ಬೆಂಗಳೂರು: ಕೋಲಾರ ಸ್ಥಳಗಳ ಪ್ರವಾಸಕ್ಕೆ ಬಿಎಂಟಿಸಿ ಹೊಸ ಬಸ್ ಸೇವೆ
ಬೆಂಗಳೂರು ಜನತೆಗೆ ಕೋಲಾರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳ ಸಂದರ್ಶನಕ್ಕೆ ಬಿಎಂಟಿಸಿ ವಿಶೇಷ ಪ್ರವಾಸ ವ್ಯವಸ್ಥೆ ರೂಪಿಸಲು ಸಿದ್ಧತೆ ನಡೆಸಿದ್ದು, ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ.

- ಕೋಲಾರದ ಚಿಕ್ಕತಿರುಪತಿ, ಕೋಟಿಲಿಂಗೇಶ್ವರ ದರ್ಶನಕ್ಕೆ ಬಿಎಂಟಿಸಿ ಪ್ರವಾಸ
- ವೈದೇಹಿ ಘಟಕ–18 ನಿಂದ ವೋಲ್ವೋ ಬಸ್ ಸೇವೆ ಆರಂಭದ ಯೋಜನೆ
- ಅಧಿಕಾರಿಗಳ ಭೇಟಿ, ಸ್ಥಳ ಪರಿಶೀಲನೆ, ಸ್ಥಳೀಯರ ಜೊತೆ ಚರ್ಚೆ
ಬೆಂಗಳೂರು (Bengaluru): ಬೆಂಗಳೂರು ನಿವಾಸಿಗಳಿಗೆ ಕೋಲಾರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳ (Kolar tourist places ಭೇಟಿಮಾಡಿಸಲು ಬಿಎಂಟಿಸಿ (BMTC) ವಿಶೇಷ ಪ್ರವಾಸ ವ್ಯವಸ್ಥೆ ರೂಪಿಸುವ ಯೋಜನೆ ಕೈಗೆತ್ತಿಕೊಂಡಿದೆ.
ಈ ಪ್ರಯುಕ್ತ ಕೋಲಾರ ಜಿಲ್ಲೆಯ ಪ್ರಮುಖ ದೇವಾಲಯಗಳು (Kolar Temples) ಹಾಗೂ ತೀರ್ಥಕ್ಷೇತ್ರಗಳಿಗೆ ಒಂದು ದಿನದ ಪ್ರವಾಸದ (1 Day Tour) ಅವಕಾಶ ಒದಗಿಸಲು ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಈ ಭಾಗದಲ್ಲಿ ನಿಮ್ಮ ಮನೆ ಇದ್ಯಾ? ನೀವೇ ಕೋಟ್ಯಾಧಿಪತಿಗಳು
ಈ ಯೋಜನೆಯ ಭಾಗವಾಗಿ ಬಿಎಂಟಿಸಿ ಘಟಕ–18ರ ಅಧಿಕಾರಿಗಳು ಕೋಲಾರದ ಕೆಲವು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕತಿರುಪತಿ (Chikka Tirupathi Temple), ಕೋಟಿಲಿಂಗೇಶ್ವರ (Kotilingeshwara), ಬಂಗಾರು ತಿರುಪತಿ (Bangaru Tirupati), ಕುರಡುಮಲೆ (Kurudumale) ಮತ್ತು ಆವಣಿ (Avani Hills) ಕ್ಷೇತ್ರಗಳಿಗೆ ಬಿಎಂಟಿಸಿ ಪ್ರವಾಸ ವ್ಯವಸ್ಥೆ ಒದಗಿಸಲು ಅಧಿಕಾರಿಗಳು ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿದರು.
ಈ ಪ್ರಯುಕ್ತ ಚಿಕ್ಕತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ಬಿಎಂಟಿಸಿ ಘಟಕ–18ರ ವ್ಯವಸ್ಥಾಪಕ ಮಲ್ಲಿಕಾರ್ಜುನಯ್ಯ ನೇತೃತ್ವದ ತಂಡ, ದೇವಸ್ಥಾನದ ಆಡಳಿತಾಧಿಕಾರಿ ಟಿ.ಸೆಲ್ವಮಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ವಿ. ಮಂಜುನಾಥ್, ಪ್ರಧಾನ ಅರ್ಚಕ ರವಿಸ್ವಾಮಿ ಹಾಗೂ ಸ್ಥಳೀಯರ ಜೊತೆ ಸಮಾಲೋಚಿಸಿದರು. ಯೋಜನೆಯ ಬಗ್ಗೆ ವಿವರ ನೀಡಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದರು.
ಇದನ್ನೂ ಓದಿ: ಬೆಂಗಳೂರು ಮೆಜೆಸ್ಟಿಕ್ ಇನ್ಮೇಲೆ ಹೈಟೆಕ್ ಬಸ್ ನಿಲ್ದಾಣ! ನವೀಕರಣಕ್ಕೆ ಸಜ್ಜು
ಈ ವಿಶೇಷ ಪ್ರವಾಸ ಯೋಜನೆಯು ಬೆಂಗಳೂರಿನ ವೈದೇಹಿ ಘಟಕ (BMTC Unit 18) ನಿಂದ ವೋಲ್ವೋ ಬಸ್ ಮೂಲಕ ಪ್ರಾರಂಭಗೊಳ್ಳಲಿದೆ. ಪ್ರಯಾಣಿಕರಿಗೆ ಸುಸಜ್ಜಿತ ಬಸ್ ಸೇವೆ, ಸುರಕ್ಷಿತ ಪ್ರಯಾಣ ಹಾಗೂ ಯಾತ್ರಾ ಸ್ಥಳಗಳ (Pilgrimage places) ಸಮಗ್ರ ಅನುಭವ ಒದಗಿಸುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದು ವ್ಯವಸ್ಥಾಪಕ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
BMTC Plans One-Day Tour from Bengaluru to Kolar Tourist Places





