ಬೆಂಗಳೂರು ಗ್ರಾಂ. ಹೊಸಕೋಟೆಯಲ್ಲಿ ಉಚಿತ ಫೋಟೋಗ್ರಫಿ–ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ
ಹೊಸಕೋಟೆಯ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಡಿಸೆಂಬರ್ 22ರಿಂದ 31 ದಿನಗಳ ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಶಿಬಿರ ಆರಂಭವಾಗುತ್ತಿದ್ದು, 18–35 ವರ್ಷದ ನಿರುದ್ಯೋಗಿ ಪುರುಷರಿಗೆ ಅವಕಾಶ.

Free Photography, Videography Training: ಉಚಿತ ಫೋಟೋಗ್ರಫಿ & ವಿಡಿಯೋಗ್ರಫಿ ತರಬೇತಿ, ಬೆಂಗಳೂರು ಗ್ರಾಮಾಂತರ ಹೊಸಕೋಟೆ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಶಿಬಿರ. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು 15 ಡಿಸೆಂಬರ್ 2025, ಸೋಮವಾರ ಬೆಳಿಗ್ಗೆ 10 ಗಂಟೆಗೆ, ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ಶಿಕ್ಷಣ ದಾಖಲೆಗಳು ಹಾಗೂ ವಿಳಾಸ ಸಾಬೀತಿನೊಂದಿಗೆ ನೇರವಾಗಿ ಹಾಜರಾಗಬೇಕೆಂದು ತಿಳಿಸಲಾಗಿದೆ.
ಹಾಜರಾಗಲು ಸಾಧ್ಯವಾಗದವರು ಇದೇ ದಿನದೊಳಗೆ ಪ್ರಕಟಣೆಯಲ್ಲಿ ನೀಡಿರುವ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ತರಬೇತಿ ಅವಧಿ – ಸಂಪೂರ್ಣ ಉಚಿತ
ಡಿಸೆಂಬರ್ 22ರಿಂದ ಆರಂಭವಾಗುವ ಈ 31 ದಿನಗಳ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಶಿಬಿರ ಸಂಪೂರ್ಣ ಉಚಿತವಾಗಿದ್ದು, ತರಬೇತಿಯ ಜೊತೆಗೆ ಊಟ ಮತ್ತು ವಸತಿ ಕೂಡ ಸಂಸ್ಥೆ ವತಿಯಿಂದ ಉಚಿತವಾಗಿ ಕಲ್ಪಿಸಲಾಗುತ್ತದೆ.
ತರಬೇತಿ ಪೂರ್ಣಗೊಂಡ ಬಳಿಕ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಮಾನ್ಯ ಪ್ರಮಾಣ ಪತ್ರ ನೀಡಲಾಗುವುದು.
ಯಾರಿಗೆ ಅವಕಾಶ?
ಸ್ವಯಂ ಉದ್ಯೋಗಿಯಾಗಿ ಬೆಳೆವ ಆಸಕ್ತಿ ಇರುವ, ಕರ್ನಾಟಕದ ಯಾವುದೇ ಜಿಲ್ಲೆಯ 18 ರಿಂದ 35 ವರ್ಷ ವಯಸ್ಸಿನ ನಿರುದ್ಯೋಗಿ ಪುರುಷರು ಈ ಶಿಬಿರಕ್ಕೆ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆ ಬಲ್ಲವರಾಗಿರಬೇಕು ಹಾಗೂ ಕನ್ನಡ ಓದಲು-ಬರೆಯಲು ತಿಳಿದಿರಬೇಕು. ಗ್ರಾಮೀಣ ಪ್ರದೇಶದ BPL ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆಯನ್ನು ಈ ಕೆಳಕಂಡ ದೂರವಾಣಿ ಸಂಖ್ಯೆ 8970476050, 9591514154, 9686248369, 9505894247 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆ ಜೊತೆ ಮೈ ನಡುಗಿಸುವ ಚಳಿ! ಬೆಂಗಳೂರು ಸೇರಿ 2 ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ಇನ್ನು ಮೂರೇ ದಿನ ಗಡುವು! ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ನಿಯಮ
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story



