ಬೆಂಗಳೂರು ಗ್ರಾ. ಹೊಸಕೋಟೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ! ಊಟ, ವಸತಿ ಉಚಿತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮೂಲಕ ನಿರುದ್ಯೋಗಿ ಮಹಿಳೆ ಪುರುಷರಿಗೆ ಉಚಿತ ಅಣಬೆ ಬೇಸಾಯ ತರಬೇತಿ ಜನವರಿಯಿಂದ ಆರಂಭವಾಗಲಿದೆ

  • ಉಚಿತ ಅಣಬೆ ಬೇಸಾಯ ತರಬೇತಿ, ಪುರುಷರು, ಮಹಿಳೆಯರಿಗೆ ಅವಕಾಶ
  • ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನಲ್ಲಿ 10 ದಿನಗಳ ಶಿಬಿರ
  • ತರಬೇತಿ, ಊಟ, ವಸತಿ ಉಚಿತ – ಸ್ವಯಂ ಉದ್ಯೋಗಕ್ಕೆ ಬೆಂಬಲ

Free Mushroom Cultivation Training: ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಒದಗಿಸುವ ಉದ್ದೇಶದಿಂದ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರವು ಜನವರಿ 5, 2026ರಿಂದ 10 ದಿನಗಳ ಕಾಲ ನಡೆಯಲಿದೆ.

ಯಾರು ಅರ್ಜಿ ಹಾಕಬಹುದು?

ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ 18 ರಿಂದ 50 ವರ್ಷದೊಳಗಿನ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಬಹುದು. ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದು–ಬರಹ ತಿಳಿದಿರಬೇಕು.

ಸೌಲಭ್ಯಗಳು ಮತ್ತು ಪ್ರಮಾಣ ಪತ್ರ

ತರಬೇತಿ ಅವಧಿಯಲ್ಲಿ ಭಾಗವಹಿಸುವವರಿಗೆ ತರಬೇತಿ, ಊಟ ಹಾಗೂ ವಸತಿ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಮಾನ್ಯ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

ಇದನ್ನೂ ಓದಿ: ಹವಾಮಾನ: ಕರ್ನಾಟಕದ ಹಲವೆಡೆ ಚಳಿ–ಮಂಜು, ಬೆಂಗಳೂರು ಸೇರಿ ಒಳನಾಡಿನಲ್ಲಿ ಶೀತಗಾಳಿ

ನೋಂದಣಿ ಮತ್ತು ಸಂಪರ್ಕ ಮಾಹಿತಿ

ಆಸಕ್ತ ಅಭ್ಯರ್ಥಿಗಳು ದಿನಾಂಕ 30/01/2025 (ಮಂಗಳವಾರ) ಬೆಳಿಗ್ಗೆ 10 ಗಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ (ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಇಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಹಾಜರಾಗಬಹುದು.

ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದವರು 30/01/2025ರೊಳಗೆ ದೂರವಾಣಿ ಸಂಖ್ಯೆ 8970476050, 9591514154, 9686248369, 6363139123, 9505894247ಗಳಿಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories