ಬೆಂಗಳೂರು ಕಾಡುಗೋಡಿಯಲ್ಲಿ ಫ್ರಿಡ್ಜ್‌ನಿಂದ ಉಂಟಾದ ಬೆಂಕಿಗೆ ಇಡೀ ಮನೆ ಸುಟ್ಟು ಕರಕಲು
ಬೆಂಗಳೂರಿನ ವೈಟ್ ಫೀಲ್ಡ್‌ನ ಕಾಡುಗೋಡಿಯಲ್ಲಿ ಫ್ರಿಡ್ಜ್‌ನಿಂದ ಉಂಟಾದ ಬೆಂಕಿಗೆ 80% ಮನೆ ಸುಟ್ಟಿದೆ, ಎರಡು ವರ್ಷಗಳ ಹಿಂದೆ ಸೆಕೆಂಡ್ ಹ್ಯಾಂಡ್ ಫ್ರಿಡ್ಜ್ ಖರೀದಿಸಿದ್ದರೆಂದು ತಿಳಿದುಬಂದಿದೆ.
- ಫ್ರಿಡ್ಜ್‌ನಲ್ಲಿ ಬೆಂಕಿ ಹತ್ತಿಕೊಂಡು ಇಡೀ ಮನೆ ಸುಟ್ಟಿದೆ.
- ಮನೆಯ ವಸ್ತುಗಳು ಶೇ. 80 ರಷ್ಟು ಹಾನಿಗೊಳಗಾಗಿವೆ.
- ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು (Bengaluru): ಫ್ರಿಡ್ಜ್ (Refrigerator) ನಲ್ಲಿ ಬೆಂಕಿ ಕಾಣಿಸಿಕೊಂಡು, ಕಾಡುಗೋಡಿ ಮುಖ್ಯರಸ್ತೆಯಲ್ಲಿರುವ ಒಂದು ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇಂದು (ಫೆಬ್ರವರಿ 3) ಮಧ್ಯಾಹ್ನ 1.30 ರ ಸುಮಾರಿಗೆ ಮನೆಯ ಫ್ರಿಡ್ಜ್‌ನಿಂದ ದಿಢೀರನೆ ಬೆಂಕಿ ಕಾಣಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ
ಸ್ಕೂಟರ್ ಸವಾರನಿಗೆ 1.61 ಲಕ್ಷ ರೂ. ದಂಡ ವಿಧಿಸಿದ ಬೆಂಗಳೂರು ಪೊಲೀಸ್
ಮನೆಯಲ್ಲಿದ್ದರು ಬೆಂಕಿ ನಂದಿಸಲು ತಕ್ಷಣ ಪ್ರಯತ್ನಿಸಿದರೂ, ಅದು ನಿಯಂತ್ರಣಕ್ಕೆ ಸಿಗದೆ, ಬೆಂಕಿಯು ಮನೆಗೆ ವ್ಯಾಪಿಸಿತು, ಸ್ತಾಲಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮನೆಯ ವಸ್ತುಗಳು ಬಹು ಪ್ರಮಾಣದಲ್ಲಿ ಸುಟ್ಟುಹೋಗಿವೆ, ಆದರೆ ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಈ ಬಾರಿ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇಲ್ಲ! ಟಫ್ ನಿಯಮಗಳು
ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಮನೆ ಮಾಲೀಕರು ಎರಡು ವರ್ಷಗಳ ಹಿಂದೆ ಸೆಕೆಂಡ್ ಹ್ಯಾಂಡ್ ಫ್ರಿಡ್ಜ್ ಖರೀದಿಸಿದ್ದರೆಂದು ತಿಳಿದುಬಂದಿದೆ.
Fire in Refrigerator Burns Down Entire House