಲಿನ ಪಾಸ್‌ಗಾಗಿ ವಿದ್ಯಾರ್ಥಿಗಳು ಮೇ 26ರಿಂದ ಸೇವಾಸಿಂಧು (https://sevasindhu.karnataka.gov.in) ಪೋರ್ಟಲ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು BMTC ತಿಳಿಸಿದೆ.
ಈ ಪಾಸ್‌ಗಳನ್ನು ಜೂನ್ 1ರಿಂದ ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 6.30 ರವರೆಗೆ ವಿತರಿಸಲಾಗುವುದು. ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ಸ್ ಸಿಟಿ ಡಿಪೋ-19, ಹೊಸಕೋಟೆ ಮತ್ತು ಕೆಎಸ್‌ಆರ್‌ಟಿಸಿ ಆನೇಕಲ್ ಬಸ್ ನಿಲ್ದಾಣದಲ್ಲಿನ ಬಿಎಂಟಿಸಿ ಕೇಂದ್ರಗಳಲ್ಲಿ ಈ ಸೇವೆ ಲಭ್ಯವಿದೆ.
ಇದನ್ನೂ ಓದಿ: ಕರ್ನಾಟಕ ಕೋವಿಡ್ ಅಪ್ಡೇಟ್: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಹೆಚ್ಚಿನ ಮಾಹಿತಿಗಾಗಿ ಬಿಎಂಟಿಸಿ ವೆಬ್‌ಸೈಟ್ ಅಥವಾ ಕಾಲ್ ಸೆಂಟರ್ (080-22483777) ಸಂಪರ್ಕಿಸಬಹುದು.
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ, ರಾಜ್ಯದ ವಿದ್ಯಾರ್ಥಿನಿಯರಿಗೆ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವಿದೆ. ಈ ಯೋಜನೆಯ ಮೂಲಕ ಮಹಿಳಾ ವಿದ್ಯಾರ್ಥಿಗಳಿಗೆ ಭಾರೀ ನೆರವು ಒದಗಿಸುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ, ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ಬೆಂಗಳೂರಿಗೆ 4,500 ಇ-ಬಸ್‌ಗಳ (electric buses) ಅನುಮೋದನೆ ಕೇಂದ್ರ ಸರ್ಕಾರ ನೀಡಿದ್ದು, ಮುಂದಿನ 2 ವರ್ಷಗಳಲ್ಲಿ ಬಿಎಂಟಿಸಿ ಬಸ್ ಸಂಖ್ಯೆ 10,000ಕ್ಕೆ ಏರಲಿದೆ. ಇದು ನಗರದಲ್ಲಿನ ಮಾಲಿನ್ಯ ನಿವಾರಣೆಗೆ ದೊಡ್ಡ ಹೆಜ್ಜೆಯಾಗಲಿದೆ.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ, ಕೇರಳ, ಗೋವಾಗೆ ರೆಡ್ ಅಲರ್ಟ್; ಭಾರೀ ಮಳೆ ಸೂಚನೆ
ಈ ಯೋಜನೆಯಡಿಯಲ್ಲಿ ದೆಹಲಿಗೆ 2,800, ಹೈದರಾಬಾದ್‌ಗೆ 2,000, ಅಹಮದಾಬಾದ್‌ಗೆ 1,000 ಮತ್ತು ಸೂರತ್‌ಗೆ 600 ಇ-ಬಸ್‌ಗಳನ್ನೂ ಹಂಚಿಕೆ ಮಾಡಲಾಗಿದೆ. ಈ ವಿಷಯವನ್ನು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ ಶುಕ್ರವಾರ ಘೋಷಿಸಿದರು.
2030ರೊಳಗೆ ಭೂ ಸಾರಿಗೆಯಿಂದ ಉಂಟಾಗುವ ಮಾಲಿನ್ಯವನ್ನು ಶೂನ್ಯಕ್ಕೆ ತರುವ ಪ್ರಧಾನಿ ನರೇಂದ್ರ ಮೋದಿ ಗುರಿಯನ್ನು ಹಂಚಿಕೊಂಡಿದ್ದಾರೆ. ಈ ಕನಸು ನನಸಾಗಿಸಲು ನಾವು ಈ ಯೋಜನೆ ಮೂಲಕ ಮುಂದಾಗಿದ್ದೇವೆ ಎಂದು ಕುಮಾರಸ್ವಾಮಿ ವಿವರಿಸಿದರು.
BMTC Bus Pass Application for Students from May 26








