ರೇಷನ್ ಕಾರ್ಡ್‌ನಲ್ಲಿ ಹೊಸ ಹೆಸರು ಸೇರ್ಪಡೆ ಮಾಡಲು ಅವಕಾಶ! ಈ ಫಾರ್ಮ್ ಭರ್ತಿ ಮಾಡಿ

Ration Card Update : ಈಗ ನೀವು ಪಡಿತರ ಚೀಟಿಗೆ ನಿಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಸೇರಿಸಬಹುದು. ಮದುವೆಯಾದ ಹೊಸದಂಪತಿಗಳು ತಮ್ಮ ಪತ್ನಿಯ ಹೆಸರು ಮತ್ತು ಮಕ್ಕಳ ಹೆಸರನ್ನು ಸಹ ಸೇರಿಸಬಹುದು.

  • ರೇಷನ್ ಕಾರ್ಡ್‌ನಲ್ಲಿ ಯಾವುದೇ ಕುಟುಂಬ ಸದಸ್ಯರ ಹೆಸರು ಸೇರ್ಪಡೆ ಮಾಡಿ.
  • ಹೊಸದಾಗಿ ಮದುವೆಯಾದವರು ಪತ್ನಿ ಮತ್ತು ಮಕ್ಕಳ ಹೆಸರು ಸೇರಿಸಲು ಅವಕಾಶ.
  • ಆನ್‌ಲೈನ್ ಮೂಲಕ ಫಾರ್ಮ್ ಭರ್ತಿ ಮಾಡಿ ಪ್ರಕ್ರಿಯೆ ಇನ್ನಷ್ಟು ಸುಲಭ.

Ration Card Update : ರಾಜ್ಯ ಸರ್ಕಾರವು ಪಡಿತರ ಚೀಟಿ ಹೊಂದಿರುವ ಜನರಿಗೆ ಕಡಿಮೆ ಬೆಲೆಯಲ್ಲಿ ಪಡಿತರವನ್ನು ಪ್ರತಿ ತಿಂಗಳೂ ನೀಡುತ್ತಿದೆ. ವಿಶೇಷವಾಗಿ ಬಿಪಿಲ್‌ ಕಾರ್ಡ್‌ದಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಹೌದು, ಪಡಿತರ ಚೀಟಿಗೆ ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರಿಸಬೇಕಾದರೆ ನೀವು ಆನ್‌ಲೈನ್‌ನಲ್ಲಿ (Online) ಅತಿ ಸುಲಭವಾಗಿ ಮಾಡಬಹುದು. ಪಡಿತರ ಚೀಟಿಗೆ ಹೊಸ ಸದಸ್ಯರ ಹೆಸರು ಸೇರಿಸಲು, ನೀವು ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಅಲ್ಲಿ ನೀವು ಲಾಗಿನ್ ಆಗಿ, ಪಡಿತರ ಚೀಟಿಯ ವಿವರಗಳಲ್ಲಿ ‘ಹೊಸ ಸದಸ್ಯರನ್ನು ಸೇರಿಸಿ’ ಎಂಬ ಆಯ್ಕೆಯನ್ನು ಆಯ್ಕೆ ಮಾಡಬೇಕು. ಬಳಿಕ, ಫಾರ್ಮ್ ಭರ್ತಿ ಮಾಡಿ, ಅವಶ್ಯಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಫಾರ್ಮ್ ಅನ್ನು Submit ಮಾಡಿ. ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬಹುದು.

ರೇಷನ್ ಕಾರ್ಡ್‌ನಲ್ಲಿ ಹೊಸ ಹೆಸರು ಸೇರ್ಪಡೆ ಮಾಡಲು ಅವಕಾಶ! ಈ ಫಾರ್ಮ್ ಭರ್ತಿ ಮಾಡಿ

Add Family Members to Ration Cardಹೊಸದಾಗಿ ಮದುವೆಯಾದವರು ಪಡಿತರ ಚೀಟಿಗೆ ತಮ್ಮ ಪತ್ನಿಯ ಹೆಸರನ್ನು ಸೇರಿಸಲು, ಆಧಾರ್ ಕಾರ್ಡ್ (Aadhaar Card), ಮದುವೆ ಪ್ರಮಾಣಪತ್ರ ಮತ್ತು ಪೋಷಕರ ಪಡಿತರ ಚೀಟಿ ದಾಖಲೆಗಳನ್ನು ಹೊಂದಿರಬೇಕು. ಮಗುವಿನ ಹೆಸರನ್ನು ಸೇರಿಸಲು, ಮಗುವಿನ ಜನನ ಪ್ರಮಾಣ ಪತ್ರ ಮತ್ತು ತಂದೆ-ತಾಯಿಯ ಆಧಾರ್ ಕಾರ್ಡ್ ಅಗತ್ಯವಾಗುತ್ತದೆ.

ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರಿಸಬೇಕಾದರೆ, ಅವರ ಫೋಟೋ, ಪಡಿತರ ಚೀಟಿಯ ಫೋಟೋ ಪ್ರತಿಯೂ ಮುಖ್ಯವಾಗಿದೆ. ಅಂತೆಯೇ, ಪಡಿತರ ಚೀಟಿಗೆ ಸೇರಿಸಲು ಇರುವ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ನೀಡುವುದು ಅಗತ್ಯ.

ಹೆಚ್ಚಿನ ಮಾಹಿತಿಗಾಗಿ ರಾಜ್ಯದ ಆಹಾರ ಸರಬರಾಜು ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ, ಕುಟುಂಬ ಸದಸ್ಯರ ಹೆಸರನ್ನು ಪಡಿತರ ಚೀಟಿಗೆ ಸೇರಿಸಿ, ನಿಮ್ಮ ಹಕ್ಕುಗಳನ್ನು ಉಪಯೋಗಿಸಿ, ಸೌಲಭ್ಯಗಳನ್ನು ಪಡೆಯಿರಿ.

Family Members Can Now Be Added to Ration Card Online

English Summary
Related Stories