ಆಸ್ತಿ ಮಾಲೀಕರಿಗೆ ಭರ್ಜರಿ ಸುದ್ದಿ! ಇನ್ಮುಂದೆ ಪಂಚಾಯಿತಿಯಲ್ಲೂ ಸಿಗುತ್ತೆ ಇ-ಖಾತಾ
ಆಸ್ತಿ ಮಾಲೀಕರಿಗೆ ಸುಧಾರಿತ ಡಿಜಿಟಲ್ ವ್ಯವಸ್ಥೆ! ಇ-ಖಾತಾ ಈಗ ಪಂಚಾಯಿತಿಯಲ್ಲೂ ಲಭ್ಯ. ಅಕ್ರಮ ಆಸ್ತಿ ನಿಯಂತ್ರಣ, ಖರೀದಿ-ಮಾರಾಟ ಸುಲಭ, ದಾಖಲೆಗಳು ಪಾರದರ್ಶಕವಾಗಿ ಸಿಗಲು ಇದು ಮುಖ್ಯ ಸಾಧನ.

- ಜುಲೈ 15ರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ
- ಡಿಜಿಟಲ್ ದಾಖಲೆ, ಸುಲಭ ನೋಂದಣಿ ಮತ್ತು ಸುರಕ್ಷತೆ
- ಮೋಸ ನಿವಾರಣೆ, ತೆರಿಗೆ ಪಾವತಿ ಸುಲಭೀಕರಣ
ಇನ್ನು ಮೇಲೆ ಗ್ರಾಮ ಪಂಚಾಯಿತಿಯಲ್ಲೂ ಇ-ಖಾತಾ ಸಿಗಲಿದೆ ಎನ್ನುವುದು ಆಸ್ತಿ ಮಾಲೀಕರಿಗೆ (Land Owners) ಭರ್ಜರಿ ಗುಡ್ ನ್ಯೂಸ್! ಇಷ್ಟು ದಿನ ಬಿಬಿಎಂಪಿ ಅಥವಾ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಈ ಡಿಜಿಟಲ್ ಖಾತಾ ಸಿಗುತ್ತಿದ್ದರೆ, ಈಗ ಜುಲೈ 15ರಿಂದ ಗ್ರಾಮೀಣ ಪ್ರದೇಶದವರು ಕೂಡ ಇದರ ಸೌಲಭ್ಯ ಪಡೆದುಕೊಳ್ಳಬಹುದು.
ಇ-ಖಾತಾ ಎಂದರೆ ಆಸ್ತಿ ದಾಖಲೆಯ (Property Documents) ಡಿಜಿಟಲ್ ರೂಪ. ಇದು ಆಸ್ತಿ ವಿವರಗಳನ್ನು ಆನ್ಲೈನ್ನಲ್ಲಿ ಸರಳವಾಗಿ ನೋಂದಾಯಿಸಲು, ಪರಿಶೀಲಿಸಲು ಮತ್ತು ತೆರಿಗೆ ಪಾವತಿ ಮಾಡುವಂತೆ ಸಹಾಯ ಮಾಡುತ್ತದೆ. ಅರ್ಥಾತ್ ಇ-ಖಾತಾ ನಿಮ್ಮ ಆಸ್ತಿಗೆ ಒಂದು ದೃಢೀಕೃತ ಪಾಸ್ಪೋರ್ಟ್ ಹೀಗಂತ ಹೇಳಬಹುದಾಗಿದೆ.
ಇದನ್ನೂ ಓದಿ: ಜನನಿ ಯೋಜನೆ, ಮಹಿಳೆಯರಿಗೆ ಸಿಗಲಿದೆ ₹5 ಸಾವಿರ! ಈ ರೀತಿ ಅರ್ಜಿ ಸಲ್ಲಿಸಿ
ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳುವಂತೆ, ಈಗಾಗಲೇ ಬೆಂಗಳೂರಿನಲ್ಲಿ 50 ಲಕ್ಷಕ್ಕೂ ಹೆಚ್ಚು ಇ-ಖಾತಾ ನೋಂದಣಿಯಾಗಿದೆ. ತಕ್ಷಣದ ಉದಾಹರಣೆಗೆ, ಬ್ಯಾಟರಾಯನಪುರ ಪ್ರದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಮನೆಮಾಲೀಕರು ಈ ವ್ಯವಸ್ಥೆಗೆ ಸೇರ್ಪಡೆಗೊಂಡಿದ್ದಾರೆ. ಇ-ಖಾತಾ ಮೇಳದ ಮೂಲಕ ನೇರವಾಗಿ ಜನರಿಗೆ ಖಾತಾ ವಿತರಿಸಲಾಗುತ್ತಿದೆ, ಹಾಗೂ ಮನೆ ಮನೆಗೆ ಖಾತಾ ತಲುಪಿಸುವ ಯೋಜನೆಗೂ ಚಾಲನೆ ಸಿಕ್ಕಿದೆ.
