BPL Card: ಜಮೀನು ಇದ್ದವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಬಿಗ್ ಕಾರ್ಯಾಚರಣೆ

BPL Ration Card: ರಾಜ್ಯದಲ್ಲಿ ನಕಲಿ ಬಿಪಿಎಲ್‌ ಕಾರ್ಡ್‌ಗಳ ಅಕ್ರಮ ಪತ್ತೆ ಹಚ್ಚುವ ಕಾರ್ಯ ಜೋರಾಗಿದೆ. 7.5 ಎಕರೆಗಿಂತ ಹೆಚ್ಚು ಭೂಮಿ, ಐಟಿ ಪಾವತಿಸುವವರೂ ಬಿಪಿಎಲ್‌ ಸೌಲಭ್ಯ ಪಡೆದಿದ್ದಾರೆ. ಈ ಬಗ್ಗೆ ಕೇಂದ್ರ-ರಾಜ್ಯ ಜಂಟಿ ಕ್ರಮ ಆರಂಭವಾಗಿದೆ.

BPL Ration Card: ರಾಜ್ಯದಲ್ಲಿ ನಕಲಿ ಬಿಪಿಎಲ್‌ ಕಾರ್ಡ್‌ಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿ ಕಾರ್ಯಾಚರಣೆಗೆ ಕೈ ಹಾಕಿವೆ. ಈ ಕ್ರಮದಿಂದ ನೂರಾರು ನಕಲಿ ಕಾರ್ಡ್‌ಗಳು ಈಗಾಗಲೇ ಬಯಲಾಗಿದ್ದು, ಅನರ್ಹರಿಗೆ ಸಿಗುತ್ತಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ಕೆಲಸ ಪ್ರಾರಂಭವಾಗಿದೆ.

ಕೇಂದ್ರದಿಂದ ಬಂದ ವರದಿ ಪ್ರಕಾರ, ಒಟ್ಟು 7,76,206 ಅಕ್ರಮ ಬಿಪಿಎಲ್‌ ಕಾರ್ಡ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ 2,09,048 ಕಾರ್ಡ್‌ಗಳು ರದ್ದುಗೊಂಡಿವೆ. ಈ ಪೈಕಿ ಅನೇಕ ಪಡಿತರದಾರರನ್ನು ಎಪಿಎಲ್‌ ಪಟ್ಟಿಗೆ ವರ್ಗಾಯಿಸಲಾಗಿದೆ. ಅಕ್ರಮ ಪತ್ತೆ ಕಾರ್ಯಕ್ಕಾಗಿ ರಾಜ್ಯದ ಅಧಿಕಾರಿಗಳಿಗೆ ಹೊಸ ಮಾರ್ಗಸೂಚಿ ನೀಡಲಾಗಿದೆ.

ಹೆಚ್ಚು ಗಮನ ಸೆಳೆದಿರುವ ವಿಷಯವೆಂದರೆ, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿದವರಿಗೂ ಬಿಪಿಎಲ್‌ ಕಾರ್ಡ್‌ ಸಿಕ್ಕಿರುವುದು. ಇಂತಹವರ ಸಂಖ್ಯೆ 34,710 ಕುಟುಂಬಗಳು ಎಂದು ವರದಿ ತಿಳಿಸಿದೆ. ಇವರಲ್ಲಿ 12,182 ಪಡಿತರ ಕಾರ್ಡ್‌ಗಳು ರದ್ದುಗೊಂಡಿವೆ.

ಕೇಂದ್ರ ಸರ್ಕಾರವು ಆಧಾರ್‌ ಆಧಾರದ ಮೂಲಕ ಅಕ್ರಮ ಕಾರ್ಡ್‌ಗಳನ್ನು ಗುರುತಿಸಿ ರಾಜ್ಯಕ್ಕೆ ವಿವರ ಕಳುಹಿಸಿದೆ. ಬ್ಯಾಂಕ್‌ ಲೋನ್‌ ಪಡೆದವರು, ಐಟಿ ರಿಟರ್ನ್ಸ್‌ ಸಲ್ಲಿಸಿದವರು, ಖಾಸಗಿ ಅಥವಾ ಸರ್ಕಾರಿ ಉದ್ಯೋಗಿಗಳೂ ಈ ಪಟ್ಟಿಯಲ್ಲಿ ಸೇರಿದ್ದಾರೆ. 5,80,415 ಮಂದಿ ಬಿಪಿಎಲ್‌ ಪಡಿತರದಾರರ ಆದಾಯ ವರ್ಷಕ್ಕೆ ₹1.20 ಲಕ್ಷಕ್ಕಿಂತ ಹೆಚ್ಚಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ.

ಅಕ್ರಮ ಬಿಪಿಎಲ್‌ ಪಡಿತರಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದ್ದು, ಇಲ್ಲಿ 61,083 ನಕಲಿ ಕಾರ್ಡ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ 6,140 ಕಾರ್ಡ್‌ಗಳು ಈಗಾಗಲೇ ರದ್ದುಗೊಂಡಿವೆ. ವಿಜಯನಗರ ಜಿಲ್ಲೆಯಲ್ಲಿ ಮಾತ್ರ ಅತಿ ಕಡಿಮೆ ಅಕ್ರಮ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಈ ಕ್ರಮದ ಬಳಿಕ ಅನೇಕ ನಕಲಿ ಕಾರ್ಡ್‌ಗಳು ರದ್ದುಗೊಂಡಿದ್ದರಿಂದ ಸರ್ಕಾರದ ಧಾನ್ಯ ಹಂಚಿಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Fake BPL Cards Busted, Landholders Found Misusing Benefits

TRENDING ARTICLES1 / 5

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories