ಬೆಂಗಳೂರು: ವಿದ್ಯಾರ್ಥಿ ಹಲ್ಲು ಮುರಿದ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರಿನ ಜಯನಗರದ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ, ಶಿಕ್ಷಕಿಯ ಪೆಟ್ಟಿಗೆ ಬಾಲಕನ ಹಲ್ಲು ಮುರಿದಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ
ಬೆಂಗಳೂರು (Bengaluru): ಶಿಕ್ಷಕಿ ಒಬ್ಬರು ವಿದ್ಯಾರ್ಥಿ ಹಲ್ಲು ಮುರಿಯುವಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಜಯನಗರದ (Jayanagar) ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿ 6ನೇ ತರಗತಿ ಓದುತ್ತಿರುವ ಬಾಲಕ ನೀರಿನಲ್ಲಿ ಆಟವಾಡುತ್ತಿದ್ದುದನ್ನು ಹಿಂದಿ ಟೀಚರ್ ಗಮನಿಸಿದ್ದಾರೆ.
ಈ ವೇಳೆ ಬಾಲಕನನ್ನು ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಶಿಕ್ಷಕಿಯ (Teacher) ಪೆಟ್ಟಿಗೆ ಬಾಲಕನ ಹಲ್ಲು ಮುರಿದಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳು ಆಟವಾಡುವುದು ಸಹಜ ಎಂದ ಪಾಲಕರು ಈ ರೀತಿ ಹಲ್ಲೆ ನಡೆಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.
ಶಿಕ್ಷಕಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮಕ್ಕಳು ಆಟವಾಡುವುದನ್ನು ತಡೆಯಲಾಗುತ್ತದೆಯೇ? ಅಥವಾ ಅದೇ ಕಾರಣಕ್ಕೆ ಈ ರೀತಿ ಹೊಡೆಯುವುದು ಎಷ್ಟು ಸರಿ ಎಂದು ಸ್ಥಳೀಯರು ಹಾಗೂ ಮಕ್ಕಳ ಪೋಷಕರು ಪ್ರಶ್ನಿಸಿದರು. ಪೊಲೀಸರು ಶಿಕ್ಷಕಿಯ ವಿರುದ್ಧ ದೂರು ದಾಖಲಿಸಿದ್ದಾರೆ.
FIR filed against Bengaluru teacher who broke tooth of student