ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ
ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ನಿರುದ್ಯೋಗಿ ಪುರುಷ ಮಹಿಳೆಯರಿಗೆ ಉಚಿತ ಅಣಬೆ (mushroom) ಬೇಸಾಯ ತರಬೇತಿ ಶಿಬಿರವನ್ನು ಶುಕ್ರವಾರದಿಂದ 10 ದಿನಗಳ ಕಾಲ ಆಯೋಜಿಸಿದೆ.

ಬೆಂಗಳೂರು (Bengaluru): ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹೊಸಕೋಟೆ (Hoskote), ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೆಪ್ಟೆಂಬರ್ 19, 2025 ರಿಂದ 10 ದಿನಗಳ ಉಚಿತ ಅಣಬೆ (Mushroom Farming Training) ಬೇಸಾಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಈ ತರಬೇತಿ ಶಿಬಿರದಲ್ಲಿ ನಿರುದ್ಯೋಗಿ ಪುರುಷ ಮತ್ತು ಮಹಿಳೆಯರು ತಾವು ಸ್ವಯಂ ಉದ್ಯೋಗಿಯಾಗಲು ಅಗತ್ಯವಾದ ಅಣಬೆ ಬೆಳೆಸುವ ಪ್ರಾಥಮಿಕ ತಂತ್ರಜ್ಞಾನವನ್ನು ಕಲಿಯುತ್ತಾರೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು 18 ರಿಂದ 35 ವರ್ಷ ವಯಸ್ಸಿನವರು, ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಇದನ್ನೂ ಓದಿ: ಉದ್ಯೋಗಿನಿ ಯೋಜನೆ: ಮಹಿಳೆಯರ ಸ್ವ-ಉದ್ಯೋಗಕ್ಕೆ ಸಿಗಲಿದೆ ₹3 ಲಕ್ಷ ಸಾಲ ಸೌಲಭ್ಯ
ವಿಶೇಷವಾಗಿ ಬಿಪಿಎಲ್ (BPL) ಅರ್ಹತೆ ಹೊಂದಿದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ತರಬೇತಿ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು.
ಅಣಬೆ (mushroom) ಬೆಳೆಸುವ ತರಬೇತಿಯಲ್ಲಿ ಪಾಲ್ಗೊಳ್ಳಲು ಆಸಕ್ತರಾದವರು 19/09/2025 ಶುಕ್ರವಾರ ಬೆಳಗ್ಗೆ 9:00 ಗಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ನೇರವಾಗಿ ಅರ್ಹತೆ ದಾಖಲೆಗಳೊಂದಿಗೆ ಹಾಜರಾಗಬೇಕಾಗಿದೆ.
ತರಬೇತಿ ಮುಗಿದ ನಂತರ, ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಅಧಿಕೃತ ಪ್ರಮಾಣ ಪತ್ರ (certificate) ವಿತರಿಸಲಾಗುವುದು, ಇದು ಉದ್ಯೋಗಕ್ಕೆ ಸಹಾಯವಾಗುತ್ತದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಜುಲೈ, ಆಗಸ್ಟ್ ತಿಂಗಳ ಬಾಕಿ ಹಣ ಬಿಡುಗಡೆ! ಮಹಿಳೆಯರಿಗೆ ಬಂಪರ್ ಸುದ್ದಿ
ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ:
8970476050 | 9591514154 | 9686248369 | 8970446644 | 9505894247
ಈ ತರಬೇತಿ ಶಿಬಿರವು ಸ್ವಉದ್ಯೋಗಕ್ಕಾಗಿ ಶಾಶ್ವತವಾದ ದಾರಿ ನೀಡುವುದು ಹಾಗೂ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸ್ಥಿರತೆ ತರಲು ಉದ್ದೇಶಿಸಲಾಗಿದೆ. ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Free Mushroom Farming Training at Hoskote for Rural Unemployed




