Bangalore NewsKarnataka News

ಬಿಪಿಎಲ್ ರೇಷನ್ ಕಾರ್ಡ್ ಇದ್ದೋರಿಗೆ ಕೊನೆಯ ಅವಕಾಶ! ಫೆಬ್ರವರಿ 28, 2025 ಡೆಡ್‍ಲೈನ್

ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಪ್ರಮುಖ ದಾಖಲೆ. ಈಗ ರಾಜ್ಯ ಸರ್ಕಾರವು ಫೆಬ್ರವರಿ 28, 2025ರೊಳಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ನೀಡಿದೆ.

  • ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಪ್ರಾರಂಭ
  • ಫೆಬ್ರವರಿ 28, 2025ರೊಳಗೆ ತಿದ್ದುಪಡಿ ಮಾಡಲು ಅವಕಾಶ
  • ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವೆ ಲಭ್ಯ

ಬೆಂಗಳೂರು (Bengaluru): ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ (Ration Card) ಅತ್ಯಗತ್ಯ ದಾಖಲೆ. ಆದರೆ, ಹಲವರ ರೇಷನ್ ಕಾರ್ಡ್‌ನಲ್ಲಿ ತೊಂದರೆಗಳಿದ್ದು, ಮಾಹಿತಿ ತಪ್ಪಾಗಿ ನಮೂದಾಗಿರುವುದು, ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ ಇತ್ಯಾದಿ ತಿದ್ದುಪಡಿ ಅಗತ್ಯವಿದೆ.

ಈ ಸಮಸ್ಯೆ ಪರಿಹರಿಸಲು, ರಾಜ್ಯ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಪ್ರಕ್ರಿಯೆಗೆ ಅವಕಾಶ ನೀಡಿದೆ. ತಿದ್ದುಪಡಿ ಕಾರ್ಯವು ಫೆಬ್ರವರಿ 28, 2025ರೊಳಗೆ ಬೆಳಗ್ಗೆ 10:00 ರಿಂದ ಸಂಜೆ 4:00 ಗಂಟೆಯವರೆಗೆ ನಡೆಯಲಿದೆ.

ಬಿಪಿಎಲ್ ರೇಷನ್ ಕಾರ್ಡ್ ಇದ್ದೋರಿಗೆ ಕೊನೆಯ ಅವಕಾಶ! ಫೆಬ್ರವರಿ 28, 2025 ಡೆಡ್‍ಲೈನ್

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ನಿಟ್ಟುಸಿರು ಬಿಟ್ಟ ಮಹಿಳೆಯರು

ಎಲ್ಲಿ ತಿದ್ದುಪಡಿ ಮಾಡಬಹುದು?

ಹತ್ತಿರದ ಗ್ರಾಮ ಒನ್ ಕೇಂದ್ರ
ಕರ್ನಾಟಕ ಒನ್ ಕೇಂದ್ರಗಳು
ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳು

ಈ ಕೇಂದ್ರಗಳಿಗೆ ಭೇಟಿ ನೀಡಿ, ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ (Ration Card Update) ಮಾಡಿಕೊಳ್ಳಬಹುದು.

📝 ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಏನು ಬದಲಾವಣೆ ಮಾಡಬಹುದು?

✔️ ಹೊಸ ಸದಸ್ಯರ ಹೆಸರು ಸೇರಿಸುವುದು
✔️ ವಿಳಾಸ ಬದಲಾವಣೆ
✔️ ಅನಗತ್ಯ ಸದಸ್ಯರನ್ನು ತೆಗೆದು ಹಾಕುವುದು
✔️ ನ್ಯಾಯ ಬೆಲೆ ಅಂಗಡಿ ಬದಲಾವಣೆ
✔️ ಇ-ಕೆವೈಸಿ ಪ್ರಕ್ರಿಯೆ ಮಾಡುವುದು
✔️ ಆಧಾರ್ ಲಿಂಕ್ ಮಾಡುವುದು
✔️ ಕುಟುಂಬದ ಮುಖ್ಯಸ್ಥರ ಬದಲಾವಣೆ
✔️ ಇತರ ತಿದ್ದುಪಡಿ ಪ್ರಕ್ರಿಯೆಗಳು

ರೇಷನ್ ಕಾರ್ಡ್ ತಿದ್ದುಪಡಿ

📑 ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅಗತ್ಯ ದಾಖಲೆಗಳು

ಆಧಾರ್ ಕಾರ್ಡ್ – ಎಲ್ಲಾ ಸದಸ್ಯರಿಗೆ
ಜಾತಿ ಪ್ರಮಾಣ ಪತ್ರ (ಆವಶ್ಯಕತೆ ಇದ್ದರೆ)
ಆದಾಯ ಪ್ರಮಾಣ ಪತ್ರ (ಆಗತ್ಯವಿದ್ದರೆ)
ಮೊಬೈಲ್ ಸಂಖ್ಯೆ
6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಜನನ ಪ್ರಮಾಣ ಪತ್ರ
ಇತರೆ ಅಗತ್ಯ ದಾಖಲೆಗಳು

ಹೊಸ ರೇಷನ್ ಕಾರ್ಡ್ ನಿಯಮಗಳು, ಪಾಲಿಸದಿದ್ದರೆ ಕಾರ್ಡ್ ಅಮಾನ್ಯ!

ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಫೆಬ್ರವರಿ 28, 2025ರೊಳಗೆ ಅವಕಾಶ ನೀಡಿದೆ. ಈ ಸೇವೆಯನ್ನು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು. ಜನರು ತಮ್ಮ ವಿಳಾಸ, ಸದಸ್ಯರ ಸೇರ್ಪಡೆ, ಆಧಾರ್ ಲಿಂಕ್, ಇ-ಕೆವೈಸಿ ಮತ್ತಿತರ ತಿದ್ದುಪಡಿ ಮಾಡಬಹುದು.

Deadline for Ration Card Updates Announced

English Summary

Our Whatsapp Channel is Live Now 👇

Whatsapp Channel

Related Stories