ಮೊಬೈಲ್ ರಿಪೇರಿ ಕಲಿತು ಸ್ವಂತ ಉದ್ಯೋಗ ಮಾಡಿ; ಊಟ, ವಸತಿ ಜೊತೆ ಉಚಿತ ತರಬೇತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಿರುದ್ಯೋಗಿ ಪುರುಷರಿಗೆ ಉಚಿತ ಮೊಬೈಲ್ ರಿಪೇರಿ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಜೊತೆಗೆ ಊಟ ಮತ್ತು ವಸತಿ ಸೌಲಭ್ಯವೂ ಉಚಿತವಾಗಿ ದೊರೆಯಲಿದೆ.

  • ಉಚಿತ ಮೊಬೈಲ್ ತರಬೇತಿಗೆ ಅರ್ಜಿ ಆಹ್ವಾನ
  • ನಿರುದ್ಯೋಗಿ ಪುರುಷರಿಗೆ 31 ದಿನಗಳ ತರಬೇತಿ
  • ಸೆಲ್ ಫೋನ್ ರಿಪೇರಿ ಕಲಿಯಲು ಉತ್ತಮ ಅವಕಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (Bengaluru Rural Hoskote) ತಾಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರುದ್ಯೋಗಿ ಪುರುಷರಿಗೆ ಉಚಿತ ಸೆಲ್ ಫೋನ್ ರಿಪೇರಿ ತರಬೇತಿ (Free Mobile Repair Training) ಆಯೋಜಿಸಿದೆ. ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಈ ತರಬೇತಿ ಉತ್ತಮ ಅವಕಾಶವಾಗಲಿದೆ.

ಸೆಪ್ಟೆಂಬರ್ 7, 2026ರಿಂದ 31 ದಿನಗಳ ಕಾಲ ತರಬೇತಿ ಶಿಬಿರ ನಡೆಯಲಿದೆ. ಕರ್ನಾಟಕದ ಯಾವುದೇ ಜಿಲ್ಲೆಯ 18ರಿಂದ 49 ವರ್ಷದೊಳಗಿನ ನಿರುದ್ಯೋಗಿ ಪುರುಷರು ತರಬೇತಿಗೆ ಭಾಗವಹಿಸಬಹುದು. (Free Training)

ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ತರಬೇತಿಯ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. (BPL Candidates)

ತರಬೇತಿಗೆ ಸೇರುವವರು ಸ್ಥಳೀಯ ಭಾಷೆ ತಿಳಿದಿದ್ದು, ಕನ್ನಡ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ತರಬೇತಿ ಪೂರ್ಣಗೊಳಿಸಿದ ಬಳಿಕ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣಪತ್ರ ನೀಡಲಾಗುತ್ತದೆ. (Government Certificate)

ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 7ರಂದು ಬೆಳಗ್ಗೆ 9.30ಕ್ಕೆ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ನೇರವಾಗಿ ಹಾಜರಾಗಬೇಕು. ಈ ವೇಳೆ ವಿದ್ಯಾರ್ಹತೆ ಹಾಗೂ ವಿಳಾಸಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ತರಬೇಕು. (Self Employment)

ತರಬೇತಿ ಸ್ಥಳ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ ಅಂಚೆ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಹೆಚ್ಚಿನ ಮಾಹಿತಿಗಾಗಿ 8970476050, 9591514154, 9686248369, 6363139123, 9886935603 ದೂರವಾಣಿ ಸಂಖ್ಯೆಗಳ ಮೂಲಕ ಸಂಸ್ಥೆಯನ್ನು ಸಂಪರ್ಕಿಸಬಹುದು. ಆಸಕ್ತರು ಸಮಯಕ್ಕೆ ಸರಿಯಾಗಿ ದಾಖಲೆಗಳೊಂದಿಗೆ ಹಾಜರಾಗಿ ಈ ಉಚಿತ ತರಬೇತಿ ಅವಕಾಶವನ್ನು ಬಳಸಿಕೊಳ್ಳುವಂತೆ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories