ಬೆಂಗಳೂರಿನಲ್ಲಿ ನಕಲಿ ಸಿಮ್ ಹಾವಳಿ! ಕೇವಲ ಆಧಾರ್ ಜೆರಾಕ್ಸ್ ಸಾಕು, ಕ್ಷಣಗಳಲ್ಲಿ ಸಿಗುತ್ತೆ ಸಿಮ್
ಆಧಾರ್ ಜಿರಾಕ್ಸ್ ಸಾಕು ಎಂಬ ನೆಪದಲ್ಲಿ ಕ್ಷಣಗಳಲ್ಲಿ ಸಿಮ್ ನೀಡುವ ದಂಧೆ ಬೆಂಗಳೂರಿನಲ್ಲಿ ಜೋರಾಗಿದೆ. ಇಂತಹ ನಕಲಿ ಸಿಮ್‌ಗಳಿಂದ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
- ನಕಲಿ ಸಿಮ್ ಮಾರಾಟದಿಂದ ಸೈಬರ್ ಮೋಸ ಪ್ರಕರಣಗಳ ಏರಿಕೆ
- ಬೆಂಗಳೂರಿನಲ್ಲಿ ರಸ್ತೆಬದಿ, ಫುಟ್‌ಪಾತ್‌ಗಳಲ್ಲಿ ಅಕ್ರಮ ಸಿಮ್ ದಂಧೆ
- ಆಧಾರ್ ಜಿರಾಕ್ಸ್ ದುರುಪಯೋಗ ಮಾಡಿ ಸಿಮ್ ಸಕ್ರಿಯಗೊಳಿಸುವ ಜಾಲ
ಬೆಂಗಳೂರು (Bengaluru): ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಅಕ್ರಮವಾಗಿ ವಿತರಿಸಲಾಗುತ್ತಿರುವ ನಕಲಿ ಸಿಮ್‌ಗಳು (Fake Sim Cards) ಸೈಬರ್ ಅಪರಾಧಿಗಳಿಗೆ ದೊಡ್ಡ ಬೆಂಬಲವಾಗಿವೆ. ಕೇವಲ ಆಧಾರ್ ಕಾರ್ಡ್ ಜಿರಾಕ್ಸ್ ನೀಡಿದರೆ ಸಾಕು, ಕೆಲ ನಿಮಿಷಗಳಲ್ಲಿ ಸಿಮ್ ಕೈಗೆ ಸಿಗುತ್ತಿದೆ.
ಇಂತಹ ಸಿಮ್‌ಗಳನ್ನು ಬಳಸಿಕೊಂಡು ಸೈಬರ್ ಅಪರಾಧಿಗಳು ಕರೆಗಳು, ಬ್ಯಾಂಕ್ ವ್ಯವಹಾರಗಳು ಮತ್ತು ಓಟಿಪಿ ಆಧಾರಿತ ವಂಚನೆಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆಬದಿ ಸಿಮ್ ಮಾರಾಟ – ಸಾರ್ವಜನಿಕರಿಗೆ ಅಪಾಯ
ನಗರದ ಹಲವು ಪ್ರದೇಶಗಳಲ್ಲಿ ರಸ್ತೆಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ಕಡಿಮೆ ದರಕ್ಕೆ ಅಥವಾ ಉಚಿತವೆಂಬ ಆಮಿಷದೊಂದಿಗೆ ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಸಿಮ್‌ಗಳು ಬಹುತೇಕ ಇ-ಕೆವೈಸಿ ಪೂರ್ಣವಾಗದೇ ಸಕ್ರಿಯಗೊಳ್ಳುತ್ತಿದ್ದು, ಆ ಅವಧಿಯಲ್ಲೇ ವಂಚಕರು ಅಮಾಯಕ ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಈ ವರ್ಷ ಮಾತ್ರವೇ ರಾಜ್ಯದಲ್ಲಿ ಇಂತಹ 18 ಪ್ರಕರಣಗಳು ದಾಖಲಾಗಿರುವುದು ಆತಂಕ ಹೆಚ್ಚಿಸಿದೆ.
