ಬೆಂಗಳೂರು ರಾಘವೇಂದ್ರ ಸನ್ನಿಧಿಯಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿಗಳು

Story Highlights

ಅತ್ತೆ ಮನೆಗೆ ಬಂದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬಸ್ಥರ ಜೊತೆ ಬೆಂಗಳೂರು ಗುರು ರಾಯರ ದರ್ಶನ ಪಡೆದರು, ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬೆಂಗಳೂರು (Bengaluru): ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ (Rishi Sunak) ದಂಪತಿ ಜಯನಗರ (Jayanagara) ಐದನೆ ಬ್ಲಾಕ್‌ನಲ್ಲಿರುವ ಶ್ರೀ ಗುರು ರಾಘವೇಂದ್ರ ಸನ್ನಿಧಿಗೆ ಭೇಟಿ ಮಾಡಿದರು. ಮಂಗಳವಾರ ಸುಧಾನಾರಾಯಣಮೂರ್ತಿ ದಂಪತಿ, ಅಳಿಯ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ ಗುರುರಾಘವೇಂದ್ರಸ್ವಾಮಿ ಮಠಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಕಾರ್ತಿಕ ಮಾಸದಲ್ಲಿ ರಾಘವೇಂದ್ರಸ್ವಾಮಿ ಮಠದಲ್ಲಿ ದೀಪಗಳನ್ನು ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಮಠದ ಹಿರಿಯ ಸಂಸ್ಥಾಪಕ ಆರ್.ಕೆ.ವದೀಂದ್ರಾಚಾರ್ಯ ಗುರು ರಾಘವೇಂದ್ರ ವಸ್ತ್ರವಿನ್ಯಾಸ ಮಾಡಿ ಆಶೀರ್ವದಿಸಿದರು. ಅದಕ್ಕೂ ಮುನ್ನ ಸುನಕ್ ದಂಪತಿಯನ್ನು ವೇದಮಂತ್ರಗಳೊಂದಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮತ್ತು ಕುಟುಂಬದೊಂದಿಗೆ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಗುರು ರಾಘವೇಂದ್ರರ ಆಶೀರ್ವಾದ ಪಡೆದರು.

ರಿಷಿ ಸುನಕ್ ಅವರು ಅಕ್ಟೋಬರ್ 2022 ರಿಂದ ಜುಲೈ 2023 ರಲ್ಲಿ ರಾಜೀನಾಮೆ ನೀಡುವವರೆಗೆ ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು, ಮೊದಲ ಬ್ರಿಟಿಷ್- ಭಾರತದ ನಾಯಕರಾಗಿ ಇತಿಹಾಸವನ್ನು ನಿರ್ಮಿಸಿದರು.

Former British PM Rishi Sunak and his wife at Raghavendra Sannidhi in Bengaluru

Related Stories