Bangalore News

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಮೂವರು ಗಂಭೀರ ಗಾಯ

  • ಓವರ್‌ಟೇಕ್ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ
  • ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಬೋರ್ಡ್ ಓವರ್‌ ಬ್ರಿಡ್ಜ್‌ನಲ್ಲಿ ಘಟನೆ
  • ಮೂವರಿಗೆ ಗಂಭೀರ ಗಾಯಗಳು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳು

ಬೆಂಗಳೂರು (Bengaluru): ಓವರ್‌ಟೇಕ್ ಮಾಡುವ ಸಮಯದಲ್ಲಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಎಲೆಕ್ಟ್ರಾನಿಕ್ ಸಿಟಿ-ಸಿಲ್ಕ್ ಬೋರ್ಡ್ ಓವರ್‌ ಬ್ರಿಡ್ಜ್ ಮೇಲೆ ನಡೆದಿದೆ.

ತಂಜಿಮ್, ತಾಂಜೆ, ಮೊಹಮ್ಮದ್ ಸಾಹಿಲ್, ಅಬ್ದುಲ್ ಮತ್ತು ಮೊಹಮ್ಮದ್ ಸಿದರ್ ಪಿಕ್ನಿಕ್ ಮುಗಿಸಿ ಹಿಂದಿರುಗುವಾಗ, ಸಿಂಗಸಂದ್ರದಲ್ಲಿ ಈ ಅಪಘಾತ ಸಂಭವಿಸಿದೆ.

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ, ಮೂವರು ಗಂಭೀರ ಗಾಯ

ಕಾರಿನ ಮುಂದೆ ಭಾಗವು ಸಂಪೂರ್ಣವಾಗಿ ಜಖಂಗೊಂಡಿದ್ದು, ಏರ್‌ಬ್ಯಾಗ್‌ಗಳ ಅಳವಡಿಕೆಯಿಂದ ಹೆಚ್ಚಿನ ಅಪಾಯ ತಪ್ಪಿದೆ. ಮೂವರು ಗಂಭೀರ ಗಾಯಗೊಂಡಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಚಾರ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

Car Crashes into Divider on Bengaluru Electronic City-Silk Board Flyover

Our Whatsapp Channel is Live Now 👇

Whatsapp Channel

Related Stories