ನಿಯಮಗಳು ಇದ್ದರೂ ಅನುಷ್ಠಾನ ಸಡಿಲ
ಒಬ್ಬ ವ್ಯಕ್ತಿ ತನ್ನ ಆಧಾರ್ ಸಂಖ್ಯೆಯ ಮೇಲೆ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಲು ಅವಕಾಶವಿದೆ. ಇತರರ ಹೆಸರಿನಲ್ಲಿ ಸಿಮ್ ಪಡೆಯುವುದು ಅಥವಾ ನೀಡುವುದು ಕಾನೂನುಬಾಹಿರ. ಇದಕ್ಕೆ ದಂಡ ಹಾಗೂ ಜೈಲು ಶಿಕ್ಷೆಯ ವ್ಯವಸ್ಥೆಯೂ ಇದೆ.
ಆದರೆ, ಮಾರುಕಟ್ಟೆ ಸ್ಪರ್ಧೆ ಹೆಸರಿನಲ್ಲಿ ಕೆಲವು ಕಂಪನಿಗಳು ನಿಯಮಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಆನ್‌ಲೈನ್ ಅಪರಾಧಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
₹500ಕ್ಕೆ ಆಧಾರ್ ಜಿರಾಕ್ಸ್ – ಜಾಲ ವಿಸ್ತರಣೆ
ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಆಧಾರ್ ಜಿರಾಕ್ಸ್‌ಗಳನ್ನು ಪೂರೈಸುವ ಮಫಿಯಾ ಸಕ್ರಿಯವಾಗಿದೆ. ಕೆಲವೆಡೆ ಜಿರಾಕ್ಸ್ ಕೇಂದ್ರಗಳ ಜೊತೆಗೂಡಿ ಈ ದಂಧೆ ನಡೆಯುತ್ತಿದೆ.
₹500 ನೀಡಿದರೆ ಬೇರೆವರ ಆಧಾರ್ ಜಿರಾಕ್ಸ್ ಸುಲಭವಾಗಿ ಸಿಗುತ್ತಿದೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಒಂದು ರಾಜ್ಯದಲ್ಲಿ ಪಡೆದ ಸಿಮ್‌ಗಳನ್ನು ಇನ್ನೊಂದು ರಾಜ್ಯದಲ್ಲಿ ಬಳಸುವ ಜಾಲವೂ ಪತ್ತೆಯಾಗಿದೆ.
ಪೊಲೀಸರಿಗೆ ಸವಾಲಾಗಿರುವ ಅಕ್ರಮ ಜಾಲ
ಟ್ರೂಕಾಲರ್‌ನಲ್ಲಿ ಪೊಲೀಸ್, ಸಿಐಡಿ, ಸಿಬಿಐ, ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ನಂಬರ್‌ಗಳನ್ನು ಉಳಿಸಿಕೊಂಡು ಜನರನ್ನು ಭಯಪಡಿಸುವ ತಂತ್ರವನ್ನು ಬಳಸುತ್ತಿದ್ದಾರೆ. ಈ ಅಕ್ರಮ ಸಿಮ್ ಜಾಲವನ್ನು ಸಂಪೂರ್ಣವಾಗಿ ಬೇಧಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸಾರ್ವಜನಿಕರು ಎಚ್ಚರಿಕೆಯಿಂದಿದ್ದು, ತಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ ಎಂಬುದನ್ನು ‘ಸಂಚಾರ್ ಸಾರಥಿ’ ಆಪ್ ಮೂಲಕ ಪರಿಶೀಲಿಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಮಳೆ ಜೊತೆ ಮೈ ನಡುಗಿಸುವ ಚಳಿ! ಬೆಂಗಳೂರು ಸೇರಿ 2 ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ಇನ್ನು ಮೂರೇ ದಿನ ಗಡುವು! ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ನಿಯಮ
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story



