ಬಿಪಿಎಲ್ ರೇಷನ್ ಕಾರ್ಡ್‌ಗೆ ಎಲ್ಲಿಲ್ಲದ ಬೇಡಿಕೆ! ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ? ಇಲ್ಲಿದೆ ಅಪ್ಡೇಟ್

Story Highlights

ರ್ಕಾರವು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದಾಗ ಇನ್ನಷ್ಟು ಜನರು ಮತ್ತೆ ಅರ್ಜಿ ಸಲ್ಲಿಕೆ ಮಾಡಿದ್ದು, ಅವುಗಳು 3.2 ಲಕ್ಷದಷ್ಟು ಅರ್ಜಿ ಸಲ್ಲಿಕೆ ಆಗಿದೆ.

ನಮಗೆಲ್ಲ ಗೊತ್ತಿರುವ ಹಾಗೆ ಪ್ರಸ್ತುತ ನಮ್ಮ ರಾಜ್ಯದಲ್ಲಿ ಎಲ್ಲರಿಗೂ ಬಿಪಿಎಲ್ ಕಾರ್ಡ್ ಬಹಳ ಮುಖ್ಯವಾಗಿ ಬೇಕಾಗಿದೆ. ಬಡತನದಲ್ಲಿ ಇರುವವರಿಗೆ ಸರ್ಕಾರದಿಂದ ಸಿಗುವ ಅನುಕೂಲಗಳನ್ನು ಪಡೆಯಲು, ಉಚಿತವಾಗಿ ಶಿಕ್ಷಣ ಪಡೆಯುವುದಕ್ಕೆ, ಆರೋಗ್ಯ ಸೇವೆ ಪಡೆಯುವುದಕ್ಕೆ, ಹಣಕಾಸಿನ ಲಾಭ ಕೊಡುವಂಥ ಯೋಜನೆಗಳ ಸಹಾಯ ಪಡೆಯುವುದಕ್ಕೆ, ಇದೆಲ್ಲದಕ್ಕೂ ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು. ಆದರೆ ಬಹಳಷ್ಟು ಜನರಿಗೆ ಅರ್ಜಿ ಸಲ್ಲಿಸಿದ್ದರು ಸಹ ಇನ್ನು ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ..

ಕಳೆದ ವರ್ಷ ಸುಮಾರು 2.96 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದೆ, ಅದರ ಪೈಕಿ 62 ಸಾವಿರ ರೇಶನ್ ಕಾರ್ಡ್ ಗಳನ್ನು ಮಾತ್ರ ವಿತರಣೆ ಮಾಡಲಾಗಿದ್ದು, ಇನ್ನು 2.28 ಲಕ್ಷದಷ್ಟು ರೇಷನ್ ಕಾರ್ಡ್ ವಿತರಣೆ ಮಾಡುವುದು ಪೆಂಡಿಂಗ್ ಇದೆ.

ಅದರ ಜೊತೆಗೆ ಸರ್ಕಾರವು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದಾಗ ಇನ್ನಷ್ಟು ಜನರು ಮತ್ತೆ ಅರ್ಜಿ ಸಲ್ಲಿಕೆ ಮಾಡಿದ್ದು, ಅವುಗಳು 3.2 ಲಕ್ಷದಷ್ಟು ಅರ್ಜಿ ಸಲ್ಲಿಕೆ ಆಗಿದೆ. ಯಾವ ಜಿಲ್ಲೆಯಿಂದ ಎಷ್ಟು ಅರ್ಜಿ ಸಲ್ಲಿಕೆ ಆಗಿದೆ ಎಂದು ನೋಡುವುದಾದರೆ..

ಬಾಗಲಕೋಟೆಯಲ್ಲಿ 13,335 ಅರ್ಜಿಗಳು, ಬಳ್ಳಾರಿಯಲ್ಲಿ 10,501 ಅರ್ಜಿಗಳು, ಬೆಂಗಳೂರು ಪೂರ್ವದಲ್ಲಿ 6082 ಅರ್ಜಿಗಳು, ಬೆಂಗಳೂರು ಉತ್ತರದಲ್ಲಿ 4,747 ಅರ್ಜಿಗಳು, ಬೆಂಗಳೂರು ಪಶ್ಚಿಮದಲ್ಲಿ 4794 ಅರ್ಜಿಗಳು, ಬೆಂಗಳೂರು ದಕ್ಷಿಣದಲ್ಲಿ 11,010 ಅರ್ಜಿಗಳು, ಬೆಳಗಾವಿಯಲ್ಲಿ 32,880 ಅರ್ಜಿಗಳು, ಬೆಂಗಳೂರು ನಗರದಲ್ಲಿ 16,438 ಅರ್ಜಿಗಳು, ಬೆಂಗಳೂರು ಗ್ರಾಮಾಂತರದಲ್ಲಿ 7,041 ಅರ್ಜಿಗಳು, ಬೀದರ್‌ ನಲ್ಲಿ 18,262 ಅರ್ಜಿಗಳು,
ಚಾಮರಾಜನಗರದಲ್ಲಿ 3,639 ಅರ್ಜಿಗಳು..

