ಬೆಂಗಳೂರು: ಕಂಟ್ರೋಲ್ ರೂಮ್‌ಗೆ ಬಾಂಬ್ ಬೆದರಿಕೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ
ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ಬಾಂಬ್ ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮನ್ಸೂರ್ ಎಂದು ಗುರುತಿಸಲಾಗಿದೆ.
ಜನವರಿ 9 ರಂದು ಸಾಯಂಕಾಲ, ಬೆಂಗಳೂರಿನ ಕಮಿಷನರೇಟಿನ ಕಂಟ್ರೋಲ್ ರೂಮ್‌ಗೆ ಮನ್ಸೂರ್ ಎಂಬಾತ ಫೋನ್ ಮಾಡಿ, ರಿಪಬ್ಲಿಕ್ ಡೇ ದಿನ ರಾಮೇಶ್ವರಂ ಕಫೆಯಲ್ಲಿ ಬ್ಲಾಸ್ಟ್ ಮಾಡಿದ ಬಳಿಕ ನಗರದಲ್ಲಿನ ಇನ್ನಷ್ಟು ಪ್ರದೇಶಗಳಲ್ಲಿ ಬಾಂಬ್‌ಗಳನ್ನು ಇಟ್ಟಿದ್ದೇವೆ ಎಂದು ಬೆದರಿಕೆ ಹಾಕಿದ.
ಆರು ಮಂದಿ ಸೇರಿಕೊಂಡು ಈ ಬಾಂಬ್ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿಸಿದಾಗ, ಪೊಲೀಸರು ಕೂಡ ಆತಂಕಕ್ಕೆ ಒಳಗಾದರು. ತಕ್ಷಣವೇ ಫೋನ್ ನಂಬರಿನ ಆಧಾರದಲ್ಲಿ ತನಿಖೆ ನಡೆಸಿ, ಮನ್ಸೂರ್‌ರನ್ನು ಬಂಧಿಸಿದರು.
ಬಂಧಿತನ ವಿಚಾರಣೆಯಲ್ಲಿ, ಕೇ.ಆರ್ ಮಾರ್ಕೆಟ್ ನಿವಾಸಿ ಇಸ್ಮಾಯಿಲ್, ಬೊಮ್ಮನಹಳ್ಳಿ ನಿವಾಸಿ ಅಲ್ತಾಫ್, ಜೆ.ಸಿ ನಗರ ನಿವಾಸಿ ಸಾಹಿದ್, ಹೆಚ್.ಬಿ.ಆರ್ ಲೇಔಟ್ ನಿವಾಸಿ ಅಂಜಾದ್, ನೀಲಸಂದ್ರ ನಿವಾಸಿ ಹೂಮಾಯೂನ್ ಮತ್ತು ತಬ್ರೇಜ್ ಎಂಬವರು ಕೂಡ ಈ ಆರೋಪಿಯ ಜೊತೆ ಸೇರಿಕೊಂಡಿದ್ದರು ಎಂದು ಹೇಳಲಾಗಿದೆ.
ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಮನೋವೈಕಲ್ಯಕ್ಕೆ ಒಳಗಾದ ಮನ್ಸೂರ್ ಈ ರೀತಿಯ ಹುಸಿ ಫೋನ್ ಕರೆ ಮಾಡಿದನು ಎಂದು ತಿಳಿದುಬಂದಿದೆ. ಸದ್ಯದಲ್ಲೇ ಈ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಈ ಘಟನೆ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಆತಂಕವನ್ನು ಉಂಟುಮಾಡಿದ್ದು, ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
Bomb Threat Call to Bengaluru Police Control Room, CCB Arrests Accused