Bangalore News

ಬೆಂಗಳೂರಿನಲ್ಲಿ ದೆಹಲಿ ಮೂಲದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು (Bengaluru): ಬೆಂಗಳೂರಿನಲ್ಲಿ ದೆಹಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯೂಟಿ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ ದೆಹಲಿ ಮೂಲದ ಸೋನಿಯಾ (24) ಮೃತಪಟ್ಟವರು. ಆತ್ಮಹತ್ಯೆಗೆ ಕಾರಣಗಳು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೊಂದು ಘಟನೆಯಲ್ಲಿ..

ಬೆಂಗಳೂರಿನಲ್ಲಿ ದೆಹಲಿ ಮೂಲದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪ್ರೀತಿಸಿ ಮೋಸ ಹೋದ ಕಾರಣಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಡಗಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಾಲಕಿ(17)ಯನ್ನು ಪ್ರವೀಣ್ ಎಂಬ ಸಂಬಂಧಿ ಪ್ರೇಮವಿವಾಹದ ಹೆಸರಿನಲ್ಲಿ ದೈಹಿಕವಾಗಿ ಬಳಸಿಕೊಂಡು ಕೈಬಿಟ್ಟಿದ್ದ.

ಇದರಿಂದ ಜುಗುಪ್ಸೆಗೊಂಡ ಯುವತಿ ಜ.20ರಂದು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ. ಬಾಲಕಿಯ ಪೋಷಕರು ಪ್ರವೀಣ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Delhi-based Girl commits suicide by hanging herself in Bengaluru

Our Whatsapp Channel is Live Now 👇

Whatsapp Channel

Related Stories