PM Modi Security Breach: ಕರ್ನಾಟಕದಲ್ಲಿ ಮತ್ತೆ ಪ್ರಧಾನಿ ಮೋದಿ ಭದ್ರತೆಗೆ ಭಂಗ, ರೋಡ್ ಶೋ ವೇಳೆ ಪ್ರಧಾನಿ ಬೆಂಗಾವಲು ಪಡೆಯತ್ತ ಓಡಿ ಬಂದ ವ್ಯಕ್ತಿ, ವಿಡಿಯೋ ನೋಡಿ
PM Modi Security Breach: ಕರ್ನಾಟಕದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪವಾಗಿದೆ. ಶನಿವಾರ ದಾವಣಗೆರೆಯಲ್ಲಿ ಪ್ರಧಾನಿಯವರ ರೋಡ್ ಶೋ ವೇಳೆ ವ್ಯಕ್ತಿಯೊಬ್ಬರು ಅವರ ಬೆಂಗಾವಲು ಪಡೆಯತ್ತ ಓಡಲು ಯತ್ನಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಕೂಡಲೇ ಆತನನ್ನು ತಡೆದು ಬಂಧಿಸಿದ್ದಾರೆ.
PM Modi Security Breach: ಕರ್ನಾಟಕದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪವಾಗಿದೆ. ಶನಿವಾರ ದಾವಣಗೆರೆಯಲ್ಲಿ (Davangere) ಪ್ರಧಾನಿಯವರ ರೋಡ್ ಶೋ (Road Show) ವೇಳೆ ವ್ಯಕ್ತಿಯೊಬ್ಬರು ಅವರ ಬೆಂಗಾವಲು ಪಡೆಯತ್ತ ಓಡಲು ಯತ್ನಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಕೂಡಲೇ ಆತನನ್ನು ತಡೆದು ಬಂಧಿಸಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (Video Goes Viral).
ವೈರಲ್ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯತ್ತ ಓಡುತ್ತಿರುವುದನ್ನು ಕಾಣಬಹುದು. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ತಡೆದರು. ಈ ವ್ಯಕ್ತಿ ಕೊಪ್ಪಳ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ..
#WATCH | Karnataka: Security breach during PM Modi's roadshow in Davanagere, earlier today, when a man tried to run towards his convoy. He was later detained by police.
(Visuals confirmed by police) pic.twitter.com/nibVxzgekz
— ANI (@ANI) March 25, 2023
ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ, ಕಾನೂನು ಮತ್ತು ಸುವ್ಯವಸ್ಥೆ, ಎಡಿಜಿಪಿ ಅಲೋಕ್ ಕುಮಾರ್ ಅವರು ಪ್ರಧಾನಿಯವರ ಭದ್ರತೆಯಲ್ಲಿ ಉಲ್ಲಂಘನೆಯ ವರದಿಗಳನ್ನು ತಿರಸ್ಕರಿಸಿದರು. ದಾವಣಗೆರೆಯಲ್ಲಿ ಪ್ರಧಾನಿಯವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ. ಇದು ವಿಫಲ ಪ್ರಯತ್ನವಾಗಿತ್ತು. ತಕ್ಷಣ ನಾನು ಮತ್ತು ಎಸ್‌ಪಿಜಿ ಆ ವ್ಯಕ್ತಿಯನ್ನು ಸುರಕ್ಷಿತ ದೂರದಲ್ಲಿ ಹಿಡಿದೆವು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
ಗಮನಾರ್ಹವೆಂದರೆ ಈ ವರ್ಷದ ಜನವರಿ ತಿಂಗಳ ಆರಂಭದಲ್ಲಿ ಪ್ರಧಾನಿ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಇದೇ ರೀತಿಯ ಭದ್ರತಾ ಲೋಪವಾಗಿತ್ತು. ಹುಬ್ಬಳ್ಳಿಯಲ್ಲಿ ರೋಡ್ ಶೋ ವೇಳೆ ಯುವಕನೊಬ್ಬ ಪೊಲೀಸ್ ಬ್ಯಾರಿಕೇಡ್ ಮುರಿದು ಪ್ರಧಾನಿ ಕಾರಿನತ್ತ ಓಡಿ ಪ್ರಧಾನಿಗೆ ಹಾರ ಹಾಕಲು ಯತ್ನಿಸಿದ್ದನು.
ಪ್ರಧಾನಿ ಮೋದಿ ಅವರು ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ಬೆಂಗಳೂರಿನ ಕೃಷ್ಣರಾಜಪುರದವರೆಗೆ 13.71 ಕಿಮೀ ಉದ್ದದ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. 4,249 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳಿವೆ. ಅವರು ಹೊಸದಾಗಿ ಉದ್ಘಾಟನೆಗೊಂಡ ಮೆಟ್ರೋ ಮಾರ್ಗದಲ್ಲಿ ಪ್ರಯಾಣಿಸಿದರು ಮತ್ತು ತಮ್ಮ ಭೇಟಿಯ ಸಮಯದಲ್ಲಿ ಮೆಟ್ರೋ ನೌಕರರು ಮತ್ತು ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರೊಂದಿಗೆ ಸಂವಾದ ನಡೆಸಿದರು.
Breach in PM Modi security again in Karnataka, man ran towards PM convoy during road show