ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡೋಲ್ವಾ? ಏನಿದು ಹೊಸ ವಿಚಾರ
ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಮಾಸವೂ ಬರುತ್ತದೆಂದು ನಾವು ಹೇಳಿಲ್ಲ; ರಾಜ್ಯದ ಆದಾಯದ ಮೇಲೆ ಅವಲಂಬಿತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಳ್ಳಾರಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ

- ಗೃಹಲಕ್ಷ್ಮಿ ಹಣ ತಕ್ಷಣ ಬರುವುದು ಸಾಧ್ಯವಿಲ್ಲ: ಡಿ.ಕೆ.ಶಿ
- ನಾವು ಪ್ರತಿ ತಿಂಗಳು ಹಣ ಕೊಡ್ತೀವಿ ಅಂದಿಲ್ಲ
ಬೆಂಗಳೂರು (Bengaluru): “ನೋಡ್ರಿ, ತಿಂಗಳು ತಿಂಗಳು ಹಣ ಕೊಡ್ತೀವಿ ಅಂತ ನಾವು ಎಂದಿಗೂ ಹೇಳಿಲ್ಲ,” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಳ್ಳಾರಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಅವರು ಕಾಂಗ್ರೆಸ್ ಸಾಧನಾ ಸಮಾವೇಶದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.
ಗೃಹಲಕ್ಷ್ಮಿ ಯೋಜನೆ ಹಣ (Gruhalakshmi Scheme Money) ಯಾವಾಗ ಬರಲಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸರ್ಕಾರದ ಆದಾಯಕ್ಕೆ ಅನುಗುಣವಾಗಿ ಹಣ ಬಿಡುಗಡೆ ಆಗುವುದೆಂದು ತಿಳಿಸಿದರು.
“ನೀವೆಲ್ಲ ಟ್ಯಾಕ್ಸ್ ಕಟ್ಟುತ್ತಾ ಇರಬೇಕು, ನಾವು ಯೋಜನೆಗಳಿಗೆ ಹಣ ಕೊಡ್ತಾ ಇರಬೇಕು. ಕೆಲವೊಮ್ಮೆ 2-3 ವರ್ಷ ಬೇಕಾಗಬಹುದು, ಅದು ಗುತ್ತಿಗೆ ಕೆಲಸದಂತೆ” ಎಂದು ಉತ್ತರ ನೀಡಿದ ಅವರು, ಹಣ ಯಾವಾಗ ಬರುತ್ತದೆ ಎಂದು ನಿರ್ಧಿಷ್ಟವಾಗಿ ದಿನಾಂಕ ಹೇಳಲಾಗದು ಎಂದರು. (Government scheme delay)
ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ನಾನು ಹಂಪಿಗೆ ಟೂರ್‌ಗಾಗಿ ಬಂದಿಲ್ಲ. ನನ್ನನ್ನು ಟೀಕೆ ಮಾಡುವವರು ಎಲ್ಲರನ್ನೂ ಟೀಕೆ ಮಾಡ್ತಾರೆ. ಅಶೋಕ್, ಕುಮಾರಸ್ವಾಮಿ ಯಾರನ್ನು ಬಿಡ್ತಾರೆ?” ಎಂದು ತಿರುಗೇಟು ಕೊಟ್ಟರು. (DK Shivakumar Press Meet)
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ತಡ ಏಕೆ, 3 ತಿಂಗಳ ಹಣ ಬಿಡುಗಡೆ ಯಾವಾಗ? ಬಿಗ್ ಅಪ್ಡೇಟ್
ಬಿಜೆಪಿಯ ಬಗ್ಗೆ ಮಾತನಾಡಿದ ಡಿಕೆಶಿ, “ನಮ್ಮದು ಕಾಂಗ್ರೆಸ್ ಗ್ಯಾರಂಟಿ, ಆದರೆ ಬಿಜೆಪಿಗೆ ಅದು ಪಕ್ಷದ ಗ್ಯಾರಂಟಿ ಅಲ್ಲ, ಮೋದಿಯ ಗ್ಯಾರಂಟಿ. ಅವರು ನಮ್ಮ (Congress schemes) ನಕಲು ಮಾಡ್ತಿದ್ದಾರೆ,” ಎಂದು ಹೇಳಿದರು. ನರೇಗಾ ಯೋಜನೆಗೆ ತೀವ್ರ ಟೀಕೆ ಮಾಡಿದವರು ಈಗ ಅದನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.
ಅಲ್ಲದೆ, ತೆಲಂಗಾಣ ಮುಖ್ಯಮಂತ್ರಿ ಘೋಷಣೆ ಕುರಿತು ಪ್ರತಿಕ್ರಿಯಿಸಿದ ಅವರು, “ಅದು ಅವರ ರಾಜ್ಯದ ವಿಷಯ. ಪ್ರತಿಯೊಬ್ಬ ಮುಖ್ಯಮಂತ್ರಿ ತಾವು ಬಯಸುವ ಯೋಜನೆ ಅಥವಾ ಘೋಷಣೆ ಮಾಡಬಹುದು,” ಎಂದು ತಾಳ್ಮೆಯಿಂದ ಪ್ರತಿಕ್ರಿಯಿಸಿದರು. (Telangana CM Guarantee)
DK Shivakumar Clarifies on Gruhalakshmi Scheme Money