ಈ ಇ-ಖಾತಾ ಯೋಜನೆಯು ಕೇವಲ ದಾಖಲೆ ವ್ಯವಸ್ಥೆ ಮಾತ್ರವಲ್ಲ, ಇದು ಆಸ್ತಿಯ ಖರೀದಿ (Property Sale), ಮಾರಾಟದ ವೇಳೆ ಮೋಸ ಅಥವಾ ನಕಲಿ ದಾಖಲೆಗಳಿಂದ ತಪ್ಪಿಸಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೇ, ಆಸ್ತಿಯ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರದಲ್ಲಿ ಹೊಸ ರೇಷನ್ ಕಾರ್ಡ್ ಸೇರಿ ಒಂದೇ ಕಡೆ 800ಕ್ಕೂ ಹೆಚ್ಚು ಸೇವೆ!
ಇದನ್ನೂ ಓದಿ: ಬಾಕಿ ಗೃಹಲಕ್ಷ್ಮಿ ಹಣ ಬಿಡುಗಡೆ, 3 ತಿಂಗಳ ಹಣ ಒಟ್ಟಿಗೆ ಜಮಾ! ಬಂಪರ್ ಸುದ್ದಿ
2025ರಲ್ಲಿ ಮಂಡನೆಯಾದ ‘ಗ್ರಾಮ ಸ್ವರಾಜ್-ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ’ದ ಅಡಿಯಲ್ಲಿ ಈ ಯೋಜನೆ ಅಭಿವೃದ್ಧಿಯಲ್ಲಿದ್ದು, ಗ್ರಾಮೀಣ ಭಾಗದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಮಾಡುವ ಮೂಲಕ ಸರ್ಕಾರದ ಆದಾಯವನ್ನೂ ಹೆಚ್ಚಿಸಲು ಯೋಜಿಸಲಾಗಿದೆ. ಇದನ್ನು ಇ-ಖಾತಾ ವ್ಯವಸ್ಥೆಯಡಿ ತರಲು ನಿರ್ಧಾರವಾಗಿದೆ.
ಇನ್ನು ನಿಮಗೆ ಆಸ್ತಿ ಸಂಬಂಧಿತ ದಾಖಲೆಗಳು ಬೇಕು ಅಂತಾದರೆ, ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಇಂಟರ್ನೆಟ್ ಮೂಲಕವೇ ನಿಮ್ಮ ಇ-ಖಾತಾ ಡೌನ್ಲೋಡ್ ಮಾಡಬಹುದು. ಇದರಿಂದ ಸಮಯ ಮತ್ತು ಶ್ರಮ ಉಳಿಯುತ್ತದೆ. ಇದು ನಿಮ್ಮ ಆಸ್ತಿಗೆ ಐಟಿ ಬೆಂಬಲ ನೀಡುವಂತೆ ಪರಿಣಮಿಸುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರಿ ಸೈಟುಗಳು ಹರಾಜು! ಕಮ್ಮಿ ಬೆಲೆ, ಚಾನ್ಸ್ ಮಿಸ್ ಮಾಡ್ಬೇಡಿ
ಇದು ಕೇವಲ ಭವಿಷ್ಯದ ಯೋಜನೆಯಲ್ಲ. ಈಗಾಗಲೇ ಜಾರಿಯಾಗುತ್ತಿರುವ ಪ್ರಕ್ರಿಯೆ. ಇನ್ನು ಮುಂದೆ ಗ್ರಾಮ ಪಂಚಾಯಿತಿಯ ಯಾವುದೇ ಬಡಾವಣೆ ಅಥವಾ ಹಳ್ಳಿ ಪ್ರದೇಶದಲ್ಲೂ ನಿಮ್ಮ ಆಸ್ತಿಯು ಸರಿಯಾಗಿ ನೋಂದಣಿಯಾಗಬೇಕು ಅಂದ್ರೆ, ಇ-ಖಾತಾ ಎಂಬುದು ಕಡ್ಡಾಯವಾಗಿ ಹೊಂದಿರಬೇಕಾದ ದಾಖಲೆ ಎಂದೇ ಪರಿಗಣಿಸಲಾಗಿದೆ.
E-Khata Now in Villages, Major Relief for Property Owners




