ಇಂತಹವರಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ ವಿತರಣೆ ಆರಂಭ; ಅರ್ಜಿ ಸಲ್ಲಿಸುವುದೇಗೆ?

Story Highlights

ಇ-ಶ್ರಮ್‌ ನಲ್ಲಿ ನೋಂದಾಯಿತ ಕಾರ್ಮಿಕರಿಗೆ ಬಿಪಿಎಲ್‌ ಕಾರ್ಡ್‌ ಪಡಿತರ ಚೀಟಿಯ ವಿತರಣೆಯ ಪ್ರಕ್ರಿಯೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರಂಭಗೊಂಡಿದೆ.

ಬೆಂಗಳೂರು (Bengaluru): ಶ್ರಮ್‌ ಕಾರ್ಡ್‌ (Shram Card) ಪಡೆದ ಅಸಂಘಟಿತ ಕಾರ್ಮಿಕರಿಗೆ ಹೊಸ ಪಡಿತರ ಚೀಟಿಯನ್ನು (BPL Ration Card) ಪಡೆಯಲು ಉತ್ತಮ ಅವಕಾಶವಿದೆ. ಈ ಕಾರ್ಮಿಕರ ಅರ್ಹರ ಪಟ್ಟಿ ಕಾರ್ಮಿಕ ಇಲಾಖೆ ಮೂಲಕ ಆಹಾರ ಇಲಾಖೆಗೆ (Food Department) ಕಳುಹಿಸಲಾಗಿದೆ.

ಸುಪ್ರೀಂಕೋರ್ಟ್‌ ನೀಡಿದ ಆದೇಶದ ಹಿನ್ನೆಲೆಯಲ್ಲಿ, ಇ-ಶ್ರಮ್‌ ನಲ್ಲಿ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿಯ ವಿತರಣೆಯ ಪ್ರಕ್ರಿಯೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರಂಭಗೊಂಡಿದೆ.

ಅರ್ಜಿ ಸಲ್ಲಿಸುವ ವಿಧಾನ:

ಆದ್ಯತಾ ಪಡಿತರ ಚೀಟಿಯನ್ನು ಹೊಂದಿಲ್ಲದ ಇ-ಶ್ರಮ್‌ ನೋಂದಾಯಿತ ಅರ್ಹ ಕಾರ್ಮಿಕರು ತಮ್ಮ ಹತ್ತಿರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಥವಾ ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ, ಟೋಲ್-ಫ್ರೀ ಸಂಖ್ಯೆಗೆ 1800-425-9339 ಅಥವಾ 1967ಕ್ಕೆ ಬೆಳಗ್ಗೆ 10ರಿಂದ ಸಂಜೆ 5.30ರ ನಡುವೆ ಸಂಪರ್ಕಿಸಲು ಆಹಾರ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇಂತಹವರಿಗೆ ಮಾತ್ರ ಬಿಪಿಎಲ್‌ ಕಾರ್ಡ್‌ ವಿತರಣೆ ಆರಂಭ; ಅರ್ಜಿ ಸಲ್ಲಿಸುವುದೇಗೆ?
ಬಿಪಿಎಲ್‌ ಕಾರ್ಡ್‌

ನೋಂದಾಯಿತ ಕಾರ್ಮಿಕರಿಗೆ ಮಾತ್ರ:

ಇ-ಶ್ರಮ್‌ ಕಾರ್ಡ್‌ ಹೊಂದಿರುವ ಎಲ್ಲಾ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯುವುದಿಲ್ಲ. ಅರ್ಹರ ಪಟ್ಟಿಯಲ್ಲಿರುವವರು ಮಾತ್ರ ನಿಯಮಾನುಸಾರ ಅರ್ಜಿ ಸಲ್ಲಿಸುವ ಮೂಲಕ ಪಡಿತರ ಚೀಟಿ ಪಡೆಯುತ್ತಾರೆ. ಇದೀಗ ರಾಜ್ಯಾದ್ಯಂತ ಹೊಸ ಪಡಿತರ ಚೀಟಿಗೆ ಲಕ್ಷಾಂತರ ಮಂದಿ ನಿರೀಕ್ಷೆಯಲ್ಲಿದ್ದಾರೆ.

ಅರ್ಜಿಗಳನ್ನು ಪರಿಶೀಲಿಸಿ, ಅರ್ಜಿದಾರರಿಗೆ ತಕ್ಷಣ ಪಡಿತರ ಚೀಟಿಗಳನ್ನು ವಿತರಣಾ ಮಾಡಲು ಆಹಾರ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗಿದ್ದು, ಅರ್ಜಿಯೊಂದಿಗೆ ಆಧಾರ್‌ ಕಾರ್ಡ್‌ (Aadhaar Card), ಆದಾಯ ಪ್ರಮಾಣ ಪತ್ರ (Income Certificate) ಮತ್ತು ಇ-ಶ್ರಮ್‌ ಕಾರ್ಡ್‌ ಅನ್ನು ಸಲ್ಲಿಸಲು ಅಗತ್ಯವಿದೆ. ಈ ದಾಖಲೆಗಳನ್ನು ಪರಿಶೀಲಿಸುವ ನಂತರ, ಪಡಿತರ ಚೀಟಿಗಳನ್ನು ಒಂದೇ ದಿನದಲ್ಲಿ ವಿತರಿಸಲು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

Distribution of BPL card started only for such people

Related Stories