ಗಂಡಸರಿಗೂ ಉಚಿತ ಬಸ್ ಪ್ರಯಾಣ ಯೋಜನೆ; ಸಿದ್ದರಾಮಯ್ಯ ಹೇಳಿದ್ದೇನು!

ಗಂಡಸರಿಗೂ ಉಚಿತ ಬಸ್ ಪ್ರಯಾಣ ನೀಡಿದರೆ ಕೆಎಸ್ಆರ್'ಟಿಸಿ ಮುಚ್ಚಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು.

ಚಾಮರಾಜನಗರ: “ಗಂಡಸರಿಗೂ ಉಚಿತ ಬಸ್ ಪ್ರಯಾಣ ನೀಡಿದರೆ ಕೆಎಸ್ಆರ್’ಟಿಸಿ (KSRTC) ಮುಚ್ಚಬೇಕು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶನಿವಾರ ಹೇಳಿದರು.

ಯಳಂದೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಗ್ಯಾರಂಟಿ ಯೋಜನೆ ಬಗ್ಗೆ ತಿಳಿಸಿದರು. ಈ ವೇಳೆ, ಸ್ಥಳೀಯ ಪುರುಷರು “ನಮಗೂ ಉಚಿತ ಬಸ್ ಸೇವೆ ನೀಡಿ” ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಗಂಡಸರಿಗೂ ಉಚಿತ ಬಸ್ ಕೊಟ್ಟರೆ ಕೆಎಸ್ಆರ್’ಟಿಸಿ ಮುಚ್ಚಬೇಕು,” ಎಂದು ಹೇಳಿದ್ದಾರೆ.

ಮಕ್ಕಳ ಆರೋಗ್ಯ ಸೇವೆ ಬಗ್ಗೆ ಮಾತನಾಡಿದ ಸಿಎಂ, “ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆ ಪೂರೈಸಲು ಎಲ್ಲಾ ಜಿಲ್ಲೆಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ,” ಎಂದು ಹೇಳಿದರು.

ಗಂಡಸರಿಗೂ ಉಚಿತ ಬಸ್ ಪ್ರಯಾಣ ಯೋಜನೆ; ಸಿದ್ದರಾಮಯ್ಯ ಹೇಳಿದ್ದೇನು!

ಅದೇ ವೇಳೆ, ಆರೋಗ್ಯ ಸೇವೆ ನೀಡುವುದು ಸರ್ಕಾರದ ಬದ್ಧತೆ ಎಂದು ಮಾತನಾಡಿದ ಸಿಎಂ, “ರೋಗಿಗಳಿಗೆ ಆತ್ಮಸ್ಥೈರ್ಯ ನೀಡುವ ಕೆಲಸವನ್ನು ವೈದ್ಯರು ಕೈಗೊಳ್ಳಬೇಕು,” ಎಂದು ಸಲಹೆ ನೀಡಿದರು.

CM Siddaramaiah Says KSTRC Would Have to Shut If Free Bus Service for Men is Introduced

Related Stories