ಚಿಕ್ಕಬಳ್ಳಾಪುರದಲ್ಲಿ 5,356 ಅರ್ಜಿಗಳು, ಚಿಕ್ಕಮಗಳೂರಿನಲ್ಲಿ 3,628 ಅರ್ಜಿಗಳು, ಚಿತ್ರದುರ್ಗದಲ್ಲಿ 6,432 ಅರ್ಜಿಗಳು, ದಕ್ಷಿಣ ಕನ್ನಡದಲ್ಲಿ 4,879 ಅರ್ಜಿಗಳು, ದಾವಣಗೆರೆಯಲ್ಲಿ 4,879 ಅರ್ಜಿಗಳು,
ಧಾರವಾಡದಲ್ಲಿ 11,575 ಅರ್ಜಿಗಳು, ಗದಗದಲ್ಲಿ 9,881 ಅರ್ಜಿಗಳು,
ಹಾಸನದಲ್ಲಿ 5,452 ಅರ್ಜಿಗಳು, ಹಾವೇರಿಯಲ್ಲಿ 11,094 ಅರ್ಜಿಗಳು, ಕಲಬುರ್ಗಿಯಲ್ಲಿ 26,898 ಅರ್ಜಿಗಳು, ಕೊಡಗಿನಲ್ಲಿ 1,583 ಅರ್ಜಿಗಳು, ಕೋಲಾರ ದಲ್ಲಿ 5,006 ಅರ್ಜಿಗಳು, ಕೊಪ್ಪಳದಲ್ಲಿ 8,506 ಅರ್ಜಿಗಳು, ಮಂಡ್ಯದಲ್ಲಿ 4,756 ಅರ್ಜಿಗಳು,
ಮೈಸೂರಿನಲ್ಲಿ 6,796 ಅರ್ಜಿಗಳು.

ರಾಯಚೂರಿನಲ್ಲಿ 15,608 ಅರ್ಜಿಗಳು, ರಾಮನಗರದಲ್ಲಿ 3,856 ಅರ್ಜಿಗಳು, ಶಿವಮೊಗ್ಗದಲ್ಲಿ 6583 ಅರ್ಜಿಗಳು, ತುಮಕೂರಿನಲ್ಲಿ 8379 ಅರ್ಜಿಗಳು, ಉಡುಪಿಯಲ್ಲಿ 2,318 ಅರ್ಜಿಗಳು, ಉತ್ತರ ಕನ್ನಡದಲ್ಲಿ 4,055 ಅರ್ಜಿಗಳು, ವಿಜಯನಗರದಲ್ಲಿ 5,364 ಅರ್ಜಿಗಳು, ವಿಜಯಪುರದಲ್ಲಿ 24,089 ಅರ್ಜಿಗಳು, ಯಾದಗಿರಿಯಲ್ಲಿ 7,451 ಅರ್ಜಿಗಳು. ಒಟ್ಟು 3.22 ಲಕ್ಷ ಅರ್ಜಿ ಸಲ್ಲಿಕೆ ಆಗಿದ್ದು, ಇದರ ಜೊತೆಗೆ ಇನ್ನು ಕೂಡ ಸರ್ವರ್ ಸಮಸ್ಯೆ ಕಂಡುಬರುತ್ತಿದೆ. ಇದರಿಂದ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿರುವವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

ಹಾಗೆಯೇ ಸರ್ಕಾರಕ್ಕೆ ಕೂಡ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಅವುಗಳನ್ನು ಜನರಿಗೆ ವಿತರಣೆ ಮಾಡುವುದಕ್ಕೆ ಕೂಡ ಆಗುತ್ತಿಲ್ಲ. ಇತ್ತ ಜನರು ಮಾತ್ರ ತಮಗೆ ಇನ್ನು ಹೊಸ ರೇಷನ್ ಕಾರ್ಡ್ ವಿತರಣೆ ಆಗಿಲ್ಲ ಎಂದು ಆತಂಕಕ್ಕೆ ಒಳಗಾಗಿದ್ದಾರೆ, ಏಕೆಂದರೆ ಬಡಜನರಿಗೆ ಇದು ಬಹಳ ಮುಖ್ಯವಾಗಿ ಬೇಕಾಗುವ ದಾಖಲೆ ಆಗಿದೆ. ಇನ್ನು ಸರ್ಕಾರಕ್ಕೆ ಕೂಡ ಸರ್ವರ್ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳು ಎದುರಾಗಿದ್ದು, ಎಲ್ಲವನ್ನು ಸರಿಪಡಿಸಿಕೊಂಡು, ಆದಷ್ಟು ಬೇಗ ಜನರಿಗೆ ಹೊಸ ರೇಷನ್ ಕಾರ್ಡ್ ಗಳ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

Demand for BPL ration card, Here is the update When will the new ration card be issued

Related Stories