Bengaluru News

ಬೆಂಗಳೂರು ಗ್ರಾಮಾಂತರದಲ್ಲಿ ಅಮಾನುಷ ಘಟನೆ, ಮಗುವನ್ನು ಸಿಂಟೆಕ್ಸ್ ಟ್ಯಾಂಕ್‌ಗೆ ಹಾಕಿ ಹತ್ಯೆ

ಬೆಂಗಳೂರು (Bengaluru): ಬೆಂಗಳೂರು ಗ್ರಾಮಾಂತರದಲ್ಲಿ ಅಮಾನುಷ ಘಟನೆ ನಡೆದಿದೆ. ಒಂದು ವರ್ಷದ ಮಗುವನ್ನು ಸಿಂಟೆಕ್ಸ್ ಟ್ಯಾಂಕ್‌ಗೆ ಹಾಕಿ ಹತ್ಯೆ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನು ಮತ್ತು ಹರ್ಷಿತಾ ಎಂಬ ದಂಪತಿಗಳ ಮಗು ಎನ್ನಲಾಗಿದೆ.

ದಂಪತಿಗಳು ಆನೇಕಲ್ (Anekal) ತಾಲೂಕಿನ ಇಗ್ಗಲೂರಿನಲ್ಲಿ ವಾಸವಾಗಿದ್ದಾರೆ. ಅವರು ಅಂತರ್ಜಾತಿ ವಿವಾಹವಾಗಿದ್ದರು. ಆರೂವರೆ ತಿಂಗಳ ಹಿಂದೆ ಸಿಸೇರಿಯನ್ ಮೂಲಕ ಹರ್ಷಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಬೆಂಗಳೂರು ಗ್ರಾಮಾಂತರದಲ್ಲಿ ಅಮಾನುಷ ಘಟನೆ, ಮಗುವನ್ನು ಸಿಂಟೆಕ್ಸ್ ಟ್ಯಾಂಕ್‌ಗೆ ಹಾಕಿ ಹತ್ಯೆ

ಉಸಿರಾಟ ಸಮಸ್ಯೆಯಿಂದ ಮಗುವಿಗೆ ಲಕ್ಷ ಲಕ್ಷ ವೆಚ್ಚದಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸಂಪೂರ್ಣ ಚೇತರಿಸಿಕೊಂಡ ಬಳಿಕ ವಾರದ ಹಿಂದೆ ಮನೆಗೆ ಕರೆತರಲಾಗಿತ್ತು. ಸೋಮವಾರ ಮಧ್ಯಾಹ್ನ ಶಿಶು ನಾಪತ್ತೆಯಾಗಿತ್ತು.

ದಂಪತಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪೊಲೀಸರು ಬಂದು ಮನೆಯ ಸುತ್ತಮುತ್ತ ತಪಾಸಣೆ ನಡೆಸಿದರು. ಬಳಿಕ, ಸಿಂಟೆಕ್ಸ್ ಟ್ಯಾಂಕ್ ಪರಿಶೀಲಿಸಿದಾಗ ಶಿಶು ಸಾವನ್ನಪ್ಪಿರುವುದು ಕಂಡುಬಂದಿದೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮಗುವಿನ ಹತ್ಯೆ ಹಿಂದೆ ಯಾರ ಕೈವಾಡವಿದೆ ಎಂಬುದು ತನಿಖೆಯಲ್ಲಿ ಬಯಲಾಗಬೇಕಿದೆ.

Brutal incident in Bengaluru Rural, child killed by putting into Syntex tank

Our Whatsapp Channel is Live Now 👇

Whatsapp Channel

Related Stories