ಬೆಂಗಳೂರಿನಲ್ಲಿ ಕರ್ನಾಟಕ ಮಾಜಿ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ

Former DG And IGP OM Prakash: ನಿವೃತ್ತ ಡಿಜಿ ಓಂ ಪ್ರಕಾಶ್‌ ಅವರನ್ನು, ಪತ್ನಿ ಪಲ್ಲವಿ ಅವರೇ 8-10 ಬಾರಿ ಚಾಕು ಇರಿತದಿಂದ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಶಾಕ್ ಮಾಡುತ್ತಿದೆ.

  • ಮಾಜಿ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ
  • ಹತ್ಯೆ ಬಳಿಕ ಪತ್ನಿಯೇ ಪೊಲೀಸರಿಗೆ ಮಾಹಿತಿ ನೀಡಿದ ಅಚ್ಚರಿ
  • ಆಸ್ತಿ ವಿಚಾರದಿಂದ ಪತಿ-ಪತ್ನಿ ನಡುವಿನ ಕಲಹ

Bengaluru: ಬೆಂಗಳೂರು ನಗರದ ಹೆಚ್.ಎಸ್.ಆರ್ ಲೇಔಟ್ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ನಡೆದ ಈ ದಾರುಣ ಘಟನೆಗೆ ರಾಜ್ಯವೇ ಬೆಚ್ಚಿ ಬಿದ್ದಿದೆ. ನಿವೃತ್ತ ಡಿಜಿ ಮತ್ತು ಐಜಿಪಿಯಾಗಿ ಸೇವೆ ಸಲ್ಲಿಸಿದ್ದ ಓಂ ಪ್ರಕಾಶ್‌ (68) ಅವರನ್ನು (Former DG And IGP OM Prakash) ಅವರ ಪತ್ನಿ ಪಲ್ಲವಿಯೇ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಶಾಕ್ ಮಾಡುತ್ತಿದೆ.

ಹೆಚ್.ಎಸ್.ಆರ್ ಲೇಔಟ್‌ನ ತಮ್ಮ ನಿವಾಸದಲ್ಲಿ ಪತ್ನಿ ಪಲ್ಲವಿಯವರು ಚಾಕುವಿನಿಂದ ಎದೆ, ಹೊಟ್ಟೆ, ಕೈ ಭಾಗಕ್ಕೆ 8-10 ಬಾರಿ ಇರಿದು ಪತಿಯನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಅವರು ಸುಮಾರು 15-20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲಿ ನರಳಾಡಿದರು. ಹತ್ಯೆ ನಂತರ ಪತ್ನಿಯೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ, “I have finished monster” ಎಂದು ಮತ್ತೊಬ್ಬ ಡಿಜಿಪಿಯ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಪತ್ನಿ ಪಲ್ಲವಿಯವರ ದೂರವಾಣಿ ಸಂದೇಶಗಳು ಈಗ ತನಿಖೆಗೂ ಹೊಸ ದಿಕ್ಕು ನೀಡುತ್ತಿವೆ. ಮೂವರು ಮಕ್ಕಳ ತಾಯಿ ಪಲ್ಲವಿ, ಕೊಲೆಗೂ ಮುನ್ನ ‘ನನ್ನ ಪತಿ ಗನ್ ಹಿಡಿದು ಮಗಳಿಗೆ ಮತ್ತು ನನಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂಬ ವಾಟ್ಸಾಪ್ ಮೆಸೇಜ್ ಅನ್ನು ಐಪಿಎಸ್ ಫ್ಯಾಮಿಲಿ ಗ್ರೂಪ್ನಲ್ಲಿ ಹಂಚಿಕೊಂಡಿದ್ದರು. ಈ ಸಂದೇಶದಿಂದಲೂ ಪತ್ನಿಯ ಮನೋಸ್ಥಿತಿ ಕುರಿತು ಹಲವು ಊಹಾಪೋಹಗಳು ಮೂಡಿವೆ.

ಈ ದಂಪತಿಯ ನಡುವೆ ಆಸ್ತಿ ವಿಚಾರವಾಗಿ ಕಳೆದ ಕೆಲವು ತಿಂಗಳುಗಳಿಂದ ಗಂಭೀರ ವಿವಾದ ನಡೆಯುತ್ತಿತ್ತು. ಓಂ ಪ್ರಕಾಶ್ ಅವರು ತಮ್ಮ ಆಸ್ತಿ ಸಹೋದರಿ ಹೆಸರಿಗೆ ಮಾಡಿದ್ದರೆಂಬ ಮಾಹಿತಿಯು ಪಲ್ಲವಿಗೆ ಕಿವಿಗೆ ಬಿದ್ದ ತಕ್ಷಣದಿಂದ ಮನೆಯಲ್ಲಿನ ಶಾಂತಿ ಕಣ್ಮರೆಯಾಯಿತು.

ಅವರ ಮನೆ ಕಾವೇರಿ ಜಂಕ್ಷನ್‌ನಲ್ಲೂ ಫ್ಲಾಟ್ ಇದ್ದರೆ, ಹೆಚ್.ಎಸ್.ಆರ್ ಲೇಔಟ್‌ನ ಐಪಿಎಸ್ ಕ್ವಾಟರ್ಸ್‌ನಲ್ಲೂ ಪ್ರತ್ಯೇಕ ಮನೆ ಇತ್ತು. ಗಲಾಟೆ ಆದಾಗ ಓಂ ಪ್ರಕಾಶ್ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಇದ್ದರು.

ಪತ್ನಿ ಪಲ್ಲವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪುತ್ರಿ ಕೃತಿಯನ್ನೂ ವಿಚಾರಣೆಗಾಗಿ ಕರೆಯಲಾಗಿದೆ. ಮನೆಗೆ ಭೇಟಿ ನೀಡಿದ ಪೊಲೀಸ್ ತಂಡ, ರಕ್ತದಡಿಯಲ್ಲಿ ಪತ್ತೆಯಾದ ಓಂ ಪ್ರಕಾಶ್ ಅವರ ಶವವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಕಳಿಸಿದೆ. ಪ್ರಕರಣದ ನಿಖರವಾದ ಹಿನ್ನಲೆಗಾಗಿ ತನಿಖೆ ಮುಂದುವರಿದಿದ್ದು, ಪತ್ನಿಯ ಪಶ್ಚಾತ್ತಾಪವಿಲ್ಲದ ನಡವಳಿಕೆಯಿಂದ ಮತ್ತಷ್ಟು ಆತಂಕ ವ್ಯಕ್ತವಾಗಿದೆ.

Former DG And IGP Om Prakash Killed by Wife in Bengaluru

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories