ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆಯ ಇ-ಮೇಲ್ - Bomb Threat

ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಹಾಕಿದ ಕಿಡಿಗೇಡಿಗಳು! ಬಾಂಬ್ ಬೆದರಿಕೆಯ ಇ-ಮೇಲ್ ನಂತರ ಪೊಲೀಸರ ಹುಡುಕಾಟ

  • ಬೆಂಗಳೂರಿನ ಕ್ರಿಸಲಿಸ್ ಹೈ ಶಾಲೆಗೆ ಬಾಂಬ್ ಬೆದರಿಕೆ
  • ಇಮೇಲ್ ಕಳಿಸಿದ ಕಿಡಿಗೇಡಿಗಳಿಗಾಗಿ ಹುಡುಕುವ ಕಾರ್ಯಚರಣೆ
  • ಕಿರಿಕಿಡಿಗಳನ್ನು ಆದಷ್ಟು ಬೇಗ ಹಿಡಿಯುವುದಾಗಿ ವರ್ತೂರು ಪೊಲೀಸರು ಹೇಳಿಕೆ

ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಹಾಕಿದ ಕಿಡಿಗೇಡಿಗಳು, ಬೆಂಗಳೂರಿನ ವರ್ತೂರು ಸಮೀಪ ಇರುವ ಕ್ರಿಸಲಿಸ್ ಹೈ ಶಾಲೆಗೆ (Bomb Threat) ಬಾಂಬ್  ಹಾಕುವುದಾಗಿ ಇ-ಮೇಲ್ ಕಳುಹಿಸಿದರು ಇದನ್ನು ಕಂಡ ಶಾಲಾ ಸಿಬ್ಬಂದಿಯರು ತಕ್ಷಣವೇ ಎಲ್ಲಾ ಮಕ್ಕಳನ್ನು ಅವರ ಮನೆಗೆ ಕಳುಹಿಸಿದ್ದಾರೆ.

ಬಾಂಬ್ ಬೆದರಿಕೆ (Bomb Threat) ಘಟನೆ ನಡೆದ ಆ ಸ್ಥಳಕ್ಕೆ ವರ್ತೂರು ಸ್ಟೇಷನ್ ಪೊಲೀಸರು ಹಾಗೂ ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಹಾಗೂ ಅಲ್ಲಿ ಯಾವುದೇ ರೀತಿಯ ಶಂಕಿತ ಬಾಂಬ್ ಅಥವಾ ವಸ್ತು ಕಂಡುಬಂದಿಲ್ಲ.

ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆ ಜುಲೈ 23ರಂದು ಶಾಲಾ ಕಾಲೇಜುಗಳಿಗೆ ರಜೆ?

ಈಗ ಪೊಲೀಸರು ಆ ಇ-ಮೇಲ್ ಎಲ್ಲಿಂದ ಬಂದಿದೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಬೆಂಗಳೂರಿಗೆ ಈ ಬೆದರಿಕೆ ಹೊಸದೇನು ಅಲ್ಲ ತಿಂಗಳಿಗೊಮ್ಮೆ ಈ ರೀತಿ ಬಾಂಬ್ ಬೆದರಿಕೆ ಬರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಆದಷ್ಟು ಬೇಗ ಆ ಕಿಡಿಗೇಡಿಗಳನ್ನು ಹಿಡಿದು ಕಾನೂನು ಅಡಿಯಲ್ಲಿ ಶಿಕ್ಷೆಕೊಡುವುದಾಗಿ ವರ್ತೂರು ಪೊಲೀಸರು ಹೇಳಿಕೆ ಕೊಟ್ಟಿದ್ದಾರೆ.  ಈ ಬಾಂಬ್ ಬೆದರಿಕೆಯ ಇ-ಮೇಲ್ ಈ ಹಿಂದೆ ಜುಲೈ 18ರಂದು ಆರ್ ಆರ್ ನಗರ ಕೆಂಗೇರಿ ಶಾಲೆಗೂ ಸೇರಿದಂತೆ ಬೆಂಗಳೂರಿನ 40 ಖಾಸಗಿ ಶಾಲೆ ಮೇಲೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಪೋಲಿಸ್ ಸಿಬ್ಬಂದಿಯು ಮತ್ತು ಬಾಂಬ್ ಸ್ಕ್ವಾಡ್ ಸಿಬ್ಬಂದಿಯೂ ತಕ್ಷಣ ಆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಆದರೆ ಯಾವುದೇ ರೀತಿಯ  ಅನುಮಾನಾಸ್ಪದ  ವಸ್ತುಗಳು ಕಂಡು ಬಂದಿಲ್ಲ

Bomb threat email to another school in Bengaluru

ಮಾಹಿತಿ ಹಾಗೂ ನಿಖರ ಸುದ್ದಿಗಳಿಗೆ Kannada News Today ಪ್ರತಿದಿನ ಭೇಟಿ ನೀಡಿ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories