ನನಗೂ ಕೊಲೆಗೂ ಸಂಬಂಧವಿಲ್ಲ: ಕೆಆರ್‌ಪುರಂ ಶಾಸಕ ಬೈರತಿ ಬಸವರಾಜ್

ಕೆಆರ್‌ಪುರಂ ಶಾಸಕ ಬೈರತಿ ಬಸವರಾಜ್ ವಿರುದ್ಧ ಭಾರತಿ ನಗರದ ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಆದರೆ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  • ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆ
  • ಕಾನೂನಿನ ಮೂಲಕ ಹೋರಾಟ ಮಾಡುತ್ತೇನೆ, ಬೈರತಿ ಬಸವರಾಜ್
  • ಕಿತ್ತಗನೂರು ಜಾಗದ ವಿವಾದದಿಂದ ಉಗ್ರ ಕೊಲೆ ನಡೆದಿರುವ ಶಂಕೆ

ಬೆಂಗಳೂರು (Bengaluru) ಭಾರತಿನಗರದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಹಲಸೂರು ಕೆರೆಯ ಬಳಿಯೇ ಕಳೆದ ಮಂಗಳವಾರ ರಾತ್ರಿ ಬರ್ಬರವಾಗಿ ಕೊಂದು ಹಾಕಲಾಗಿದೆ. ಈ ಪ್ರಕರಣದಲ್ಲಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಬೈರತಿ ಬಸವರಾಜ್‌ರನ್ನು ಐದನೇ ಆರೋಪಿಯಾಗಿ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನಲ್ಲಿ, ಮನೆ ಜಾಗದ ವಿವಾದವೊಂದರ ಹಿನ್ನೆಲೆಯಿಂದ ಶಿವಪ್ರಕಾಶ್ ಕೊಲೆಯಾದರೆಂದು ಆರೋಪಿಸಿದ್ದಾರೆ.

ಅವರು ನೀಡಿದ ಮಾಹಿತಿಯಂತೆ, ಕೊಲೆಗೂ ಮುನ್ನ ಹಲವಾರು ಬಾರಿ ಶಿವಪ್ರಕಾಶ್‌ ಗೆ ಬೆದರಿಕೆ ಕರೆಗಳು ಬಂದಿದ್ದು, ಬೈರತಿ ಬಸವರಾಜ್ ಸೇರಿದಂತೆ ಕೆಲ ಪ್ರಮುಖ ವ್ಯಕ್ತಿಗಳ ಹೆಸರುಗಳನ್ನು ಹೇಳಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.

ಆದರೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ಆರೋಪಿಗಳನ್ನು ನೋಡಲಿಲ್ಲ, ಕೊಲೆಯಾದ ವ್ಯಕ್ತಿಯನ್ನೂ ನೋಡಿಲ್ಲ. ನನಗೆ ಈ ಪ್ರಕರಣದ ಬಗ್ಗೆ ಮಾಧ್ಯಮಗಳ ಮೂಲಕ ಮಾತ್ರ ಗೊತ್ತಾಯಿತು. ಯಾರು ಬೇಕಾದರೂ ಯಾರ ಮೇಲಾದರೂ ಸುಮ್ಮನೆ ದೂರು ನೀಡಬಹುದು ಅಂದ್ರೆ, ತಕ್ಷಣ FIR ಆಗುತ್ತಾ?” ಎಂದು ಪ್ರಶ್ನಿಸಿದ್ರು.

shiva-prakash

“ನಾನು ಇದನ್ನು ಸುಮ್ಮನೆ ಬಿಡಲ್ಲ. FIR ನಿಂದ ನನ್ನ ಹೆಸರು ತೆಗೆದುಹಾಕಲು ಕಾನೂನು ಹೋರಾಟ ಮಾಡುತ್ತೇನೆ. ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸುತ್ತೇನೆ. ಇದು ರಾಜಕೀಯ ಪ್ರೇರಿತ ಷಡ್ಯಂತ್ರ ಎಂಬ ಅನುಮಾನ ನನಗೆ ಬಂದಿದೆ,” ಎಂದಿದ್ದಾರೆ.

ಈ ಪ್ರಕರಣ ಸಂಬಂಧ ಇನ್ನೂ ತನಿಖೆ ಮುಂದುವರಿದಿದ್ದು, ಸಿಸಿಟಿವಿ (CCTV footage), ಮೊಬೈಲ್ ಡೇಟಾ, ಹಾಗೂ ಸಾಕ್ಷಿಗಳ ಆಧಾರದಲ್ಲಿ ಸತ್ಯ ಬಯಲಾಗುವ ನಿರೀಕ್ಷೆ ಇದೆ. ಆದರೆ ಈ ಮಧ್ಯೆ ಮಾಜಿ ಸಚಿವರ ತಮ್ಮ ಹೇಳಿಕೆ ನೀಡಿದ್ದಾರೆ.

Byrati Basavaraj Denies Role in Murder Case

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories