ಬೆಂಗಳೂರು ಪಟಾಕಿ ಮಳಿಗೆಗಳಲ್ಲಿ ಜನಜಂಗುಳಿ! ದೀಪಾವಳಿ ಸಂಭ್ರಮಕ್ಕೆ ವ್ಯಾಪಾರ ಜೋರು
ಬೆಂಗಳೂರು ಸೇರಿದಂತೆ ಎಲ್ಲಾ ನಗರದಲ್ಲಿ ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಂಭ್ರಮ (Diwali Celebration).
ಬೆಂಗಳೂರು (Bengaluru): ಬೆಂಗಳೂರು ಸೇರಿದಂತೆ ಎಲ್ಲಾ ನಗರದಲ್ಲಿ ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಂಭ್ರಮ (Diwali Celebration). ಪಾಟಾಕಿ ಅಂಗಡಿಗಳಲ್ಲಿ (Firecrackers Stalls) ಬಿಡುವಿಲ್ಲದ ಖರೀದಿ ಮುಂದುವರಿದಿದೆ. ಅಂಗಡಿಗಳ ಸಂಖ್ಯೆ ಕಡಿಮೆಯಾದರೂ, ಬೆಲೆ ಏರಿಕೆಯಾದರೂ ವ್ಯಾಪಾರದಲ್ಲಿ ವ್ಯತ್ಯಾಸವಿಲ್ಲ.
ನಗರದ ವಿವಿಧೆಡೆ ಬಿಬಿಎಂಪಿ ಮೈದಾನದಲ್ಲಿ ಹಾಕಲಾರುವ ಪಟಾಕಿ ಸ್ಟಾಲ್ ಗಳಲ್ಲಿ ರಾತ್ರಿಯವರೆಗೂ ಜನರು ಕಿಕ್ಕಿರಿದು ತುಂಬಿದ್ದರು. ಅದರಲ್ಲೂ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮಗೆ ಇಷ್ಟವಾದ ಪಟಾಕಿಗಳನ್ನು ಖರೀದಿಸಿದರು.
ಬೆಂಗಳೂರು ಮಳೆ ಮತ್ತು ಟ್ರಾಫಿಕ್ ಜಾಮ್ ಅವಾಂತರ! ದೀಪಾವಳಿ ಹಬ್ಬದ ಎಫೆಕ್ಟ್
ಮಲ್ಲೇಶ್ವರಂನ ಬಿಬಿಎಂಪಿ ಮೈದಾನದಲ್ಲಿ ಜನಜಂಗುಳಿ ಇತ್ತು. ಸಂಪೂರ್ಣ ದಾಸ್ತಾನು ಮುಗಿದಿದ್ದು, ಹೊಸ ದಾಸ್ತಾನಿಗೆ ಆರ್ಡರ್ ಮಾಡಿರುವುದಾಗಿ ಕೆಲವು ವ್ಯಾಪಾರಿಗಳು ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಬೇಡಿಕೆ ಹೆಚ್ಚಿದೆ ಎಂದರು.
ಅಲ್ಲದೆ, ಮಳಿಗೆಗಳಿಗೆ ಶುಲ್ಕ, ಜಿಎಸ್ ಟಿ ಪಾವತಿಸಿ ನಾವು ವ್ಯಾಪಾರ ಮಳಿಗೆಗಳನ್ನು ಹಾಕಿಕೊಂಡಿದ್ದೇವೆ, ಕೆಲವರು ತಮಿಳುನಾಡಿನ ಹೊಸೂರಿಗೆ ಹೋಗಿ ಅಕ್ರಮವಾಗಿ ಪಟಾಕಿ ತರುತ್ತಾರೆ, ತಂದು ಇಲ್ಲಿ ಅಕ್ರಮವಾಗಿಯೇ ಮಾರಾಟ ಮಾಡುತ್ತಾರೆ, ಅವರಿಗೆ ಯಾವುದೇ ಶುಲ್ಕವಿಲ್ಲಾ, ಎಂದು ಕೆಲವು ವ್ಯಾಪಾರಿಗಳೇ ಹೇಳಿದರು.
Crowded in Bengaluru firecrackers Stalls, Business is booming for Diwali celebrations