ಮತ್ತೆ ಕೋವಿಡ್ ಆತಂಕ: ಕರ್ನಾಟಕ 8 ಪ್ರಕರಣಗಳು ಸೇರಿ ದೇಶದಲ್ಲಿ 257 ಕೇಸ್ ಪತ್ತೆ
ಸಿಂಗಾಪುರ, ಹಾಂಕಾಂಗ್ ನಂತರ ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು; ಕರ್ನಾಟಕದಲ್ಲಿ 8 ಕೇಸ್ ಪತ್ತೆ, ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಜನರು ಎಚ್ಚರದಿಂದಿರಬೇಕು.

- ಕರ್ನಾಟಕದಲ್ಲಿ 8 ಹೊಸ ಕೋವಿಡ್ ಪ್ರಕರಣಗಳು ದಾಖಲೆ
- ಭಾರತದಲ್ಲಿ ಒಟ್ಟು 257 ಕೇಸ್ ಪತ್ತೆ
- LF.7 ಮತ್ತು NB.1.8 ತಳಿಗಳಿಂದ ಹೊಸ ಅಲೆ ಆರಂಭ
ಬೆಂಗಳೂರು (Bengaluru): ಸಿಂಗಾಪುರ (Singapore) ಮತ್ತು ಹಾಂಕಾಂಗ್ (Hong Kong) ನಲ್ಲಿ ಕೋವಿಡ್ ಪ್ರಕರಣಗಳು (covid cases rise) ತೀವ್ರವಾಗಿ ಹೆಚ್ಚುತ್ತಿರುವ ನಡುವೆ, ಈಗ ಭಾರತದಲ್ಲೂ ಕೊರೊನಾದ ಹೊಸ ಅಲೆ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಹೊಸ ತಳಿಗಳಿಂದ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ 257 ಪ್ರಕರಣಗಳು ದೃಢಪಟ್ಟಿವೆ.
ಈ ಪೈಕಿ ಕರ್ನಾಟಕದಲ್ಲಿಯೇ 8 ಕೇಸ್ಗಳು ಪತ್ತೆಯಾಗಿದ್ದು, ಕೇರಳದಲ್ಲಿ 69, ಮಹಾರಾಷ್ಟ್ರದಲ್ಲಿ 44, ತಮಿಳುನಾಡು 34, ಹಾಗೂ ಗುಜರಾತ್, ದೆಹಲಿ, ಹರ್ಯಾಣ, ರಾಜಸ್ಥಾನ, ಸಿಕ್ಕಿಂ ರಾಜ್ಯಗಳಲ್ಲಿಯೂ ಸೋಂಕಿತರಿದ್ದಾರೆ.
ಆರೋಗ್ಯ ಇಲಾಖೆ ಪ್ರಕಾರ, ಹೊಸ ತಳಿಗಳು LF.7 ಮತ್ತು NB.1.8 ಎಂಬುವಾಗಿವೆ. ಇವುಗಳು ಜೆಎನ್.1 (JN.1) ತಳಿಗೆ ಸೇರಿವೆ ಎಂದು ಹೇಳಲಾಗಿದೆ.
ಭಾರತದಲ್ಲಿ ಸದ್ಯಕ್ಕೆ ಗಂಭೀರ ಲಕ್ಷಣಗಳು ಕಂಡುಬಂದಿಲ್ಲವಾದರೂ, ಆರೋಗ್ಯ ಇಲಾಖೆ ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯನ್ನು ರವಾನಿಸಿದೆ. “ನಿರ್ಲಕ್ಷ್ಯ ಬೇಡ, ಮುಂಜಾಗ್ರತೆ ಅಗತ್ಯ,” ಎಂಬ ಸಂದೇಶದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. (health advisory, covid alert)
ಇದೀಗ ಸಿಂಗಾಪುರ ಆರೋಗ್ಯ ಸಚಿವಾಲಯ ಪ್ರಕಟಿಸಿದ ಮಾಹಿತಿ ಪ್ರಕಾರ, ಮೇ 3ರಿಂದ 16ರವರೆಗೆ 14,200 ಹೊಸ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಅಲ್ಲಿ ಈಗಾಗಲೇ ಅಲರ್ಟ್ ಘೋಷಿಸಲಾಗಿದೆ. ಇದೇ ರೀತಿಯಲ್ಲಿ ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮಗಳು ನಡೆಯುತ್ತಿದ್ದರೂ, ಜನರು ಮಾಸ್ಕ್ ಬಳಸುವುದು, ಜನಸಂದಣಿ ಜಾಗಗಳಲ್ಲಿ ಮುಕ್ತ ಸಂಚಾರ ತಪ್ಪಿಸುವುದು ಅವಶ್ಯಕ.
Covid Cases Rise Again, 8 in Karnataka







