ಅಕ್ರಮ ಬಿಪಿಎಲ್ ಕಾರ್ಡ್! ಬೆಂಗಳೂರಿನಲ್ಲಿ ಲಕ್ಷಾಂತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ

ರಾಜ್ಯದಲ್ಲಿ ಸಾವಿರಾರು ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದೆ. ರೇಷನ್ ಸಿಗದ ಕಾರಣ ಬಡಕುಟುಂಬಗಳು ದಾಖಲೆ ಮರುಪರಿಶೀಲನೆಗೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

Karnataka BPL Ration Card: ರಾಜ್ಯ ಸರ್ಕಾರವು ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಕಾರ್ಯಾಚರಣೆಗೆ ವೇಗ ನೀಡಿದ್ದು, ಆಘಾತಕ್ಕೆ ಒಳಗಾದ ಬಡಕುಟುಂಬಗಳು ರೇಷನ್ ಅಂಗಡಿಗಳ ಮುಂದೆ ತೀವ್ರ ಉದ್ವಿಗ್ನತೆಗೆ ಒಳಗಾಗಿದ್ದಾರೆ. ಕಳೆದ ತಿಂಗಳು ರೇಷನ್ ಸಿಕ್ಕಿದ್ದರೂ ಈ ಬಾರಿ ನೀಡದ ಕಾರಣ, ಅನೇಕರು ಅಧಿಕಾರಿಗಳ ಗಮನ ಸೆಳೆಯಲು ಕಚೇರಿಗಳ ಮುಂದೆ ಜಮಾಯಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರ ಸಿಬಿಡಿಟಿ ವರದಿ ಆಧಾರದಲ್ಲಿ ಲಕ್ಷಾಂತರ ಕಾರ್ಡ್‌ಗಳು ರದ್ದು ಆಗುವ ಸಾಧ್ಯತೆ ಅಧಿಕಾರಿಗಳ ಅಂದಾಜು. ತೆರಿಗೆ ಕಟ್ಟುತ್ತಿದ್ದರೂ ಬಿಪಿಎಲ್ ಕಾರ್ಡ್ ಬಳಸಿದವರು ಈಗ ಎಪಿಎಲ್ ಪಟ್ಟಿಗೆ ಸರಿಯಲಿದ್ದಾರೆ. ಆಹಾರ ಇಲಾಖೆಗೆ ಕಳೆದ ತಿಂಗಳು ಬಂದ ಟ್ಯಾಕ್ಸ್ ಮಾಹಿತಿ ಈ ಕ್ರಮಕ್ಕೆ ಕಾರಣವಾಗಿದೆ.

ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲೇ 13,329 ಕಾರ್ಡ್‌ಗಳನ್ನು ರದ್ದು ಮಾಡಿ ಎಪಿಎಲ್‌ಗೆ ಪರಿವರ್ತಿಸಲಾಗಿದೆ. ರೇಷನ್ ಸಿಗದ ಕಾರಣ ಕಳವಳಗೊಂಡಿರುವ ಲಾಭಾರ್ಥಿಗಳಲ್ಲಿ ಒಬ್ಬ ಮಹಿಳೆ, “ನಾವು ತೆರಿಗೆ ಕಟ್ಟುವುದೇ ಇಲ್ಲ, ಮಗಳು ಕೆಲಸ ಮಾಡುತ್ತಿದ್ದಳು, ಈಗ ಮದುವೆಯಾಗಿ ಬೇರೆ ಮನೆಯಲ್ಲಿದ್ದಾರೆ. ಆದರೂ ನಮ್ಮ ಕಾರ್ಡ್ ರದ್ದು ಆಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ಸರ್ಕಾರ ಹೊರಡಿಸಿದ ಮಾನದಂಡಗಳ ಪ್ರಕಾರ, ಸರ್ಕಾರಿ ನೌಕರರ ಕುಟುಂಬ, ನಗರದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚು ಆಸ್ತಿ, ನಾಲ್ಕು ಚಕ್ರ ವಾಹನ, 3 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಅಥವಾ ವಾರ್ಷಿಕ ಆದಾಯ ₹1.20 ಲಕ್ಷ ಮೀರಿದರೆ ಬಿಪಿಎಲ್ ಪಡೆಯಲು ಅರ್ಹರಾಗುವುದಿಲ್ಲ ಎಂಬ ನಿಯಮಗಳು ಜಾರಿಯಲ್ಲಿವೆ.

ಬಿಪಿಎಲ್ ಕಾರ್ಡ್ ದುರುಪಯೋಗ ತಡೆಗಟ್ಟಲು ಸರ್ಕಾರ ಈಗಾಗಲೇ ಪಡಿತರ ಅಂಗಡಿಗಳಿಗೆ ನೋಟಿಸ್ ಕಳುಹಿಸಿ ದಾಖಲೆ ಪರಿಶೀಲನೆಗೆ ಸೂಚಿಸಿದೆ. ಇದರಿಂದ ಬಡವರು ಗೊಂದಲಕ್ಕೆ ಒಳಗಾಗಿದ್ದು, ಮಾನವೀಯ ದೃಷ್ಟಿಯಿಂದ ಮರುಪರಿಶೀಲನೆ ಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕಳೆದ ವರ್ಷ ಹಾವೇರಿ ಜಿಲ್ಲೆಯಲ್ಲಿ 14 ಸಾವಿರಕ್ಕೂ ಹೆಚ್ಚು ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡಿದ ಪ್ರಕರಣವೂ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

BPL Card Cancellation Drive Creates Panic

English Summary▼

TRENDING ARTICLES1 / 5

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories