ಹಾಸನಾಂಬೆ ದರ್ಶನ ಪಡೆದ ಡಿಕೆ ಶಿವಕುಮಾರ್! ರಾಜ್ಯದ ಜನರಿಗಾಗಿ ಪ್ರಾರ್ಥನೆ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (Deputy Chief Minister D.K. Shivakumar) ಶುಕ್ರವಾರ ಕುಟುಂಬದೊಂದಿಗೆ ಹಾಸನಾಂಬೆ ದೇವಿಯ (Hassanamba) ದರ್ಶನ ಪಡೆದರು
ಬೆಂಗಳೂರು (Bengaluru): ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM D.K. Shivakumar) ಶುಕ್ರವಾರ ಕುಟುಂಬದೊಂದಿಗೆ ಹಾಸನಾಂಬೆ ದೇವಿಯ (Hassanambe) ದರ್ಶನ ಪಡೆದಿದ್ದಾರೆ ಮತ್ತು ಈ ಸಂದರ್ಭದಲ್ಲಿ ವಿಶೇಷ ಪೂಜೆ (special pooja) ಸಲ್ಲಿಸಿದರು.
ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂದು ತಾಯಿ ಹಾಸನಾಂಬೆ ದೇವಿಯ ದರ್ಶನಕ್ಕೆ ಬಂದಿದ್ದೇನೆ. ಈ ವರ್ಷ ತಾಯಿ ಕೃಪೆಯಿಂದ ಮಳೆ-ಬೆಳೆ (rain-crop) ಉತ್ತಮವಾಗಿದೆ. ರಾಜ್ಯದ ಜನರಿಗೆ ನೆಮ್ಮದಿಯನ್ನ ತಾಯಿ ಕೊಟ್ಟಿದ್ದಾರೆ. ರಾಜ್ಯದ ಜನರಿಗೆ ಉತ್ತಮ ಆರೋಗ್ಯ (good health) ಮತ್ತು ಐಶ್ವರ್ಯ (prosperity) ನೀಡಲೆಂದು ಪ್ರಾರ್ಥನೆ ಮಾಡಿದ್ದೇನೆ.” ಎಂದು ತಿಳಿಸಿದರು.
ಬೆಂಗಳೂರು ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ BBMP ಸೂಚನೆ
ಈ ವೇಳೆ, ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಅವರು ನಿರಾಕರಿಸಿದರು ಮತ್ತು “3 ಕ್ಷೇತ್ರಗಳ ಉಪಚುನಾವಣೆ (by-elections) ಬಗ್ಗೆ ಈಗ ಮಾತನಾಡಲ್ಲ” ಎಂದು ಸ್ಪಷ್ಟಪಡಿಸಿದರು. ಜಿಲ್ಲಾಡಳಿತ (district administration) ಹಾಸನಾಂಬೆ ದರ್ಶನ ವ್ಯವಸ್ಥೆಯನ್ನು ಚೆನ್ನಾಗಿ ನಿರ್ವಹಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ ಮಾಡಿರುವ ವ್ಯವಸ್ಥೆಗೆ ಡಿಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
DK Shivakumar darshan of Hassanambe