ಕರ್ನಾಟಕ ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ, ತಪ್ಪದೇ ತಿಳಿಯಬೇಕಾದ ಮಾಹಿತಿ ಇದು
ರಾಜ್ಯದಲ್ಲಿ ಮಳೆಯಿಂದಾಗಿರುವ ಭಾರೀ ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಪ್ರಕ್ರಿಯೆ ವೇಗಗೊಂಡಿದೆ. ಹಣ ಬಂದಿಲ್ಲದ ರೈತರು ಫ್ರೂಟ್ಸ್ ಐಡಿ, ಬ್ಯಾಂಕ್ ನವೀಕರಣ ಮತ್ತು ದಾಖಲೆ ಪರಿಶೀಲನೆ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

- ಬೆಳೆ ಪರಿಹಾರ ಹಣ ಖಾತೆಗಳಿಗೆ ಜಮಾ
- ಫ್ರೂಟ್ಸ್ ಐಡಿ–ಬ್ಯಾಂಕ್ ದಾಖಲೆ ಪರಿಶೀಲಿಸಿ
- ಜಿಲ್ಲಾವಾರು ಬಿಡುಗಡೆ ಪ್ರಕ್ರಿಯೆ ವೇಗ
ಬೆಂಗಳೂರು: ಈ ಬಾರಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಾಖಲೆ ಮಟ್ಟದ ಮಳೆ ಸುರಿದುದರಿಂದ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಭಾರೀ ನಷ್ಟ ಅನುಭವಿಸಿವೆ. ಬೀದರ್, ಕಲಬುರ್ಗಿ, ಗದಗ, ಯಾದಗಿರಿ, ವಿಜಯಪುರ, ಬೆಳಗಾವಿ ಮತ್ತು ಧಾರವಾಡ ಭಾಗಗಳಲ್ಲಿ ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಿದ್ದು, ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ವರದಿಯಾಗಿದೆ. ಈ ನಡುವೆ ಸರ್ಕಾರದ ಪರಿಹಾರ ಹಣ ರೈತರಿಗೆ ಮತ್ತೆ ಹೊಸ ಭರವಸೆ ಮೂಡಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆ ಹಾನಿ (Crop Compensation) ಮೌಲ್ಯಮಾಪನ ಪೂರ್ಣಗೊಳಿಸಿದ ನಂತರ ಪರಿಹಾರ ಬಿಡುಗಡೆ ಪ್ರಕ್ರಿಯೆಯನ್ನು ಆರಂಭಿಸಿವೆ. ಅದರಲ್ಲಿ, ಧಾರವಾಡ ಜಿಲ್ಲೆಯಲ್ಲಿ ಮಾತ್ರ 65,000ಕ್ಕೂ ಹೆಚ್ಚು ರೈತರಿಗೆ ಈಗಾಗಲೇ ಪರಿಹಾರ ಧನ ಜಮಾ ಆಗಿದೆ.
ಕಲಬುರ್ಗಿ ಜಿಲ್ಲೆಯಲ್ಲಿ 667 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, 2.36 ಲಕ್ಷಕ್ಕೂ ಹೆಚ್ಚು ರೈತರು ಈ ಮೊತ್ತದಿಂದ ಪ್ರಯೋಜನ ಪಡೆದಿದ್ದಾರೆ.
ಮಳೆಯ ಅಬ್ಬರದಿಂದ ಸಂಪೂರ್ಣವಾಗಿ ಹಾಳಾದ ಜಮೀನಿನ ಪ್ರಮಾಣವೂ ಗಮನಾರ್ಹವಾಗಿದೆ. ಖರೀಫ್ ಕಾಲದಲ್ಲಿ 12.54 ಲಕ್ಷ ಹೆಕ್ಟರ್ ಜಮೀನು ಹಾನಿಗೊಳಗಾದರೆ, ಅದರಲ್ಲಿ 8.88 ಲಕ್ಷ ಹೆಕ್ಟರ್ ಕೃಷಿ ಬೆಳೆಗಳು ಮತ್ತು 71,000 ಹೆಕ್ಟರ್ ತೋಟಗಾರಿಕಾ ಬೆಳೆಗಳು ಸೇರಿವೆ. ಬೆಳೆ ನಾಶದ ಜೊತೆಗೆ ಬೀಜ, ಗೊಬ್ಬರ, ಕಾರ್ಮಿಕ ವೆಚ್ಚ ಸೇರಿ ರೈತರು ಹೆಚ್ಚುವರಿ ಹೊರೆ ಅನುಭವಿಸುತ್ತಿದ್ದಾರೆ.
ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ಹೆಚ್ಚುವರಿ ನಿಧಿ ಮೀಸಲಿಟ್ಟಿದ್ದು, 200 ಕೋಟಿ ರೂಪಾಯಿ ರಾಜ್ಯದಿಂದ, 391 ಕೋಟಿ ಕೇಂದ್ರದಿಂದ ಹೊರಡಿಸಲಾಗಿದೆ. ಮುಖ್ಯಮಂತ್ರಿ ಘೋಷಣೆ ಪ್ರಕಾರ, ಅಕ್ಟೋಬರ್ 30 ರಿಂದ ಪರಿಹಾರ ಹಣ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ನವೆಂಬರ್ 30ರೊಳಗೆ ಹೆಚ್ಚಿನ ಅರ್ಹ ರೈತರಿಗೂ ಮೊತ್ತ ತಲುಪಲಿದೆ ಎಂದು ಸರ್ಕಾರ ಹೇಳಿದೆ.
ಹಣ ಬರದೇ ಇರುವ ರೈತರಿಗೆ ಅಧಿಕಾರಿಗಳಿಂದ ವಿಶೇಷ ಸೂಚನೆ ಕೊಡಲಾಗಿದೆ. ಮೊದಲು ನಿಮ್ಮ FRUITS ID ಪೋರ್ಟಲ್ನಲ್ಲಿ ಹೆಸರು ಸರಿಯಾದುದೇ ಎಂದು ಪರಿಶೀಲನೆ ಮಾಡಬೇಕು.
ಹೆಸರು ಅಥವಾ ದಾಖಲೆಗಳಲ್ಲಿ ತಪ್ಪು ಕಂಡು ಬಂದರೆ, ಗ್ರಾಮ ಪಂಚಾಯಿತಿ ಉದ್ಯೋಗಿ, ಲೆಕ್ಕ ಅಧಿಕಾರಿ ಅಥವಾ ತಹಶೀಲ್ದಾರರನ್ನು ಸಂಪರ್ಕಿಸಿ ತಕ್ಷಣ ಸರಿಪಡಿಸಬೇಕಾಗಿದೆ. ಬ್ಯಾಂಕ್ ಖಾತೆ–ಆಧಾರ್ ಲಿಂಕ್ ಹಾಗೂ NPCI ಮ್ಯಾಪಿಂಗ್ ಕಡ್ಡಾಯ.
ಜಿಲ್ಲಾವಾರು ಬಿಡುಗಡೆ ಪ್ರಕ್ರಿಯೆಯ ಜೊತೆಗೆ, ಯಾವ ಬೆಳೆಗೆ ಎಷ್ಟು ಪರಿಹಾರ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಿದೆ:
- ಮಳೆ ಆಶ್ರಿತ ಬೆಳೆಗಳಿಗೆ ₹17,000
- ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟರ್ ₹25,500
- ದೀರ್ಘಕಾಲಿಕ ಬೆಳೆಗಳಿಗೆ ಪ್ರತಿ ಹೆಕ್ಟರ್ ₹31,000
ಬೆಳೆ ಪರಿಹಾರದ ಮೊತ್ತ ಈಗಾಗಲೇ ಹಲವಾರು ಖಾತೆಗಳಿಗೆ ತಲುಪಿದ್ದು, ಹಣ ಬಂದಿಲ್ಲದವರು ತಮ್ಮ ದಾಖಲೆಗಳ ಸರಿಪಡಿಸಿದರೆ ಮಾಡಿದರೆ ಸಮಸ್ಯೆ ಬೇಗ ಪರಿಹಾರವಾಗಲಿದೆ.
ಮಳೆ ಜೊತೆ ಮೈ ನಡುಗಿಸುವ ಚಳಿ! ಬೆಂಗಳೂರು ಸೇರಿ 2 ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ಇನ್ನು ಮೂರೇ ದಿನ ಗಡುವು! ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ನಿಯಮ
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story



